ಕುಮಾರೇಶ್ವರ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್‍ಗಳ ಸಂಖ್ಯೆ ಹೆಚ್ಚಳ:ಜಿಲ್ಲೆಯಲ್ಲಿ 20 ಕೆ.ಎಲ್ ಆಕ್ಸಿಜನ್ ಸಂಗ್ರಹ : ಡಿಸಿಎಂ ಕಾರಜೋಳ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:

ಕೊರೊನಾ ಎರಡನೇ ಅಲೇಯಿಂದ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಗೆ ಮೂರು ದಿನಗಳಿಗೆ ಆಗುವಷ್ಟು ಅಗತ್ಯವಿರುವ 20 ಕೆ.ಎಲ್ ಆಕ್ಸಿಜನ್ ಸಂಗ್ರಹಿಸಿ ಇಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತು ವಿವಿಧ ಅಧಿಕಾರಿಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಗೆ ಈಗಾಗಲೇ 15 ಕೆ.ಎಲ್ ಆಕ್ಸಿಜನ್ ಬಂದಿದ್ದು, ಹೆಚ್ಚುವರಿಯಾಗಿ ಇನ್ನು 15 ಕೆ.ಎಲ್ ಆಕ್ಸಿಜನ್ ಬರಲಿದೆ. ಜಿಲ್ಲೆಯ ಸಿಮೆಂಟ್ ಕಾರ್ಖಾನೆಗಳವರು ಆಕ್ಸಿಜನ್ ಸಿಲೆಂಡರ್‍ಗಳನ್ನು ನೀಡುತ್ತಿದ್ದಾರೆ. ಅಲ್ಲದೇ ಎಂ.ಎಸ್.ಪಿ.ಎಲ್ ಅವರಿಂದ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆ ಸೇರಿ ಒಟ್ಟು 80 ಜಂಬೂ ಸಿಲೆಂಡರ್‍ಗಳನ್ನು ಪ್ರತಿ ದಿನ ನೀಡಲು ಒಪ್ಪಿರುವುದಾಗಿ ಕಾರಜೋಳ ತಿಳಿಸಿದರು.

ಜಿಲ್ಲೆಯ ಬಾದಾಮಿ, ಹುನಗುಂದ ಹಾಗೂ ಗುಳೇದಗುಡ್ಡ ತಾಲೂಕುಗಳಲ್ಲಿ 3570 ವಲಸೆ ಕಾರ್ಮಿಕರು ಆಗಮಿಸಿದ್ದು, ಅವರಿಗೆಲ್ಲ ಔಷಧ ಕಿಟ್ ನೀಡಲಾಗಿದೆ. 2700 ಕಾರ್ಮಿಕರಿಗೆ ಜಾಬ್ ಕಾರ್ಡ ನೀಡಲಾಗಿದೆ. ಅಲ್ಲದೇ ಉದ್ಯೋಗ ಖಾತ್ರಿಯಡಿ ಉದ್ಯೋಗ ಸಹ ನೀಡಲಾಗುತ್ತಿದೆ. ಪ್ರತಿ ತಾಲೂಕಿಗೆ ಒಂದರಂತೆ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, ಹೋಮ್ ಕ್ವಾರಂಟೈನ್‍ಗೆ ಬಳಕೆ ಮಾಡಲು ತಿಳಿಸಿದರು. ಸಣ್ಣ ಕುಟುಂಬದಲ್ಲಿ ಒಂದೇ ಶೌಚಾಲಯ, ಸ್ನಾನ ಗೃಹ ಹೊಂದಿದವರ ಮನೆಯಲ್ಲಿ ಕೋವಿಡ್ ಪ್ರಕರಣ ಪತ್ತೆಯಾದಲ್ಲಿ ಅಂತವರನ್ನು ಸಿಸಿಸಿ ಕೇಂದ್ರಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡುವಂತೆ ಸೂಚಿಸಿದರು.

Be the first to comment

Leave a Reply

Your email address will not be published.


*