ರಾಜ್ಯ ಸುದ್ದಿ
ಮುಂಡಗೋಡ: ಪಟ್ಟಣದ ಮಳಗನಕೊಪ್ಪದಲ್ಲಿರುವ ಆಶ್ರಯ ಮನೆಗೆ ಕಾಯ್ದಿರಿಸಿದ 10 ಎಕರೆ ಜಾಗವನ್ನು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಅವರು ಮಂಗಳವಾರ ಪರಿಶೀಲಿಸಿದರು. ನಂತರ ಮಿನಿ ವಿಧಾನಸೌಧ ಸಭಾಭವನದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.ಪಟ್ಟಣದಲ್ಲಿರುವ ಪೌರ ಕಾರ್ಮಿಕರ ವಸತಿ ಗೃಹ ಕಟ್ಟಡ ಕಾಮಗಾರಿಯನ್ನು ಮತ್ತು ಪೌರಕಾರ್ಮಿಕರ ಆರೋಗ್ಯವನ್ನು ವಿಚಾರಿಸಿದರು.
ತಹಶೀಲ್ದಾರ ಶ್ರೀಧರ ಮುಂದಲಮನಿ, ಪ.ಪಂ.ಮುಖ್ಯಾಧಿಕಾರಿ ಸಂಗನಬಸಯ್ಯ, ಜಿಲ್ಲಾ ನಗರಾಭಿವೃದ್ಧಿಕೋಶ ಅಧಿಕಾರಿ ಕೆ.ಎಸ್ ಕಮ್ಮಾರ, ಪ.ಪಂ ಇಂಜನಿಯರ ಶಂಕರ ದಂಡಿನ, ಕಂದಾಯ ನಿರೀಕ್ಷಕ ರಾಘವೇಂದ್ರ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
Be the first to comment