ಭಾರತ ಮಾತೆ  ನಿನ್ನ ಮಡಿಲಲ್ಲಿ:: ಸಾಹಿತಿಗಳು ಮಾಣಿಕ ನೆಲಗಿ


         ಚುಟುಕು ಸಾಹಿತ್ಯ


ಚುಟುಕು ಸಾಹಿತಿಗಳು

ಮಾಣಿಕ ನೇಳಗಿ ತಾಳಮಡಗಿ

ಧರಿಸಿರುವೆ ಮಾತೆ ನಿನ್ನಯ ಮುಕುಟದಲಿ
ಧವಳ ಹಿಮಗಿರಿಗಳ ಸಾಲು ಸಾಲು
ಶೋಭಿಸುತಿವೆ ಕೊರಳಲಿ ಗಂಗೆಯ ಮುನೆಯರ ಮಾಲೆ ಓ ತಾಯಿ ಭಾರತಿ ಅಪಾರವಮ್ಮ ನಿನ್ನಯ ಲೀಲೆ

ಗಿರಿಶಿಖರಕಣಿವೆಗಳಮನೋಹರಸರಣಿ
ತೊರೆಕಾಲುವೆಸರೋವರಗಳಕಣ್ಮಣಿ
ವಿಂದ್ಯಾಸಹ್ಯಾದ್ರಿನೀಲಗಿರಿಗಳಮೆರಗುಹಚ್ಚಹಸಿರುಹೊನ್ನಸಿರಿಯಸುಂದರಸೊಬಗು

ನಿನ್ನಯ ಶ್ರೀಪಾದಾರವಿಂದಗಳ ಇಕ್ಕೆಲದಲಿ
ಶರಧಿ ಸಮುದ್ರಗಳಾದಿ ಆಗಿಹವು ಶರಣು
ಅಪರಮಿತ ಆನಂದ ಸಂತಸದ ಕಡಲಿನಲಿ
ತೇಲುತಿಹವು ನೋಡು ಅಸಂಖ್ಯ ಅಣುರೇಣು

ಅನನ್ಯ ಸಿರಿ ಸಂಪತ್ತು ಹೊತ್ತಿರುವೆ ಮಾತೆ
ಸಂಜೀವಿನಿ ಒಡಲೊಳು ಪಿಡಿದಿರುವೆ ಮಹೇತಾಯಿ ಭಾರತಾಂಬೆ ನಮ್ಮ ಜನುಮದಾತೆ ಕಂಪು ಬೀರಿ ಹರಡುತಿಹವು ನಿನ್ನಯ ತರುಲತೆ

ಪ್ರಾಣದ ಹಂಗು ತೊರೆದು ಓ ತಾಯಿ ಅವಿತಸೇವೆಯನು ನಿತ್ಯದಿ ಗೈಯುವೆವು ಪಸರಿಸುತ ಜಗದಗಲ ನಿನ್ನಯ ಕೀರುತಿ ಮಡಿಲೊಳು ಕುಸುಮಗಳ ಸುರಿಸುವೆವುವು

Be the first to comment

Leave a Reply

Your email address will not be published.


*