ಭಟ್ಕಳದ ಗುರುಕೃಪಾ ಸಹಕಾರಿ ಪತ್ತಿನ ಸಂಘ ಕ್ಕೆ ಕಳೆದ ವರ್ಷ 19.76 ಲಕ್ಷ ಲಾಭ- ಅಧ್ಯಕ್ಷ ಮೋಹನ ನಾಯ್ಕ

ವರದಿ ಜೀವೋತ್ತಮ್ ಪೈ , ಭಟ್ಕಳ್

ಜಿಲ್ಲಾ ಸುದ್ದಿಗಳು 

ಭಟ್ಕಳ

ಕೋವಿಡ್ ಸಂಕಷ್ಟದ ನಡುವೆಯೂ ಗುರುಕೃಪಾ ಸಹಕಾರಿ ಪತ್ತಿನ ಸಂಘ ಕಳೆದ ಸಾಲಿನಲ್ಲಿ 19.76 ಲಕ್ಷ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಮೋಹನ ನಾಯ್ಕ ಹೇಳಿದರು.ಅವರು ಶನಿವಾರ ಪಟ್ಟಣದ ಗೋಪಾಲಕೃಷ್ಣ ಸಭಾಭವನದಲ್ಲಿ ನಡೆದ ಷೇರುದಾರರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಕೋವಿಡ್ ಆರ್ಥಿಕ ಹೊಡೆತದ ನಡುವೆಯೂ ಬ್ಯಾಂಕ್ ಗ್ರಾಹಕರಿಗೆ ಶೇಕಡಾ 6 ರಷ್ಟು ಲಾಭಾಂಶ ಘೋಷಣೆ ಮಾಡಿದೆ. ಬ್ಯಾಂಕಿನಲ್ಲಿ 28 ಕೋಟಿ ದುಡಿಯುವ ಬಂಡವಾಳ ಇದ್ದು ಆರ್ಥಿಕವಾಗಿ ಸದೃಢವಾಗಿದೆ. ಕಳೆದ ವರ್ಷದ ಅಂತ್ಯಕ್ಕೆ 23.72ಕೋಟಿ ಠೇವಣಿ ಸಂಗ್ರಹಿಸಿದ್ದು, 18.34 ಕೋಟಿ ಸಾಲಗಳನ್ನು ನೀಡಲಾಗಿದೆ ಎಂದರು.

CHETAN KENDULI

ಬ್ಯಾಂಕಿನಿಂದ ಸಾಲ ಪಡೆದ ಗ್ರಾಹಕರು ಸಕಾಲದಲ್ಲಿ ಸಾಲ ಮರುಪಾವತಿಸಿ ಬ್ಯಾಂಕಿನ ಪ್ರಗತಿಗೆ ಸಹಕರಿಸುವಂತೆ ಕೋರಿದರು. ಬ್ಯಾಂಕಿನ್ ಬಸ್ತಿ ಹಾಗೂ ಬೈಲೂರು ಶಾಖೆ ಉತ್ತಮ ರೀತಿಯಲ್ಲಿ ವ್ಯವಹಾರನಡೆಯುತ್ತಿದ್ದು ಗ್ರಾಹಕರು ಇನ್ನೂ ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು.

ಸಭೆಯಲ್ಲಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ವಾಸುದೇವ ನಾಯ್ಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ನಾರಾಯಣ ನಾಯ್ಕ, ನಿರ್ದೇಶಕರಾದ ವೆಂಕಟೇಶ ನಾಯ್ಕ, ಸುರೇಶ ನಾಯ್ಕ, ರಾಜೇಶ ನಾಯ್ಕ, ಕುಮಾರ ನಾಯ್ಕ, ಹರೀಶ ನಾಯ್ಕ, ಶಬರೀಶ ನಾಯ್ಕ, ಸತೀಶ ನಾಯ್ಕ, ಸುರೇಶ ಮೊಗೇರ, ಜಯಂತ ಗೊಂಡ, ವಿಜಯಾ ನಾಯ್ಕ ಹಾಗೂ ಭಾರತಿ ನಾಯ್ಕ ಸಭೆಯಲ್ಲಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*