ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ತಾಲೂಕಿನ ಕಾಳಗಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹುಲ್ಲೂರ ತಾಂಡಾದ ನಿವಾಸಿ ಜನಪ್ರೀಯ ಯುವ ನಾಯಕರಾದ ಸಂತೋಷ ಭೀ ಚವ್ಹಾಣ ಅಭಿಮಾನಿಗಳ ಬಳಗದಿಂದ ಹಣ್ಣು,ಬಿಸ್ಕೆಟ್, ನೀರಿನ ಬಾಟಲಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗೆಳೆಯರ ಬಳಗದ ಹುಸೇನ್ ಮುಲ್ಲಾ, ಅಧಿಕಾರ ಹಣವಿದ್ದವರು ಜನಪ್ರತಿನಿಧಿಗಳು ಬಡವರಿಗೆ ದಾನ ಧರ್ಮ ಮಾಡುವುದು ಸಾಮಾನ್ಯವಾಗಿದೆ. ಆದರೆ ಯಾವುದೇ ರೀತಿಯ ಸ್ವಾರ್ಥವಿಲ್ಲದ ದಾನ ಮಾತ್ರ ಶ್ರೇಷ್ಠ ದಾನವಾಗುತ್ತದೆ ಎನ್ನುವುದು ಎಲ್ಲರೂ ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂತೋಷ ಚವ್ಹಾಣ ಅಭಿಮಾನಿಗಳ ಬಳಗದಿಂದ ನಿಸ್ವಾರ್ಥ ಸೇವೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ರಂಗನಾಥ ವೈದ್ಯ ಮಾತನಾಡಿ, ಕೊರೊನಾ ಸಂಕಷ್ಟ ಸಮಯದಲ್ಲಿ ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರಗಳ ರೋಗಿಗಳ ಸ್ಥಿತಿ ಕೇತೀರದಾಗಿದೆ. ಇಂತಹ ಸಂದರ್ಭದಲ್ಲಿ ತಾಲೂಕಿನ ವಿವಿಧ ದಾನಿಗಳು ಸಂಘ ಸಂಸ್ಥೆಯವರು ವಿವಿಧ ರೀತಿಯ ಸಾಮಗ್ರಿಗಳ ದಾನಕ್ಕೆ ಮುಂದಾಗಿರುವುದು ಶ್ಲಾಘನೀಯ ವಿಷಯವಾಗಿದೆ. ಇದರಿಂದ ರೋಗಿಗಳಿಗೆ ಸಾಕಷ್ಟು ಉಪಕಾರಿಯಾಗಲಿದೆ ಎಂದು ಅವರು ಹೇಳಿದರು.
ಈ ಸಂದರರ್ಭದಲ್ಲಿ ಮಂಜುನಾಥ ಚವ್ಹಾಣ, ರಫಿಕ್ ಜಟ್ಟಗಿ, ರಜಾಕ್ ಮುಲ್ಲಾ, ಜಾವಿದ್ ನಾಯ್ಕೋಡಿ, ಗಬ್ಬಿರಸಾಬ್ ಮುಲ್ಲಾ ಸೇರಿದಂತೆ ಸಂತೋಷ ಭೀ ಚವ್ಹಾಣ ಅಭಿಮಾನಿಗಳ ಬಳಗದವರಿದ್ದರು.
Be the first to comment