ಆನ್‍ಲೈನ್‍ನಲ್ಲಿಯೇ ವಿಶ್ವ ಯೋಗದಿನ ಆಚರಣೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ : ಕೋವಿಡ್ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನ 7ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆನ್‍ಲೈನ್ ಮೂಲಕವೇ ಆಚರಿಸಲಾಗುತ್ತಿದ್ದು, ಮನೆಯಿಂದಲೇ ಆನ್‍ಲೈನ್ ಮೂಲಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾ ಆಯುಷ ಅಧಿಕಾರಿ ಡಾ.ಮಲ್ಲಣ್ಣ ತೋಟದ ತಿಳಿಸಿದ್ದಾರೆ.

ಈ ವರ್ಷ ಬಿ ವಿಥ್ ಯೋಗಾ, ಬಿ ಆ್ಯಟ್ ಹೋಮ್ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಆದ್ದರಿಂದ ಯೋಗ ದಿನಾಚರಣೆ ಅಂಗವಾಗಿ ಯೋಗ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ. ಕಾಮನ್ ಯೋಗ ಪ್ರೊಟೋಕಾಲ್ ವಿಡಿಯೋಗಳನ್ನು ಯುಟ್ಯೂಬ್ ಲಿಂಕ್ http://youtube.com/watch?y=k5w4sR7Ercs ಆಯುಷ ಮಂತ್ರಾಲಯ ವೆಬ್‍ಸೈಟ್ http://main.ayush.gov.in ಫೆಸ್‍ಬುಕ್ ಹಾಗೂ ಟ್ವಿಟ್ಟರ ಲಿಂಕ್ http://www.facebook.com/moayush ಹಾಗೂ ವಾಟ್ಸ್‍ಪ್ (9449847830) ಮೂಲಕ ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾ ಆಯುಷ ಅಧಿಕಾರಿಗಳು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*