ಬಾಗಲಕೋಟೆ:
ಕೊರೊನಾ ಸೊಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರದ ಆದೇಶದಂತೆ ವಾರಾಂತ್ಯದ ಕರ್ಫ್ಯೂ ಅನುಷ್ಠಾನಗೊಳಿಸಿದ್ದು ಇದರ ಯಶಸ್ವಿಗಾಗಿ ಇಳಕಲ್ಲ ತಾಲೂಕಿನ ಕೆಲೂರ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ಹಾಗೂ ಸರ್ವ ಸದಸ್ಯರ ಮಾರ್ಗದರ್ಶನದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಪಿ.ಬಿ.ಮುಳ್ಳೂರ ಕಾರ್ಯಪಡೆ ರಚನೆ ಮಾಡಿದರು.
ಈ ಕಾರ್ಯಪಡೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ,ಬೀದಿಗಳಲ್ಲಿ ಸುತ್ತಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತ ಅಂಗಡಿ ಮುಗ್ಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಸುವಲ್ಲಿ ಯಶಸ್ವಿಯಾಯಿತು.ಕಾರ್ಯಪಡೆಯ ಸದಸ್ಯರಾಗಿ ಗ್ರಾಮ ಪಂಚಾಯತಿಯ ಕಾರ್ಯರ್ಶಿ ಹೆಚ್.ಎಸ್. ಮಿಟ್ಟಲಕೋಡ, ಕರಣಿಕ ರಂಗಪ್ಪ ತಳವಾರ, ಸಿಪಾಯಿ ಸಂಗಪ್ಪ ಚಲವಾದಿ,ವಾಟರ್ ಮ್ಯಾನ್ ಸಂಗಪ್ಪ, ಕಂದಾಯ ಇಲಾಖೆಯ ಸಿಬ್ಬಂದಿ ಬಸಪ್ಪ ಶಿರಬಡಗಿ ಉಪಸ್ಥಿತರಿದ್ದರು.
Be the first to comment