ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಡಾ.ಬಾಬು ಜಗಜೀವನರಾಮ ಅವರ 114ನೇ ಜಯಂತ್ಯೋತ್ಸವವನ್ನು ಪಟ್ಟಣದ ಆಲಮಟ್ಟಿ ವೃತ್ತದಲ್ಲಿರುವ ವೃತ್ತಕ್ಕೆ ಪೂಜೆ ಸಲ್ಲಿಸಿದ ನಂತರ ತಹಸೀಲ್ದಾರ ಕಛೇರಿಯಲ್ಲಿ ಸೋಮವಾರ ಸರಳ ರೀತಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿಎಸ್‌ಎಸ್ ಮುಖಂಡ ಹರೀಶ ನಾಟಿಕಾರ, ಜಗಜೀವನರಾಮ ಅವರು ದೇಶ ಕಂಡ ಪ್ರಥಮ ದಲಿತ ಉಪ ಪ್ರಧಾನಿ. ಅಲ್ಲದೇ ದೇಶದಲ್ಲಿ ಹಸಿರು ಕ್ರಾಂತಿ ಹುಟ್ಟುಹಾಕಿದ ಮೊದಲ ಪ್ರಧಾನಿಯಾಗಿದ್ದಾರೆ. ಇಂತಹ ವ್ಯಕ್ತಿಯ ತತ್ವ ಆದರ್ಶಗಳಲ್ಲಿ ಇಂದಿನ ಯುವ ಪೀಳಿಗೆಯವರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಡಿಎಸ್‌ಎಸ್ ರಾಜ್ಯ ಸಂಚಾಲಕ ಡಿ.ಬಿ.ಮೂದೂರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮೇಶ ಜಾಧವ ಮಾತನಾಡಿದರು. ಪುರಸಭೆ ಅಧ್ಯಕ್ಷ ಪ್ರತಿಭಾ ಅಂಗಡಗೇರಿ ವೃತ್ತಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಪ್ರತಿಭಾ ಪಾಟೀಲ, ವಿರೇಶ ಹಡಲಗೇರಿ, ಬಸವರಾಜ ಮುರಾಳ, ಅಶೋಕ ವನಹಳ್ಳಿ, ದಲಿತ ಯುವ ಮುಖಂಡ ಭಗವಂತ ಕಬಾಡೆ, ದೇವರಾಜ ಹಂಗರಗಿ, ಜಗದೇವರಾವ್ ಚಲವಾದಿ, ಬಸವರಾಜ ಚಲವಾದಿ ಸೇರಿದಂತೆ ಇತರೆ ಮುಖಂಡರಿದ್ದರು.
ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ ಡಾ.ಬಾಬು ಜಗಜೀವನರಾಮ್ ಅವರ ಬಸ್ ನಿಲ್ದಾಣವನ್ನು ಪುರಸಭೆ ಅಧ್ಯಕ್ಷೆ ಪ್ರತಿಭಾ ಪಾಟೀಲ ಉದ್ಘಾಟಿಸಿದರು.
ಆಚರಣೆ ಮಾಡದ ಕಾರ್ಮಿಕ ಇಲಾಖೆ ಬೀಗ ಜಡೇದ ದಲಿತ ಮುಖಂಡರು:
ಮುದ್ದೇಬಿಹಾಳ ಪಟ್ಟಣದ ಸಂಗಮೇಶ್ವರ ನಗರದಲಿರುವ ಕಾರ್ಮಿಕ ಇಲಾಖೆಯಲ್ಲಿ ಡಾ.ಬಾಬು ಜಗಜೀವನರಾಮ್ ಅವರ ಜಯಂತ್ಯೋತ್ಸವವನ್ನು ಆಚರಣೆ ಮಾಡದ ಕಾರಣ ಆಕ್ರೋಶಗೊಂಡ ತಾಲೂಕಾ ದಲಿತ ಮುಖಂಡರು ಸೋಮವಾರ ಮಧ್ಯಾಹ್ನ ಕಛೇರಿಗೆ ಬೀಗ ಜಡೇದು ಪ್ರತಿಭಟಿಸಿದ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಬಸವರಾಜ ಪೂಜಾರಿ, ದೇಶದ ಹಿರಿಯ ನಾಯಕರ ಜಯಂತ್ಯೋತ್ಸವವನ್ನು ಕಡ್ಡಾಯವಾಗಿ ಆಚರಣೆ ಮಾಡಬೇಕು ಎಂದು ಸರಕಾರವೇ ಆದೇಶ ಹೊರಡಿಸಿದ್ದು ಕಾರ್ಮಿಕ ಇಲಾಖೆ ಅಧಿಕಾರಿಗಳು ನಿರ್ಲಕ್ಷ ಮಾಡಿದ್ದಾರೆ. ಇದರ ಬಗ್ಗೆ ಇಲಾಖೆ ಸಿಬ್ಬಂದಿಗೆ ಕೇಳಿದರೆ ನಮ್ಮ ಮೇಲಾಧಿಕಾರಿಗಳು ನಮಗೆ ಯಾವುದೇ ಸೂಚನೆ ನೀಡಿಲ್ಲವೆಂದು ಉಡಾಫೆ ಉತ್ತರ ನೀಡುತ್ತಾರೆ. ಕೂಡಲೇ ಇಂತಹ ಬೇಜವಾಬ್ದಾರಿ ಅಧಿಕಾರಿಗಳನ್ನು ಅಮಾನತ್ತು ಮಾಡಿ ಅವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹರೀಶ ನಾಟೆಕಾರ, ದೇವರಾಜ ಹಂಗರಗಿ, ಮಂಜುನಾಥ ಕುಂದರಗಿ ಇದ್ದರು.
Be the first to comment