ಲಿಂಗಸ್ಗೂರ ಸಹಾಯಕ ಆಯುಕ್ತರಿಗೆ ಅಕ್ರಮ ಮರಳು ಸಂಗ್ರಹ ಮತ್ತು ಸಾಗಣೆ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ
ಅಪಘಾತವಾದ ಅಕ್ರಮ ಮರಳು ಸಾಗಣೆ ವಾಹನದ ವರದಿ,ವಾಹನದ ಮೇಲೆ ಎಪ ಆಯ್ ಆರ ದಾಖಲಿಸದೆ ಅಕ್ರಮ ಮರಳು ದಂಗೆಗೆ ಸಾಥ ನೀಡಿತಾ ಪೋಲಿಸ ಇಲಾಖೆ..!
ಲಿಂಗಸ್ಗೂರ:: ಲಿಂಗಸ್ಗೂರ ತಾಲ್ಲೂಕಿನ ರೋಡಲಬಂಡಾ ಕ್ಯಾಂಪ ನಲ್ಲಿ ನಿತ್ಯ ಅಕ್ರಮ ಮರಳು ಸಂಗ್ರಹ ಮತ್ತು ಸಾಗಟ ಮಾಡುತ್ತಿದು. ಅಕ್ರಮ ಮರಳು ಸಂಗ್ರಹ ಅಡ್ಡಗಳ ಮೇಲೆ ದಾಳಿ ಮಾಡಿ ಅಕ್ರಮ ಮರಳು ಸಾಗಣೆ ತಡೆಯಗಟ್ಟಬೇಕು ಎಂದು ಅಹಿಂದ ಚಿಂತಕ ವೇದಿಕೆಯ ರಾಜ್ಯ ಕಾರ್ಯಧ್ಯಕ್ಷರಾದ ಅಮರೇಶ ಕಾಮನಕೇರಿ ಯವರು ಲಿಂಗಸ್ಗೂರ ಸಹಾಯಕ ಆಯುಕ್ತರಿಗೆ,ಡಿವಾಯ್ ಎಸ ಪಿ ಲಿಂಗಸ್ಗೂರ, ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸ್ಥಳಗಳ ದಾಖಲೆಗಳ ಸಮೇತ ಮನವಿ ಸಲ್ಲಿಸಿದರು. ಅಕ್ರಮ ಮರಳು ಸಾಗಣೆ ವಾಹನಗಳು ಅತಿವೇಗದ ಚಾಲನೆ ಮಾಡುತ್ತಿರುವುದರಿಂದ ಅನೇಕ ಅಪಘಾತಗಳು ಸಂಭವಿಸುತ್ತಿವೆ.ಅಕ್ರಮ ಮರಳು ಸಾಗಣೆ ವಾಹನಕ್ಕೆ ರೋಡಲಬಂಡಾ ಗ್ರಾಮದ ಒಬ್ಬ ವ್ಯಕ್ತಿಯು ಬಲಿಯಾಗಿದು.ಒಂದು ವಾರದ ಹಿಂದಿ ನಾರಾಯಣಪುರ ಜಲಾಶಯದ ಮುಂಭಾಗದಲ್ಲಿ ರಾತ್ರಿ 8.30 ಸಮಯದಲ್ಲಿ ಅಪಘಾತಕ್ಕೆ ಈಡಾದ KA28 D2994 amw ವಾಹನದ ಮೇಲೆ ಪ್ರಕರಣ ದಾಖಲಿಸದೆ ಆಗೆ ಬಿಟ್ಟಿದು ನೋಡಿದರೆ ಕಾನೂನು ಪಾಲಕರೆ ಅಕ್ರಮ ಮರಳು ಸಾಗಟಕ್ಕೆ ಶ್ರೀರಕ್ಷಕರಾಗಿದ್ದಾರೆ. ಇದರ ಬಗ್ಗೆ ಈಗಾಗಲೇ ವರದಿ ಮಾಡಿದರು ಅಧಿಕಾರಿಗಳು ಸ್ಪಂದಿಸದೆ ಇರುವುದು ಅಕ್ರಮ ಮರಳು ದಂದೆಗೆ ಅಧಿಕಾರಿಗಳೆ ಸಾಥ ನೀಡಿತ್ತದ್ದಾರೆ.ಅನ್ನದು ಬಹಿರಂಗ ಸತ್ಯ ಇನ್ನಾದರೂ ಅಕ್ರಮ ಮರಳು ಸಂಗ್ರಹ ಅಡ್ಡಗಳ ಮತ್ತು ಸಾಗಣೆ ಮೇಲೆ ಕಾನೂನು ಕ್ರಮ ಕೈಗೋಳಬೇಕಿದೆ.
ಅಕ್ರಮ ಮರಳು ಸಂಗ್ರಹ ಅಡ್ಡಗಳು
ರೋಡಲಬಂಡಾ ಯು ಕೆ ಪಿ ಕ್ಯಾಂಪನಲ್ಲಿ ಅಕ್ರಮ ಮರಳು ಸಂಗ್ರಹ ಅಡ್ಡಗಳು
ಅಕ್ರಮ ಮರಳು ಅಡ್ಡಕ್ಕೆ ಹೋಗುವ ದಾರಿ
ರೋಡಲಬಂಡಾ ಕ್ಯಾಂಪ ಯುಕೆಪಿ ಐ ಬಿ ಬಳಿಯ ಅಕ್ರಮ ಮರಳು ಸಂಗ್ರಹ ಅಡ್ಡ
ರೋಡಲಬಂಡಾ ಕ್ಯಾಂಪನ ಯುಕೆಪಿ ಕೆ ಇ ಬಿ ಬಳಿ ಇರುವ ಅಡ್ಡ
ನಾರಾಯಣಪುರ ಜಲಾಶಯ ಮುಂಭಾಗದಲ್ಲಿ ಸಂಗ್ರಹಿಸಿದ ಅಕ್ರಮ ಮರಳು ಅಡ್ಡ
ರಾಜ್ಯ ಹೆದ್ದಾರೆ 41 ಬಳಿ ಇರುವ ಮರಳು ಸಂಗ್ರಹ ಅಡ್ಡಕ್ಕೆ ಹೋಗುವ ದಾರಿ
ಜಲಾನಶದ ಮುಂಭಾಗದ ಅರಣ್ಯ ಹಾಗೂ ಹೊಲದಲ್ಲಿ ಅಕ್ರಮ ಮರಳು ಸಂಗ್ರಹ ಮಾಡಿಕೋಳುತ್ತಿರು ಸ್ಥಳ
ಲಿಂಗಸ್ಗೂರ ಸಹಾಯಕ ಆಯುಕ್ತರು ಮತ್ತು ಡಿವೈಎಸಪಿ ಲಿಂಗಸ್ಗೂರ, ಪಿ ಎಸ ಆಯ್ ಲಿಂಗಸ್ಗೂರ, ಹಾಗೂ ಕಂದಾಯ ಅಧಿಕಾರಿಗಳು ಕ್ರಮ ಕೈಗೋಬೇಕಾಗಿದೆ.
ಮರಳು ತುಂಬಿದ ವಾಹನ ಅಪಘಾತವಾದ ಬಗ್ಗೆ ವಿಡಿಯೋ ದಾಖಲೆ ಇರುವದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳಬೇಕಿದೆ.
Be the first to comment