ಅರ್ಜಿ ಸಲ್ಲಿಸಿದವರಿಗೂ ಕೂಡಾ ಪಡಿತರ ವಿತರಣೆ:ಪಡಿತರ ವಿತರಣೆಯಲ್ಲಿ ಲೋಪ ಕಂಡಲ್ಲಿ ದೂರು ಸಲ್ಲಿಸಿ : ಡಿಸಿ ರಾಜೇಂದ್ರ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಬಾಗಲಕೋಟೆ : ಕೋವಿಡ್-19 ಹಿನ್ನೆಲೆಯಲ್ಲಿ ಎನ್‍ಎಫ್‍ಎಸ್‍ಎ ಮತ್ತು ಪಿಎಂಜಿಕೆಎವೈ ಈ ಎರಡು ಯೋಜನೆಯಡಿ ಆಹಾರಧಾನ್ಯ ಬಿಡುಗಡೆ ಆಗಿದ್ದು, ನ್ಯಾಯಬೆಲೆ ಅಂಗಡಿ ಕಾರರು ವಿತರಣೆಯಾಗುವ ಆಹಾರಧಾನ್ಯವನ್ನು ಕಡಿಮೆ ಪ್ರಮಾಣದಲ್ಲಿ ವಿತರಿಸುತ್ತಿರುವುದು ಕಂಡುಬಂದಲ್ಲಿ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಅಂತ್ಯೋದಯ ಎಎವೈ ಪಡಿತರ ಚೀಟಿಗೆ ಎಫ್‍ಎಸ್‍ಎದಡಿ ಪ್ರತಿ ಪಡಿತರ ಚೀಟಿಗೆ 35 ಕೆಜಿ ಅಕ್ಕಿ, ಪಿಎಂಜಿಕೆಎವೈ ಪ್ರತಿ ಯುನಿಟ್‍ಗೆ 5 ಕೆಜಿ ಅಕ್ಕಿ, ಬಿಪಿಎಲ್ ಚೀಟಿದಾರರಿಗೆ ಎಫ್‍ಎಸ್‍ಎದಡಿ ಪ್ರತಿ ಯುನಿಟ್‍ಗೆ 5 ಕೆಜಿ ಅಕ್ಕಿ, 2 ಕೆಜಿ ಗೋದಿ, ಪಿಎಂಜಿಕೆಎವೈ ಪ್ರತಿ ಯುನಿಟ್‍ಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ. ಎಪಿಎಲ್ ಪಡಿತರದಾರರಿಗೆ ಏಕ ಸದಸ್ಯತ್ವಕ್ಕೆ ಪ್ರತಿ ಕೆಜಿ 15 ರೂ.ಗಳಂತೆ 5 ಕೆಜಿ ಅಕ್ಕಿ, ಎರಡು ಮತ್ತು ಹೆಚ್ಚಿನ ಸದಸ್ಯರಿರುವ ಪಡಿತರದಾರರಿಗೆ 10 ಕೆಜಿ ಅಕ್ಕಿ ನೀಡಲಾಗುತ್ತದೆ. ಅಲ್ಲದೇ ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೂ 1 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತದೆ. ಎಪಿಎಲ್‍ಗೆ ಅರ್ಜಿ ಸಲ್ಲಿಸಿದವರಿಗೂ ರಿಯಾಯಿತಿ ದರದಲ್ಲಿ ಅಕ್ಕಿ ವಿತರಿಸಲಾಗುತ್ತಿದೆ.
ಎನ್‍ಎಫ್‍ಎಸ್‍ಎ ಮತ್ತು ಪಿಎಂಜಿಕೆಎವೈ ಈ ಎರಡು ಯೋಜನೆಯಡಿ ನ್ಯಾಯಬೆಲೆ ಅಂಗಡಿ ಕಾರರು ವಿತರಣೆಯಾಗುವ ಆಹಾರಧಾನ್ಯವನ್ನು ಕಡಿಮೆ ಪ್ರಮಾಣದಲ್ಲಿ ನೀಡಿದ್ದು ಕಂಡುಬಂದಲ್ಲಿ ಸಾರ್ವಜನಿಕರು ದೂರು ಸಲ್ಲಿಸಿದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಪಡಿತರವನ್ನು ಮೇ ತಿಂಗಳ ಅಂತ್ಯದವರೆಗೆ ಪಡೆಯಬಹುದಾಗಿದೆ. ಪಡಿತರ ಪಡೆಯಲು ಬರುವ ಸದಸ್ಯರು ಕಡ್ಡಾಯವಾಗಿ ಮಾಸ್ಕ ಧರಿಸಬೇಕು ಹಾಗೂ ಸರದಿ ಸಾಲಿನಲ್ಲಿ ನಿಂತಾಗ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


ಪಡಿತರ ವಿತರಣೆಯಲ್ಲಿ ಲೋಪ ಕಂಡಲ್ಲಿ ಕರೆ ಮಾಡಿ

ಬಾಗಲಕೋಟ ತಾಲೂಕ ಆಹಾರ ಶಿರಸ್ತೇದರ (9739051861), ಆಹಾರ ನಿರೀಕ್ಷಕರು (9986099776, 9901810648, 8105679274) ಬದಾಮಿ ತಾಲೂಕು ಆಹಾರ ಶಿರಸ್ತೇದಾರ (9448399879), ಆಹಾರ ನಿರೀಕ್ಷಕರು (9448556194, 9591402768) ಬೀಳಗಿ ತಾಲೂಕು ಆಹಾರ ಶಿರಸ್ತೇದಾರರು (9449524877) ಆಹಾರ ನಿರೀಕ್ಷಕರು (9900972100) ಹುನಗುಂದ ತಾಲೂಕು ಆಹಾರ ಶಿರಸ್ತೇದಾರರು (9591249653) ಆಹಾರ ನಿರೀಕ್ಷಕರು (7619553407) ಜಮಖಂಡಿ ತಾಲೂಕು ಆಹಾರ ಶಿರಸ್ತೇದಾರರು (ಪ್ರ ) (9449530023) ಮುಧೋಳ್ ತಾಲೂಕು ಆಹಾರ ಶಿರಸ್ತೇದಾರರು (ನಿ) (9449524877) ಆಹಾರ ನಿರೀಕ್ಷಕರು (9986896628, 8861852302) ಇಲಕಲ್ ತಾಲ್ಲೂಕು ಆಹಾರ ನಿರೀಕ್ಷಕರು (8105578229) ಗುಳೇದಗುಡ್ಡ ತಾಲೂಕು ಆಹಾರ ನಿರೀಕ್ಷಕರು (9916268676) ರಬಕವಿ ಬನಹಟ್ಟಿ ತಾಲೂಕು ಆಹಾರ ನಿರೀಕ್ಷಕರು( 9980300759) ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆಹಾರ ಶಾಖೆ (08354-235094)ಗೆ ಕರೆ ಮಾಡಬಹುದಾಗಿದೆ.


Be the first to comment

Leave a Reply

Your email address will not be published.


*