ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಹುನಗುಂದ ತಾಲೂಕಿನ ರಾಮಥಾಳ ಉಪವಲಯ ಅರಣ್ಯದ ನರ್ಸರಿಯಿಂದ ಪ್ರಸಕ್ತ ಸಾಲಿನಲ್ಲಿ ಸಸಿ ನೆಡಲು ಸಕಲ ಸಿದ್ಧತೆ ನಡೆಸಿದ್ದು ನರ್ಸರಿಗಳಲ್ಲಿ ಬೆಳೆಯಲಾದ ವಿವಿಧ ಜಾತಿಯ ಸಸಿಗಳನ್ನು ಇಂದು ಇಲಕಲ್ಲ ತಾಲೂಕ ಕೆಲೂರ ಗ್ರಾಮದ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಗೆ ವಿವಿಧ ಜಾತಿಯ ಸಸಿ ವಿತರಿಸುವ ಮೂಲಕ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ತಾಲೂಕಿನ ರಾಮಥಾಳ ನರ್ಸರಿಯಲ್ಲಿ ಪ್ರೌಢಶಾಲೆಗೆ ಸಸಿ ವಿತರಿಸುತ್ತ ನರ್ಸರಿ ಯಲ್ಲಿ ಬೆಳೆಸಿದ ವಿವಿಧ ಜಾತಿಯ ಸಾಗವಾನಿ, ಅಶೋಕಾ, ಲಿಂಬೆ,ಜಾಪುಳಾ, ನುಗ್ಗೆ, ಗುಲಾಬಿ, ಮಾವಿನ, ಮೇವಿನ ಮರ, ಹುಣಸೆ, ಸೇರಿದಂತೆ ಇತರ ಸಸಿಗಳನ್ನು ಉತ್ತಮವಾಗಿ ಸಂವರ್ಧನೆ ಮಾಡಲಾಗುತ್ತಿದೆ.ಅಗತ್ಯ ಮತ್ತು ಬೇಡಿಕೆ ಆಧಾರದಲ್ಲಿ ಇಲಾಖೆಯು ಈಗಾಗಲೇ ಸಸಿಗಳನ್ನು ನೆಡುವ ಸ್ಥಳ ಆಯ್ಕೆ ಮಾಡಲಾಗಿದೆ. ಅರಣ್ಯ ಭೂಮಿಯಲ್ಲಿ ಸಸಿಗಳನ್ನು ಬೆಳೆಸಲು ಯೋಜನೆ ರೂಪಿಸಿಲಾಗಿದೆ ಎಂದು ಉಪವಲಯ ಅರಣ್ಯ ಅಧಿಕಾರಿ ವಿಜಯಕುಮಾರ ಬಿ ನಾಯಕ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಕಾಂತ ದಾಸರ,ಶಿಕ್ಷಕ ಸಿದ್ದರಾಜ ಕೆಂಧೂಳಿ, ರಾಮಥಾಳ ನರ್ಸರಿಯ ಅರಣ್ಯ ರಕ್ಷಕರಾದ ಶರಣಪ್ಪ ಘಂಟಿ,ರೇಷ್ಮಾ ರಾಠೋಡ,ಈರಪ್ಪ ಶಾಂತಗೇರಿ ಮತ್ತು ಕರಿಯಪ್ಪ ಇದ್ದರು.
Be the first to comment