ಜಿಲ್ಲೆಗೆ 17 ಕೆ.ಎಲ್ ಆಕ್ಸಿಜನ್ ಪೂರೈಕೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:

CHETAN KENDULI

ಜಿಲ್ಲೆಯ ಸರಕಾರ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರಿಗೆ ಪ್ರತಿದಿನ 20 ಕೆಎಲ್ ಆಕ್ಸಿಜನ್ ಅವಶ್ಯಕತೆ ಇದ್ದು, 17 ಕೆ.ಎಲ್ ಆಕ್ಸಿಜನ್ ಸರಬರಾಜು ಆಗುತ್ತಿದೆ. ಬಾಗಲಕೋಟೆಯ ಎಚ್.ಎಸ್.ಕಂಠಿ, ಸಿಗಿಕೇರಿಯ ಇಂಡಸ್ಟ್ರೀಯಲ್ ಗ್ಯಾಸಿಸ್ ಪ್ರಾವೆಟ್ ಲಿಮಿಟೆಡ್‍ನವರು ಪೂರೈಸುತ್ತಿದ್ದಾರೆ. 313 ಆಕ್ಸಿಜನ್ ಸಿಲೆಂಡರ್, 83 ರೆಮಿಡಿಸಿವರ್ ಚುಚ್ಚು ಮದ್ದು, 1265 ಪಿಪಿ ಕಿಟ್, 8236 ಎನ್-95 ಮಾಸ್ಕ ಲಭ್ಯವಿರುತ್ತವೆ. ಆಕ್ಸಿಜನ್ ಕೊರತೆ ಉಂಟಾಗದಂತೆ ನ್ಯಾಯೋಜಿತವಾಗಿ ಆಕ್ಸಿಜನ್ ಸಿಲಿಂಡರಗಳ ಬಳಕೆಗೆ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ ಜಿಲ್ಲೆಯಲ್ಲಿ ಕೋವಿಡ್ ನಿಯಮ ಉಲ್ಲಂಘದಡಿ 76.14 ಲಕ್ಷ ದಂಡ ವಿಧಿಸಲಾಗಿದೆ. ಮದುವೆ, ಸಮಾರಂಭಗಳಿಗೆ ಸಂಬಂಧಿಸಿದಂತೆ 28 ಪ್ರಕರಣ ದಾಖಲಿಸಲಾಗಿದೆ. ಕಳೆದ ಮೂರು ದಿನಗಳಲ್ಲಿ ಲಾಕ್‍ಡೌನ್ ಅವಧಿಯಲ್ಲಿ ಅನಾವಶ್ಯಕವಾಗಿ ತಿರುಗಾಡುತ್ತಿದ್ದ 1346 ವಾಹನಗಳನ್ನು ಜಪ್ತ ಮಾಡಲಾಗಿದೆ. ಕೋವಿಡ್ ಎರಡನೇ ಅಲೆಯಲ್ಲಿ ಒಟ್ಟು 109 ಜನ ಪೊಲೀಸ್ ಸಿಬ್ಬಂದಿಗಳಿಗೆ ಕೊವಿಡ್ ಪಾಜಿಟಿವ್ ದೃಡಪಟ್ಟಿದ್ದು, ಅದರಲ್ಲಿ 29 ಜನ ಚಿಕಿತ್ಸೆಯಿಂದ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. 26 ಜನ ಕ್ವಾರಂಟೈನ್‍ನಲ್ಲಿದ್ದು, ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್‍ಗೆ 3 ಜನ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


ಮೇ 14 ಶುಕ್ರವಾರದಂದು ಆಚರಿಸಲ್ಪಡುವ ರಂಜಾನ್ ಮತ್ತು ಬಸವ ಜಯಂತಿ ಆಚರಣೆಗೆ ಆಯುದೇ ರೀತಿಯ ವಿನಾಯಿತಿ ಇರುವದಿಲ್ಲ. ಮನೆಯಲ್ಲಿಯೇ ಭಕ್ತಿಪೂರ್ವಕವಾಗಿ ಹಬ್ಬ ಆಚರಿಸುವಂತೆ ಸಾರ್ವಜನಿಕರಲ್ಲಿ ಮನವಿ.
ಲೋಕೇಶ ಜಗಲಾಸರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ


Be the first to comment

Leave a Reply

Your email address will not be published.


*