ಪ್ರಚಾರ ಬಯಸದ ಮುದ್ದೇಬಿಹಾಳ ಮತಕ್ಷೇತ್ರದ ಜನನಾಯಕರು….!!!

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು 

CHETAN KENDULI

ಅಂಬಿಗ್ ನ್ಯೂಸ್ ವಿಶೇಷ:

ದೇವರು ನೀಡಿದ್ದನ್ನು ದಾನದ ರೂಪದಲ್ಲಿ ಮರಳಿಸಬೇಕು ಎಂಬ ಮಾತಿದೆ. ಇದೇ ಕಾರ್ಯವನ್ನು ನಾವು ಮಾಡುತ್ತಿದ್ದೇವೆ. ಆಹಾರ ಕಿಟ್ ನೀಡುವ ಸಂದರ್ಭದಲ್ಲಿ ಅದನ್ನು ಪ್ರಚಾರಿಸಿದರೆ ಏನು ಲಾಬ. ನೇರವಾಗಿ ಬಡವರತ್ತ ನಡೆದು ಅವರಿಗೆ ಸಹಾಯ ಮಾಡಬೇಕು ಎಂದು ನಿರ್ಧರಿಸಿ ಈ ಕಾರ್ಯಕ್ಕೆ ಕೈ ಹಾಕಿದ್ದೇವೆ. ಇದಕ್ಕೆ ನಮ್ಮ ಗೆಳೆಯರ ಬಳಗದಿಂದ ಬಹಳಷ್ಟು ಬೆಂಬಲ ದೊರಕಿದೆ. ಕೊರೊನಾದಿಂದ ದೇಶ ಮುಕ್ತವಾಗಲಿ ಎಂಬುವುದೊಂದೆ ನಮ್ಮ ಆಸೆ.

-ಪ್ರಭುಗೌಡ ದೇಸಾಯಿ, ಮಾಜಿ ಜಿಪಂ ಉಪಾಧ್ಯಕ್ಷರು, ಮುದ್ದೇಬಿಹಾಳ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಯಾವುದೇ ಸ್ವಾರ್ಥದಾಸೆ ಇಲ್ಲದೇ ಕೊರೊನಾ 2ನೇ ಅಲೆಯಲ್ಲಿ ಸಂಕಷ್ಟದಲ್ಲಿರುವ ಬಡವರಿಗೆ, ನಿರ್ಗತಿಕರಿಗೆ ವಿವಿಧ ರೀತಿಯ ಸಹಾಯಹಸ್ತ ಚಾಚುವಲ್ಲಿ ಮಾಜಿ ವಿಯಪುರ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಜೋಡೆತ್ತಿನಂತೆ ದಾಸೋಹಿಗಳಾಗಿದ್ದಾರೆ.
ಹೌದು, ಮೊದಲಿನಿಂದಲೂ ತುಂಬು ಸ್ನೇಹದಿಂದ ಬಂದಿರುವ ದೇಸಾಯಿ ಹಾಗೂ ಪಾಟೀಲ ಅವರು ಸದಾ ಸಾರ್ವಜನಿಕರ ಸಮಸ್ಯೆಗಳಿ ಸ್ಪಂಧಿಸುತ್ತಾ ಬರುತ್ತಿದ್ದಾರೆ. ಆದರೆ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಮುದ್ದೇಬಿಹಾಳ ಕ್ಷೇತ್ರದ ಜನರು ತತ್ತರಿಸಿದ್ದನ್ನು ಕಂಡ ಇವರು ಕಳೆದ ಹಲವು ದಿನಗಳಿಂದ ಬಡವರಿಗೆ ಹಾಗೂ ನಿರ್ಗತಿಕರಿಗೆ ಮತ್ತು ಕೊರೊನಾ ವಾರಿಯರ್ಸಗಳಿಗೆ ಆಹಾರ ಕಿಟ್ ಸೇರಿದಂತೆ ಮಾಸ್ಕ ವಿತರಣೆಯನ್ನು ಮಾಡುತ್ತಿದ್ದು ಜನರ ಮನೆ ಮಾತಾಗಿದ್ದಾರೆ.

ಧಣಿಯವರು ಹಿಂದಿನಿಂದಲೂ ಬಡವರಿಗೆ ಸಹಾಯಹಸ್ತ ಚಾಚುತ್ತಲೆ ಬಂದಿದ್ದಾರೆ. ಆದರೆ ಎಂದಿಗೂ ಪ್ರಚಾರ ಗಿಟ್ಟಿಸಿಕೊಳ್ಳುವ ತವಕಕ್ಕೆ ಹೋಗಿಲ್ಲ. ಅವರು ಯಾವುದೇ ಪ್ರಚಾರವಿಲ್ಲದೇ ಮಾಡುವ ದಾನಕ್ಕೆ ಪ್ರೇರಣೆಯಾಗಿ ಪ್ರಭುಗೌಡ ದೇಸಾಯಿ ಅಭಿಮಾನಿಗಳ ಬಳಗ ಹಾಗೂ ಆರ್.ಎಸ್.ಪಾಟೀಲ ಕೂಚಬಾಳ ಅಭಿಮಾನಿಗಳ ಬಳಗದಿಂದ ಇನ್ನಿತರ ಸಣ್ಣಪುಟ್ಟ ಸಹಾಯದ ಮೂಲಕ ಕೊರೊನಾದಿಂದ ತತ್ತರಿಸಿರುವ ಬಡ ಕುಟುಂಬಗಳಿಗೆ ಸಹಾಯ ಮಾಡಲಾಗುತ್ತಿದೆ. ನಮ್ಮ ಧಣಿ ನಮ್ಮ ಹೆಮ್ಮೆ.

-ದೇವೇಂದ್ರ ವಾಲಿಕಾರ, ಪ್ರಭುಗೌಡ ದೇಸಾಯಿ ಅಭಿಮಾನಿ ಬಳಗದ ಮುಖ್ಯಸ್ಥರು, ಮುದ್ದೇಬಿಹಾಳ.


ಸದ್ದಿಲ್ಲದೇ ಸೇವಾಕಾರ್ಯ ನಡೆಸಿರುವ ದಾನಿಗಳು:
ಮುದ್ದೇಬಿಹಾಳ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ತೆರಲಿ ಅಲ್ಲಿನ ಬಡವರಿಗೆ ನಿರ್ಗತಿಕರಿಗೆ ಸಹಾಯಹಸ್ತ ಚಾಚಿರುವ ಪ್ರಭುಗೌಡ ದೇಸಾಯಿ ಹಾಗೂ ಆರ್.ಎಸ್.ಪಾಟೀಲ ಕೂಚಬಾಳ ಅವರು ಯಾವುದೇ ಪ್ರಚಾರಕ್ಕೆ ಇಳಿದಿಲ್ಲದಿರುವುದು ವಿಶೇಷ. ತಾವು ಯಾವುದೇ ಗ್ರಾಮಕ್ಕೆ ತೆರಲಿದರೂ ಗ್ರಾಮದಲ್ಲಿ ಯಾವುದೇ ರೀತಿಯ ಪ್ರಚಾರ ಕೈಗೊಳ್ಳುವುದಿಲ್ಲ. ನೇರವಾಗಿ ಬಡ ಕುಟುಂಬಕ್ಕೆ ತೆರಲಿ ಅವರಿಗೆ ಆಹಾರ ಕಿಟ್ ವಿತರಣೆ ಮಾಡಿ ನಂತರ ಮುಂದಿನ ಗ್ರಾಮದತ್ತ ಮುಖಮಾಡುತ್ತಿದ್ದಾರೆ. ಒಂದು ಕೈಯಿಂದ ನೀಡದ ದಾನ ಇನ್ನೊಂದು ಕೈಗೆ ಗೊತ್ತಾಗದಂತೆ ಇಬ್ಬರೂ ಕುಚುಕುಗಳು ತಮ್ಮ ಸೇವಾಕಾರ್ಯ ಮಾಡುತ್ತಿದ್ದಾರೆ.

Be the first to comment

Leave a Reply

Your email address will not be published.


*