ಬಾಗಲಕೋಟೆ:(ಜಮಖಂಡಿ) ಅಡಿಹುಡಿ-ತೊದಲಬಾಗಿ ಏತ ನೀರಾವರಿ ಪಂಪ್ ಹೌಸನಿಂದ ಕಾಲುವೆಗೆ ನೀರು ಹರಿಸುವ ಮೂಲಕ ಪ್ರಾರಂಭ ಮಾಡಲಾಯಿತು.ಈ ಯೋಜನೆ ಅಡಿ ಅಂದಾಜು 4 ಸಾವಿರ ಎಕರೆ ನೀರಾವರಿ ಪ್ರದೇಶ ಹೊಂದಿದ್ದು, ರೈತರು ಕಬ್ಬು, ಜೋಳ ಸೇರಿದಂತೆ ಮತ್ತಿತರ ಬೆಳೆ ಬೆಳೆಯಲು ಅನುಕೂಲವಾಗುತ್ತದೆ.
ಅಡಿಹುಡಿ, ತೊದಲಬಾಗಿ ಭಾಗದ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಜಮಖಂಡಿ ಕ್ಷೇತ್ರದ ಶಾಸಕ ಆನಂದ ನ್ಯಾಮಗೌಡ ರೈತರಲ್ಲಿ ಮನವಿ ಮಾಡಿದರು.
ಬಿತ್ತನೆ ಬೀಜಗಳ ವಿತರಣೆ
ಇಂದು ಜಮಖಂಡಿ ನಗರದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ಸನ್ 2021-22 ನೇ ಸಾಲಿನ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರಿಗೆ ಬೇಕಾಗಿರುವ ವಿವಿಧ ಬಿತ್ತನೆ ಬೀಜಗಳಾದ ಹೆಸರು, ಉದ್ದು, ತೊಗರಿ, ಗೋವಿನ ಜೋಳ ವಿತರಣೆಯ ಕಾರ್ಯ ಪ್ರಾರಂಭ ಮಾಡಲಾಯಿತು.
Be the first to comment