ಬ್ರೇಕಿಂಗ್! ಕರಾವಳಿಗೆ ಸಿಹಿ ಸುದ್ದಿ ನೀಡಿದ ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ


        ರಾಜ್ಯದ ಸುದ್ದಿಗಳು


ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿರುವಂತಹ ಬಿ‌.ಎಸ್ ಯಡಿಯೂರಪ್ಪನವರು ಇಂದು ಸದನದಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸಿದ್ದಾರೆ. ಇದರ ಬೆನ್ನಲ್ಲಿಯೇ ಇಂದು ನಡೆದಂತಹ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.

ರಾಜ್ಯದ ಕರಾವಳಿ ಭಾಗದ ಮೀನುಗಾರರಿಗೆ ಸಿಹಿ ಸುದ್ದಿಯನ್ನು ಯಡಿಯೂರಪ್ಪನವರು ಇಂದು ನೀಡಿದ್ದಾರೆ. ಕರಾವಳಿ ಭಾಗದ ಮೀನುಗಾರರ 60 ಕೋಟಿ ಸಾಲವನ್ನು ಮನ್ನಾ ಮಾಡಿ ಯಡಿಯೂರಪ್ಪನವರು ಘೊಷಿಸಿದ್ದಾರೆ. ಆ ಮೂಲಕ ಕರಾವಳಿಯ ಮೀನುಗಾರರ ಸಂಕಷ್ಟಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. 2017-18, 2018-19 ಸಾಲಿನಲ್ಲಿ ಸಾಲ ಪಡೆದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಟ್ಟು 23,507 ಮೀನುಗಾರರ 60 ಕೋಟಿ ರೂಪಾಯಿ ಸಾಲಮನ್ನಾ ಆಗಿದ್ದು ಅವರೆಲ್ಲ ಸಾಲದ ಹೊರೆಯ ಭಾರ ಇಳಿಸಿಕೊಂಡಿದ್ದಾರೆ.

ಮೀನುಗಾರರ ವಾಣಿಜ್ಯ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳಲ್ಲಿನ 50 ಸಾವಿರ ರೂಪಾಯಿವರೆಗಿನ ಸಾಲಮನ್ನಾ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡ ನಂತರ ಮೂರೇ ದಿನದಲ್ಲಿ ಹೊರಬೀಳುತ್ತಿರುವ ಮೂರನೇ ಪ್ರಮುಖ ನಿರ್ಧಾರ ಇದಾಗಿದೆ.

ರಾಜ್ಯದ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿಯಲ್ಲಿ ನಾಲ್ಕು ಸಾವಿರ ಹೆಚ್ಚುವರಿ ಹಣವನ್ನು ಮೊನ್ನೆ ಯಡಿಯೂರಪ್ಪನವರು ಘೋಷಿಸಿದ್ದರು. ಆ ನಂತರ ನೇಕಾರರ 100 ಕೋಟಿ ಸಾಲ ಮನ್ನಾವನ್ನು ಮಾಡುವುದಾಗಿ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ದಿನವೇ ಯಡಿಯೂರಪ್ಪನವರು ಘೋಷಿಸಿದ್ದರು..

Be the first to comment

Leave a Reply

Your email address will not be published.


*