ಚೆಲುವಾದಿಪಾಳ್ಯ ವಾರ್ಡ್ ಆಮ್ಮ್ ಆದಮಿ ಪಾರ್ಟಿ ಅಧ್ಯಕ್ಷರಾದ ಶಾಹೀನ ಅವರಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳ ಚೆರಂಡಿ ಎಂಜಿನಿಯರ ಅವರಿಗೆ ಮನವಿ , ಕೂಡಲೇ ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿ ಆರಂಭಿಸಿದ ಅಧಿಕಾರಿಗಳು

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಬೆಂಗಳೂರು-ಬೆಂಗಳೂರಿನ ಚೆಲುವಾದಿಪಾಳ್ಯ ವಾರ್ಡ್ ನೋ-138 ವ್ಯಾಪ್ತಿಗೆ ಬರುವ ಹಳೆಯ ಪೆನ್ಸನ್ ಮೋಹಲ 3 ಮತ್ತು 4 ನೆ ಕ್ರಾಸ್ ರಸ್ತೆಗಳಲ್ಲಿ 6 ತಿಂಗಳ ಹಿಂದೆಯೇ ಒಳ ಚರಂಡಿ ಪೈಪ ಅಳವಡಿಸುವ ಕಾಮಗಾರಿ ಕೆಲಸ ಆರಂಭಗೊಂಡಿದ್ದು , ಆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದು , ಈ ರಸ್ತೆ ಸಂಪೂರ್ಣ ಹದಗೆಟ್ಟಿದು , ಸಾರ್ವಜನಿಕರಿಗೆ ತಿರುಗಾಡಲು ಮತ್ತು ವಾಹನ ಸಂಚಾರಕ್ಕೆ ತುಂಬಾ ಅನಾನುಕೂಲವಾಗ್ಗಿದ್ದು , ತುಂಬಾ ತೊಂದರೆ ಆಗಿದೆ. ಆದ ಕಾರಣ ಅರ್ಧಕ್ಕೆ ನಿಂತಿರುವ ಕಾಮಗಾರಿಯನ್ನು ಕೂಡಲೇ ಆರಂಭ ಮಾಡಬೇಕು ಮತ್ತು ಅತಿ ಶೀಘ್ರದ್ದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಆಮ್ಮ್ ಆದಮಿ ಪಾರ್ಟಿ (AAP) ಚೆಲುವಾದಿಪಾಳ್ಯ ವಾರ್ಡ್ ಅಧ್ಯಕ್ಷರಾದ ಶಾಹೀನ ಅವರು ಸಹಾಯಕ ಕಾರ್ಯಪಾಲಕ ಎಂಜಿನೀರ್ , ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ, ಸ್ವಲ್ಪ

ವಿಭಾಗ ಇವರಿಗೆ ಸಾರ್ವಜನಿಕರ ಪರವಾಗಿ ಪತ್ರ ಅರ್ಜಿ ನೀಡಿ ಮನವಿ ಮಾಡಿದರು. ಇವರ ಮನವಿಗೆ ಸ್ಪಂದಿಸಿ ಕೂಡಲೇ ಅಧಿಕಾರಿಗಳು ಅರ್ಧಕ್ಕೆ ನಿಂತಿರುವ ಕಾಮಗಾರಿಯನ್ನು ಆರಂಭ ಮಾಡಿದಾರೆ. ಶಾಹೀನ ಅವರ ಈ ಕಾರ್ಯಕ್ಕೆ ಚೆಲುವಾದಿಪಾಳ್ಯ ವಾರ್ಡ್ ಜನರು ಅಭಿನಂದನೆ ಸಲ್ಲಿಸಿದ್ದಾರೆ.

Be the first to comment

Leave a Reply

Your email address will not be published.


*