ಬುಕ್ಬಡ್೯ ಹಾಗೂ ಜನಸ್ನೇಹಿ ಬ್ಯಾಂಕ್ ವತಿಯಿಂದ ಪಲಾವ್ ವಿತರಣೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಬಾಗಲಕೋಟೆ:(ಗುಡೂರ) ಕೋವಿಡ್-19 2ನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಮೇ 10 ರಿಂದ ಜೂನ್ 7 ರವರೆಗೆ ಲಾಕ್‍ಡೌನ್ ಘೋಷಣೆ ಮಾಡಿದ ಹಿನ್ನಲೆಯಲ್ಲಿ ತೀವ್ರ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರು ಹಾಗೂ ಬಡ ವರ್ಗದ ಜನರಿಗೆ ಇಲಕಲ್ಲ ತಾಲೂಕಿನ ಗುಡೂರ ಗ್ರಾಮದಲ್ಲಿ ಇಂದು ಬುಕ್ಬರ್ಡ್ ಹಾಗೂ ಜನಸ್ನೇಹಿ ಬ್ಯಾಂಕ್ ವತಿಯಿಂದ ಪಲಾವ್ ವಿತರಿಸಲಾಯಿತು.

ಕೂಲಿ ಕಾರ್ಮಿಕರು ಹಾಗೂ ಬಡ ವರ್ಗದ ಜನರು ಇದ್ದು, ಲಾಕ್‍ಡೌನ್ ಸಮಯದಲ್ಲಿ ಜನರಿಗೆ ಕೆಲಸವಿಲ್ಲದೆ ಕಷ್ಟದಲ್ಲಿದ್ದಾರೆ ಹೀಗಾಗಿ ಪಲಾವ್ ವಿತರಿಸಲಾಯಿತು.ಈ ಸಂದರ್ಭದಲ್ಲಿ ಅಧ್ಯಕ್ಷರಾದ ನರಪತ ರಾಜಪುರೋಹಿತ,ಸದಸ್ಯರಾದ ಬಸವರಾಜ ಗಾರವಾಡ,ಪ್ರವೀಣ ಜಡರಾಮಕುಂಟಿ,ಚಾಂದಸಾಬ ಸುತಗುಂಡಾರ, ಯಮನಪ್ಪ ಹೂಲಿ ಉಪಸ್ಥಿತರಿದ್ದರು.

ಇದೆ ವೇಳೆ ಗುಡೂರ sc ಗ್ರಾಮದಲ್ಲಿ ದ್ವಿಚಕ್ರ ವಾಹನದಲ್ಲಿ ಅನಗತ್ಯವಾಗಿ ಸಂಚರಿಸುವ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸಿದರು.

Be the first to comment

Leave a Reply

Your email address will not be published.


*