ಸಾರಿಗೆ ಅಧಿಕಾರಿಗಳಿಂದ ಟಿಕೇಟ್ ಮಶಿನಗಳ ದುರಪಯೋಗ

ಅಂಬಿಗ್ ನ್ಯೂಸ್

ರಾಜ್ಯ ಸುದ್ದಿಗಳು

CHETAN KENDULI

 

ಗೋಕಾಕ :

ತಮ್ಮ ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಸುಮಾರು 8 ದಿನಗಳಿಂದ ಮುಷ್ಕರ ಮಾಡುತ್ತಿರುವ ಸಾರಿಗೆ ಸಂಸ್ಥೆಯ ನೌಕರರು ಒಂದು ಕಡೆಯಾದರೆ ಗೋಕಾಕ ಡಿಪೋದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ನಿರ್ವಾಹಕರ ಹೆಸರಿನಲ್ಲಿರುವ ಟಿಕೇಟ್ ಎಟಿಎಮ್ ಮಶಿನಗಳನ್ನು ತಾವೆ ಉಪಯೋಗಿಸುತ್ತಿದ್ದಾರೆ.



ಒಬ್ಬರ ಹೆಸರಿನ ಮೇಲಿರುವ ಟಿಕೇಟ್ ಎಟಿಎಮ್ ಮಶಿನಗಳನ್ನು ಇನ್ನೊಬ್ಬರು ಉಪಯೋಗಿಸುವುದು ಅಪರಾಧ ಎಂದು ಗೊತ್ತಿದ್ದರೂ ಸಹ ಇಲ್ಲಿನ ಚೌಹ್ವಾಣ ಅನ್ನುವ ಅಧಿಕಾರಿ ಬೇರೆ ನಿರ್ವಾಹಕನ ಹೆಸರಿನ ಮೇಲಿರುವ ಮಶಿನನ್ನು ಉಪಯೋಗಿಸುತಿದ್ದಾನೆ.



ಅದಲ್ಲದೆ ಮುಷ್ಕರದಿಂದ ಗೋಕಾಕ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ಸುಗಳು ಕಾಣದೆ ಈಗ ಖಾಸಗಿ ವಹಾನಗಳ ನಿಲ್ದಾಣವಾಗಿದೆ.



ಅದಷ್ಟೆ ಅಲ್ಲದೆ ಟಿಕೇಟ್ ಮಶಿನಗೆ ಸಂಬಂದಿಸದಂತೆ ಮಾಹಿತಿ ಪಡೆಯಲು ಗೋಕಾಕ ಡಿಪೋ ಮ್ಯಾನೆಜರ ಹತ್ತಿರ ಹೋದರೆ ಅಲ್ಲಿನ ಸಿಬ್ಬಂದಿಗಳು ಹೊರಗಡೆ ಹೊಗಿದ್ದಾರೆಂದು ಉಡಾಪೆ ಉತ್ತರ ನಿಡುತ್ತಿರುವದನ್ನು ನೋಡಿದರೆ ಮಶಿನಗಳನ್ನು ಬೇರೆಯವರಿಗೆ ಇವರೆ ನೀಡಿದ್ದಾರೆಂದು ಮೆಲ್ನೋಟಕ್ಕೆ ಕಂಡು ಬಂದಿದೆ.

Be the first to comment

Leave a Reply

Your email address will not be published.


*