ಬಿಗ್ ಬ್ರೇಕಿಂಗ್ : ವಿಶ್ವಾಸಮತಯಾಚನೆಯಲ್ಲಿ ಸಿಎಂ ವಿಫಲ : ‘ಮೈತ್ರಿ ಸರ್ಕಾರ ಪತನ’, ಇಂದು ರಾತ್ರಿಯೇ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಕೆ

ಬೆಂಗಳೂರು: ಹಲವು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಇಂದು ಕೊನೆಯಾಗಿದೆ. ಇಂದು ರಾತ್ರಿ 7 : 18ರ ಸಮಯದಲ್ಲಿ ಸಿಎಂ ಕುಮಾರಸ್ವಾಮಿಯವರು ಸದನದಲ್ಲಿ ವಿಶ್ವಾಸ ಮತಯಾಚನೆ ಮಾಡಿದರು. ಪ್ರಸ್ತಾವನೆಯನ್ನು ಧ್ವನಿಮತದ ಮೂಲಕ ಎಲ್ಲ ಪಕ್ಷಗಳ ಸದ್ಯಸರಿಂದ ಒಪ್ಪಿಗೆ ಪಡೆಯಲಾಯಿತು.

 

ನಿರ್ಣಯದ ಪರವಾಗಿ ಮೊದಲು ನಡೆದ ಮತ ಏಣಿಕೆಯಲ್ಲಿ ಅಡಳಿತ ಪಕ್ಷದ ಸ್ಪೀಕರ್‌ ಶಾಸಕರನ್ನು ಎದ್ದು ನಿಲ್ಲಿಸುವ ಮೂಲಕ ಪ್ರತಿ ಸಾಲಿನಂತೆ ಕೊನೆ ಸಾಲಿನ ತನಕ ಎಲ್ಲ ಶಾಸಕರನ್ನು ವಿಧಾನಸಭಾ ಅಧಿಕಾರಿಗಳು ಏಣಿಕೆ ಮಾಡಿದರು.

ನಂತರ ನಿರ್ಣಯದ ವಿರುದ್ದವಾಗಿ ಕೂಡ ಪ್ರತಿ ಸಾಲಿನಂತೆ ಎಲ್ಲಾ ಸಾಲಿನಲ್ಲಿರುವ ಶಾಸಕರನ್ನು ನಿಲ್ಲಿಸುವ ಮೂಲಕ ಮಾಡಿದರು. ಆಧಿಕಾರಿಗಳು ಏಣಿಕೆ ಮಾಡಿದ ಸಂಖ್ಯೆಯನ್ನು ಸ್ಪೀಕರ್‌ಗೆ ನೀಡಿದರು

 

ಇದೇ ವೇಳೆ ಮಾತನಾಡಿದ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಸಿಎಂ ಹೆಚ್‌ಡಿ ಕುಮಾರಸ್ವಾಮಿಯವರು ಮಂಡಿಸಿದ ವಿಶ್ವಾಸ ಮತಯಾಚನೆಯಲ್ಲಿ 99 ಶಾಸಕರು ಒಪ್ಪಿಗೆ ನೀಡಿದರು.

ಜನನ

ವಿರೋಧವಾಗಿ 105 ಶಾಸಕರು ಒಪ್ಪಿಗೆ ನೀಡಿದ್ದಾರೆ ಅಂತ ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲವನ್ನು ಮನ್ನಾ ಮಾಡಲು ಕ್ರಮ ಕೈಗೊಂಡಿದ್ದೇವೆ, ರೈತರ ಸಾಲಮನ್ನಾ ವಿಷಯದಲ್ಲಿ ನಾನು ಸ್ಪಷ್ಟವಾಗಿದ್ದೇನೆ. ಸಾಲಮನ್ನಾ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ನೆರವು ನೀಡಲಾಗಿದೆ. ರೈತರ ಸಾಲಮನ್ನಾ ವಿಷಯದಲ್ಲಿ ನಾನು ಸ್ಪಷ್ಟವಾಗಿದ್ದೇನೆ. ಸಾಲಮನ್ನಾ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ನೆರವು ನೀಡಲಾಗಿದೆ ಅಂತ ಹೇಳಿದರು.

ಇನ್ನು ರಾಜಕೀಯಕ್ಕೆ ಬರಲು ನನಗೆ ಇಷ್ಟವಿರಲಿಲ್ಲ. ನಮ್ಮ ತಂದೆಗೂ ಇಷ್ಟವಿರಲಿಲ್ಲ. ಎಚ್‌ಡಿ ರೇವಣ್ಣಗೆ ನಮ್ಮ ತಂದೆಯ ಆಶೀರ್ವಾದ ನೀಡಿದ್ದರು. ನಮ್ಮ ತಂದೆ ರೈತರಾಗಿ ರೈತರಿಗಾಗಿ ದುಡಿದಿದ್ದಾರೆ. ಹೀಗಾಗಿ ಕೆಲವು ಪುಸ್ತಕದಲ್ಲಿಯೂ ಇದರ ಬಗ್ಗೆ ಉಲ್ಲೇಖ ಮಾಡಲಾಗಿದೆ ಅಂತ ಹೇಳಿದರು. ಇಂದು ನಾನು ಸಂತೋಷದಿಂದ ಸಿಎಂ ಸ್ಥಾನ ತ್ಯಜಿಸಲು ಸಿದ್ಧ ಎಂದು ಎಚ್‌ಡಿ ಕುಮಾರಸ್ವಾಮಿ ತಿಳಿಸಿದರು.

 

ಇನ್ನು ಇದೇ ವೇಳೆ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ನಾನು ಎಲ್ಲಿ ಕೊಟ್ಟ ಮಾತಿಗೆ ತಪ್ಪಿವೇ ಅನ್ನೋ ಕಾರಣಕ್ಕೆ ನಾನು ನನ್ನ ರಾಜೀನಾಮೆಯನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡುತ್ತಿರುವೆ ಅಂತ ಅಂತ ಸದನದಲ್ಲಿ ತೋರಿಸಿದರು. ಇನ್ನು ಇದೇ ವೇಳೆ ಗೋಪಾಲಯ್ಯ ಅವೆರು ನನಗೆ ಎರಡನೇ ಬಾರಿ ಟೋಪಿ ಹಾಕಿದ್ದಾರೆ ಅಂಥ ಸಿಎಂ ಹೇಳಿದರು. ಬಿಜೆಪಿ ಜೊತೆಗೆ ಸೇರಿ 20 ತಿಂಗಳು ಸರ್ಕಾರ ನಡೆಸಿದೆ. ಬಳಿಕ ಅಧಿಕಾರ ಬಿಟ್ಟುಕೊಳ್ಳಲು ಮುಂದಾಗಿದ್ದೆ. ಆದರೂ ನನ್ನನ್ನು ವಚನ ಭ್ರಷ್ಟ ಎಂದು ಆರೋಪಿಸುತ್ತಾರೆ. ಇದು ನನಗೆ ಭಾರೀ ನೋವು ತರುತ್ತಿದೆ ಎಂದು ಕಿಡಿಕಾರಿದರು.

ಇದೇ ವೇಳೆ ತಮ್ಮ ಈ ಬಾರಿಯ ಅಧಿಕಾರವಾಧಿಯಲ್ಲಿ ಏನೆಲ್ಲ ಕಾರ‍್ಯಕ್ರಮಗಳನ್ನು ಜಾರಿಗೆ ತರಲಾಯಿತು. ಅತೃಪ್ತ ಶಾಸಕರ ಕ್ಷೇತ್ರಗಳಿಗೆ ಎಷ್ಟೆಲ್ಲ ಹಣವನ್ನು ಬಿಡುಗಡೆ ಮಾಡಲಾಗಿದೆ ಅನ್ನೋಂದನ್ನು ಸದನದಲ್ಲಿ ತಿಳಿಸಿದರು. ಇನ್ನು ಇದೇ ವೇಳೆ ತಮ್ಮ ಪಕ್ಷವನ್ನು ಬಿಟ್ಟು ಹೋಗಿರುವರನ್ನು ಯಾವುದೇ ಕಾರಣಕ್ಕೂಕರೆಸಿಕೊಳ್ಳುವುದಿಲ್ಲ ಅಂತ ಸ್ಪಷ್ಟಪಡಿಸಿದರು.

ಮುಂದೇನು : ವಿಶ್ವಾಸ ಮತಯಾಚನೆಯಲ್ಲಿ ವಿಫಲವಾದ ಹಿನ್ನಲೆಯಲ್ಲಿ ಸಿಎಂ ಇಂದು ರಾತ್ರಿ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ.

ಡಿ ಅ

Be the first to comment

Leave a Reply

Your email address will not be published.


*