ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಪಟ್ಟಣದ ಇಂದಿರಾ ಸರ್ಕಲ್ ನಲ್ಲಿ ಇಂದು ಕರ್ನಾಟಕ ಮುಸ್ಲಿಂ ಕೌನ್ಸಿಲ್ ಹಾಗೂ ಶಾಸಕ ತನ್ವಿರ್ ಶೇಠ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ಮೈಸೂರು ಮಹಾನಗರ ಪಾಲಿಕೆ ಮೇಯರ್ ವಿಷಯದಲ್ಲಿ ತೇಜೋವಧೆ ಮಾಡುತ್ತಿರುವುದು ಖಂಡಿಸಿ ಪ್ರತಿಭಟನೆ ನಡೆಯಿತು
ಪ್ರತಿಭಟನೆಯ ನಂತರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷರಾದ ಸೋನಿಯಾಗಾಂಧಿ ಅವರಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ಭೇಟಿಯಾಗಿ ತನ್ವಿರ್ ಶೇಠ ಅವರ ವಿರುದ್ಧ ಅವರ ತೇಜೋವಧೆ ಮಾಡುತ್ತಿರುವ ಕೆಲ ಮುಖಂಡರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಭೇಟಿಯಾಗಿ ಮನವಿ ಸಲ್ಲಿಸಲು ನಿಯೋಗವೊಂದು ಮುಂದಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಮುಸ್ಲಿಂ ಕೌನ್ಸಿಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಂ ರಿಸಲ್ದರ್ ಮಾತನಾಡಿ ಕಾಂಗ್ರೆಸ್ ಪಕ್ಷದ ಕೆಲ ಜನ ಮುಸ್ಲಿಂ ನಾಯಕತ್ವ ಮುಗಿಸಲು ಸಂಚು ನಡೆಸುತ್ತಿದ್ದು ಈಗಾಗಲೇ ರೋಷನ್ ಬೇಗ್, ಸಿ ಎಂ ಇಬ್ರಾಹಿಂ,ಹಾಗೂ ಹಿಂಡಸಗೇರಿ,ಮುಂತಾದವರನ್ನು ಕಡೆಗಣಿಸಿದ್ದಾರೆ ಅದೇ ಹಾದಿಯಲ್ಲಿ ಈಗ ತನ್ವೀರ್ ಶೇಠ್ ರವರನ್ನು ಮುಗಿಸಲು ಸಂಚು ನಡೆಸಿದ್ದಾರೆ.ಎಂದು ಆರೋಪಿಸಿದರು ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರ ಕಾಣಿಕೆ ಅಮೋಘವಾದದ್ದು ಇದೇ ರೀತಿ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ವರ್ತನೆ ಮುಂದುವರಿಸಿದರೆ ಮುಸ್ಲಿಂ ಸಮಾಜದವರು ಮುಂಬರುವ ದಿನಮಾನಗಳಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇನ್ನೋರ್ವ ಮುಖಂಡ ಎಂಸಿ ಮ್ಯಾಗೇರಿ ಮಾತನಾಡಿ ಇಂತಹ ಹೇಯ ಕೃತ್ಯವನ್ನು ಕೈಬಿಡಬೇಕು ಶಾಸಕ ತನ್ವೀರ್ ಶೇಠ್ ರವರ ಹಿಂದೆ ಇಡೀ ರಾಜ್ಯದ ಮುಸ್ಲಿಂ ಸಮುದಾಯ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಹಿರಿಯ ನಾಯಕ ಎಲ್ ಎನ ನಾಯ್ಕೋಡಿ ಮಾಜಿ ಸೈನಿಕ ಎಲ್ ಕೆ ನದಾಫ್ ಕಾರ್ಮಿಕ ಘಟಕದ ಅಧ್ಯಕ್ಷ ಎಂ ಆರ್ ಕುಂಟೋಜಿ ನ್ಯಾಯವಾದಿಗಳಾದ ಎಂಸಿ ಮ್ಯಾಗೇರಿ ಐ.ಕೆ .ಸನೂರ್ ಹಾಗೂ ಅಲ್ಪಸಂಖ್ಯಾತರ ಮುಖಂಡರುಗಳಾದ ಎಲ್ಎನ್ ಮುದ್ನಾಳ ಎಸ್ಆರ್ ನಾಗರಾಳ ರಹಿಮಾನ್ ಟಕ್ಕಳಕಿ ಜಬ್ಬಾರ್ ಗುಲ್ ಅಂದಾಜ್ ಖಾಜಾ ಹುಣಕುಂಟಿ ಶಫೀಕ್ ಎಲ್ ಮ್ಯಾಗೇರಿ ರಜಾಕ್ ಮಕಾಂದಾರ್ ಅಬ್ಬು ನಾಲತ್ವಾಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Be the first to comment