ಬೆಂಗಳೂರು: ಬಿಬಿಎಂಪಿ ಮಾರ್ಷಲ್ಗಳ ಎಡವಟ್ಟಿನಿಂದ ಶಾಸಕರು ಪ್ರಯಾಣಿಸುತ್ತಿದ್ದ ಕಾರಿನಲ್ಲಿದ್ದ ವ್ಯಕ್ತಿಗೆ 500 ಬದಲು 50,000 ರೂಪಾಯಿ ದಂಡ ವಿಧಿಸಲಾಗಿದೆ ಎಂದು ರಸೀದಿ ನೀಡಲಾಗಿದೆ. ಬಿಜೆಪಿ ಶಾಸಕ ರಾಜುಗೌಡ ಪ್ರಯಾಣಿಸುತ್ತಿದ್ದ ಕಾರಿನಲ್ಲಿದ್ದ ವ್ಯಕ್ತಿಗೆ ಮಾರ್ಷಲ್ಗಳು ದಂಡದ ರಸೀದಿ ನೀಡಿದರು ಎಂದು ತಿಳಿದುಬಂದಿದೆ.
ಅಂದ ಹಾಗೆ, ಶಾಸಕ ರಾಜುಗೌಡ ಪ್ರಯಾಣಿಸುತ್ತಿದ್ದ ಕಾರ್ನ ತಡೆದ ಮಾರ್ಷಲ್ಗಳು ಅದರಲ್ಲಿ ವ್ಯಕ್ತಿಯೊಬ್ಬ ಮಾಸ್ಕ್ ಧರಿಸದೆ ಇರುವುದನ್ನು ಗಮನಿಸಿದ್ದಾರೆ. ಹಾಗಾಗಿ, ಅವರಿಗೆ ದಂಡ ವಿಧಿಸಲು ಮುಂದಾದರು. ಈ ವೇಳೆ, ಮಾರ್ಷಲ್ಗಳು ರಸೀದಿಯಲ್ಲಿ 50 ಸಾವಿರ ಎಂದು ನಮೂದಿಸಿದ್ದಾರಂತೆ. ರಸೀದಿ ಕಂಡ ವ್ಯಕ್ತಿ ಆತಂಕಕ್ಕೆ ಸಹ ಒಳಗಾಗಿದ್ದರಂತೆ.
ಇನ್ನು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಪ್ರತಿಕ್ರಿಯಿಸಿದ ಪಾಲಿಕೆ ಕೇವಲ 500 ರೂಪಾಯಿ ದಂಡ ವಸೂಲಿ ಮಾಡಲಾಯಿತು.
ಆದರೆ, ರಸೀದಿಯಲ್ಲಿ ತಪ್ಪಾಗಿ 50,000 ರೂಪಾಯಿ ಎಂದು ನಮೂದಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
Be the first to comment