ರಾಜ್ಯ ಸುದ್ದಿ
ಯಲ್ಲಾಪುರ: ತಾಲೂಕಿನ ನಂದೊಳ್ಳಿ ಭಾಗದ ದೂರವಾಣಿ ಸಂಪರ್ಕ ವ್ಯವಸ್ಥೆಯನ್ನು ಕೂಡಲೇ ಬಗೆಹರಿಸಿಕೊಡಬೇಕು. ಇಲ್ಲವಾದಲ್ಲಿ ಜನಪ್ರತಿನಿಧಿಗಳು, ಗ್ರಾಮಸ್ಥರೊಂದಿಗೆ ಸೇರಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ನರಸಿಂಹ ಕೋಣೆಮನೆ ತಿಳಿಸಿದ್ದಾರೆ.
ನಂದೊಳ್ಳಿ ಭಾಗದಲ್ಲಿ ಕರೆಂಟ್ ವ್ಯತ್ಯಯ ಉಂಟಾದಾಗ ದೂರವಾಣಿ ಎಕ್ಸ್‍ಚೇಂಜ್‍ನಲ್ಲಿ ಜನರೇಟರ್ ವ್ಯವಸ್ಥೆ ಇಲ್ಲದೆ ಬಂದ್ ಆಗುತ್ತೆ. ನೆಟ್‍ವರ್ಕ ಸಮಸ್ಯೆ ಹಾಗೂ ವಿದ್ಯುತ್ ಅವ್ಯವಸ್ಥೆಯಿಂದಾಗಿ ಜನರು ಹೈರಾಣಾಗುತ್ತಿದ್ದಾರೆ. ಕೂಡಲೇ ಈ ಎರಡೂ ವ್ಯವಸ್ಥೆಗಳನ್ನು ಆಯಾ ಇಲಾಖೆಯವರು ಸರಿಮಾಡಬೇಕು. ಇಲ್ಲವಾದರೆ ಪ್ರತಿಭಟನೆ ಅನಿವಾರ್ಯ. ಇತ್ತೀಚಿನ ದಿನಗಳಲ್ಲಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕಗಳು ನಿರಂತರವಾಗಿ ವ್ಯತ್ಯಯವಾಗುತ್ತಿವೆ. ನಿತ್ಯದ ಅವಶ್ಯಕತೆಗಳಲ್ಲಿ ಪ್ರಮುಖವಾದ ಇವೆರಡೂ ಸೇವೆಗಳು ಸರಿಯಾಗಿ ಸಿಗದೇ ಜನರಿಂದ ಹಿಡಿಶಾಪಕ್ಕೆ ತುತ್ತಾಗುತ್ತಿವೆ. ವಿದ್ಯುತ್ ಹಾಗೂ ಪೆÇೀನ್ ವ್ಯವಸ್ಥೆ ಸಂಪೂರ್ಣ ಹಳ್ಳಹಿಡಿದಿದ್ದು, ಜನರು ಹೈರಾಣಾಗುವಂತಾಗಿದೆ. ನಂದೊಳ್ಳಿ ಭಾಗದಲ್ಲಿ ಈ ವ್ಯವಸ್ಥೆಗಳನ್ನು ಸರಿಪಡಿಸಬೇಕು ಎಂದು ಅನೇಕ ಬಾರಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೊಜನವಾಗಿ9ಲ್ಲ. ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಸೇರಿಕೊಂಡು, ಇಲಾಖೆಯವರ ಸಹಕಾರದಲ್ಲಿ ವಿದ್ಯುತ್ ಮಾರ್ಗಗಳ ಅಂಚಿನಲ್ಲಿ ಲೈನ್ ಕಟಿಂಗ್ ಮಾಡಲಾಗಿದೆ. ಆದರೂ ವಿದ್ಯುತ್ ಸಮಸ್ಯೆ ನಿಂತಿಲ್ಲ. ಕೂಡಲೇ ದೂರವಾಣಿ ಹಾಗೂ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
Be the first to comment