ಜಿಲ್ಲಾ ಸುದ್ದಿಗಳು
ಒತ್ತುವರಿಯಿಂದ ಮುಕ್ತಗೊಂಡ 33 ಕೆರೆಗಳ ವಿಸ್ತೀರ್ಣ 1189-02*1/2 ಎಕೆರೆ ಇದ್ದು, 18 ಕೆರೆಗಳು ವಿಸ್ತೀರ್ಣ 61-03-01 ಎಕರೆ ಒತ್ತುವರಿಯಾಗಿರುವುದು ಸರ್ವೆದಿಂದ ಕಂಡುಬಂದಿರುತ್ತದೆ. ಒತ್ತುವರಿ ಜಾಗವನ್ನು ತೆರವುಗೊಳಿಸಲು ಪ್ರಥಮ ಆದ್ಯತೆ ನೀಡಿ ಉಚ್ಛ ನ್ಯಾಯಾಲಯದ ಆದೇಶದನ್ವಯ ಒತ್ತುವರಿ ಜಾಗವನ್ನು ತೆರವುಗೊಳಿಸಲು ಉಪವಿಭಾಗಾಧಿಕಾರಿಗಳು ಸೂಚಿಸಿದರು. ಒತ್ತುವರಿಯಿಂದ ಮುಕ್ತವಾಗಿರುವ ಕೆರೆಗಳಿಗೆ ಬೇಲಿತಂತಿ, ನಾಮಫಲಕ ಅಳವಡಿಸುವ ಕುರಿತು ಕ್ರೀಯಾ ಯೋಜನೆ ತಯಾರಿಸಿ ಕ್ರಮಕೈಗೊಳ್ಳಲು ತಿಳಿಸಿದರು.
ಬಾಗಲಕೋಟೆ : ಬಾದಾಮಿ ತಾಲೂಕಿನ ಒಟ್ಟು 60 ಕೆರೆಗಳ ಪೈಕಿ 59 ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಅದರಲ್ಲಿ 33 ಕೆರೆಗಳು ಒತ್ತುವರಿಯಿಂದ ಮುಕ್ತವಾಗಿವೆ ಎಂದು ಉಪವಿಭಾಗಾಧಿಕಾರಿ ಎಂ.ಗಂಗಪ್ಪ ತಿಳಿಸಿದರು.
ಬಾದಾಮಿ ತಹಶೀಲ್ದಾರ ಕಾರ್ಯಾಲಯದಲ್ಲಿ ಇತ್ತೀಚೆಗೆ ಜರುಗಿದ ಕೆರೆಗಳ ಸಂರಕ್ಷಣೆ, ಸರ್ವೆ ಮತ್ತು ಕೆರೆಗಳ ಒತ್ತುವರಿ ತೆರವುಗೊಳಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾದಾಮಿ ತಾಲೂಕಿನಲ್ಲಿ ಒಟ್ಟು 60 ಕೆರೆಗಳ ಪೈಕಿ 59 ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಒಂದು ಕೆರೆ ಮಾತ್ರ ಬಾಕಿ ಉಳಿದಿದ್ದು, ಸಣ್ಣ ನೀರಾವರಿ ಇಲಾಖೆ ವತಿಯಿಂದ ಅಲೈನಮೆಂಟ ಮ್ಯಾಪ್, ಕೆರೆಯ ಮಾಲಿಕತ್ವದ ಪಹಣಿ ಹಾಗೂ ಭೂಸ್ವಾಧೀನವಾದ ಕ್ಷೇತ್ರದ ದಾಖಲೆಗಳು ಸಲ್ಲಿಸದೇ ಇರುವುದರಿಂದ ಆ ಒಂದು ಕೆರೆಯ ಸರ್ವೆ ಕಾರ್ಯ ಬಾಕಿ ಇರುವುದಾಗಿ ತಿಳಿಸಿದರು.
ಒತ್ತುವರಿಯಿಂದ ಮುಕ್ತಗೊಂಡ 33 ಕೆರೆಗಳ ವಿಸ್ತೀರ್ಣ 1189-02*1/2 ಎಕೆರೆ ಇದ್ದು, 18 ಕೆರೆಗಳು ವಿಸ್ತೀರ್ಣ 61-03-01 ಎಕರೆ ಒತ್ತುವರಿಯಾಗಿರುವುದು ಸರ್ವೆದಿಂದ ಕಂಡುಬಂದಿರುತ್ತದೆ. ಒತ್ತುವರಿ ಜಾಗವನ್ನು ತೆರವುಗೊಳಿಸಲು ಪ್ರಥಮ ಆದ್ಯತೆ ನೀಡಿ ಉಚ್ಛ ನ್ಯಾಯಾಲಯದ ಆದೇಶದನ್ವಯ ಒತ್ತುವರಿ ಜಾಗವನ್ನು ತೆರವುಗೊಳಿಸಲು ಉಪವಿಭಾಗಾಧಿಕಾರಿಗಳು ಸೂಚಿಸಿದರು. ಒತ್ತುವರಿಯಿಂದ ಮುಕ್ತವಾಗಿರುವ ಕೆರೆಗಳಿಗೆ ಬೇಲಿತಂತಿ, ನಾಮಫಲಕ ಅಳವಡಿಸುವ ಕುರಿತು ಕ್ರೀಯಾ ಯೋಜನೆ ತಯಾರಿಸಿ ಕ್ರಮಕೈಗೊಳ್ಳಲು ತಿಳಿಸಿದರು
ಕೆರೆಯಲ್ಲಿನ ನೀರು ಕುಡಿಯಲು ಯೋಗ್ಯ ಇರುವ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಪರೀಕ್ಷೆಗೊಳಪಡಿಸಿ ಶುದ್ಧ ನೀರು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಕೆರೆಗಳಿಗೆ ಕಲುಷಿತಗೊಂಡ ನೀರು ಸೇರದಂತೆ ನೋಡಿಕೊಳ್ಳುವುದು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿಯಾಗಿದೆ. ಮುಂದಿನ ಹಂತದಲ್ಲಿ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಕೆರೆಯ ಅಂಚಿನಿಂದ 30 ಮೀಟರ ಭಪರ್ ಝೋನ್ ಗುರುತಿಸುವುದು ಹಾಗೂ ಈ ಪ್ರದೇಶದ ಸರ್ವೆ ಕಾರ್ಯ ಕೈಗೊಳ್ಳಲು ಕ್ರಮ ಜರುಗಿಸಬೇಕು ಎಂದರು.
ಬಾದಾಮಿ ತಾಲೂಕಿನಲ್ಲಿ ಬರುವ ರಾಜ ಕಾಲುವೆಗಳನ್ನು ಗುರುತಿಸಿ ಪಟ್ಟಿ ಮಾಡಿ, ಕಾಲುವೆಗಳನ್ನು ಸರ್ವೆ ಮಾಡಿಸಿ ಒತ್ತುವರಿ ಆಗಿದ್ದಲ್ಲಿ ಅದನ್ನು ತೆರವುಗೊಳಿಸಲು ಕ್ರಮ ವಹಿಸಲು ಸೂಚಿಸಲಾಯಿತು. ಕೆರೆಗಳ ಸರ್ವೆ ಕಾರ್ಯದ ನಂತರ ಸಂಬಂಧಪಟ್ಟ ಇಲಾಖೆಗಳು ಕೆರೆಯ ಗಡಿ ಕಲ್ಲುಗಳನ್ನು ಇಟ್ಟುಕೊಂಡು ಈ ಕುರಿತು 15 ದಿನಗಳ ಒಳಗಾಗಿ ಎಲ್ಲಾ ಇಲಾಖೆಗಳು ಕ್ರಮ ವಹಿಸತಕ್ಕದ್ದು. ಕೆರೆಯ ಸಂರಕ್ಷಣೆ & ಒತ್ತುವರಿ ತೆರವುಗೊಳಿಸಲು ತಾಲೂಕ ಮಟ್ಟದಲ್ಲಿ ಹಾಗೂ ಗ್ರಾಮ ಮಟ್ಟದಲ್ಲಿ ಸಮಿತಿಯನ್ನು ರಚಿಸಿ ಪ್ರತಿ ತಿಂಗಳು ಸಭೆ ನಡೆಸಿ, ಸಮಗ್ರ ಕೆರೆ ಅಭಿವೃದ್ಧಿಗೆ ಕ್ರೀಯಾ ಯೋಜನೆ ತಯಾರಿಸಲು ತಿಳಿಸಿದರು.
ತಾಲೂಕಿನಲ್ಲಿ ಕೋವಿಡ್ ಲಸಿಕೆ ವಿತರಣೆ ಮತ್ತು ಪ್ರವಾಹ ನಿಯಂತ್ರಣಕ್ಕೆ ಕೈಗೊಂಡ ಸಿದ್ದತೆಯ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ತಹಶೀಲ್ದಾರ ಸುಭಾಷ ಇಂಗಳೆ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕಲಾದಗಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಸೇರಿದಂತೆ ವಲಯ ಅರಣ್ಯ ಅಧಿಕಾರಿ, ಭೂ ದಾಖಲೆ ಸಹಾಯಕ ನಿರ್ದೇಶಕ, ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ, ಬಾದಾಮಿ, ಕೆರೂರ, ಕುಳಗೇರಿಯ ಕಂದಾಯ ನಿರೀಕ್ಷಕರು ಉಪಸ್ಥಿತರಿದ್ದರು.
Be the first to comment