ಕೋವಿಡ್-19 ಮುಂಜಾಗ್ರತಾ ಕ್ರಮಗಳೊಂದಿಗೆ ಬಿಸಿಯೂಟದ ಆಹಾರ ಧಾನ್ಯ ವಿತರಣೆ

ವರದಿ:ಶರಣಪ್ಪ ಬಾಗಲಕೋಟೆ

ಬಾಗಲಕೋಟೆ : ಕೊರೊನಾ ಕಾರಣದಿಂದಾಗಿ ಶಾಲೆಗಳು ಇನ್ನು ಆರಂಭವಾಗಿಲ್ಲ. ಹೀಗಾಗಿ ಮಕ್ಕಳಿಗೆ ಪೋಷ್ಠಿಕಾಂಶ ಒದಗಿಸುವ ಮಧ್ಯಾಹ್ನದ ಬಿಸಿಯೂಟದ ಬದಲಾಗಿ ಆಹಾರ ಧಾನ್ಯ ನೀಡಲು ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದಂತೆ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆ ಕೆಲೂರ ಇಲ್ಲಿ ಕೋವಿಡ್-19 ಹರಡದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ ಆಹಾರಧಾನ್ಯ ವಿತರಿಸಿದರು.

ಸಾರ್ವತ್ರಿಕ ರಜೆ ಹೊರತುಪಡಿಸಿ ಐದು ತಿಂಗಳಲ್ಲಿ 108 ದಿನಗಳ ಆಹಾರ ಸಾಮಗ್ರಿಗಳನ್ನು 8ರಿಂದ 10ನೇ ತರಗತಿ ಮಕ್ಕಳಿಗೆ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಜೂನ್ ಹಾಗೂ ಜುಲೈ ತಿಂಗಳ 53 ದಿನಗಳ ಆಹಾರ ಧಾನ್ಯಗಳನ್ನು ವಿತರಿಸಲಾಯಿತು. ಎರಡನೇ ಹಂತದಲ್ಲಿ ಆಗಸ್ಟ್, ಸೆಪ್ಟೆಂಬರ್ ಹಾಗೂ ಆಕ್ಟೋಬರ್ ತಿಂಗಳ 55 ದಿನಗಳ ಆಹಾರ ಧಾನ್ಯ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಮಕ್ಕಳಿಗೆ ಆಹಾರ ಧಾನ್ಯ (ಅಕ್ಕಿ ಹಾಗೂ ಗೋಧಿ) ಹಾಗೂ ಪರಿವರ್ತನಾ ವೆಚ್ಚದ ಬದಲಿಗೆ ತೊಗರಿಬೇಳೆಯನ್ನು ನೀಡಲಾಗುತ್ತದೆ.

ಕೊರೊನಾ ಹರಡದಂತೆ ಮುನ್ನಚ್ಚರಿಕೆ ವಹಿಸಿ ಧಾನ್ಯ ವಿತರಣೆ ಮಾಡಲು ಸೂಚಿಸಿದಂತೆ ಕಡ್ಡಾಯವಾಗಿ ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳವುದರ ಜೊತೆಗೆ ಬಂದವರಿಗೆ ಸ್ಯಾನಿಟೈಜರ ಸಿಂಪಡಿಸುವುದು ಥರ್ಮಲ್ ಸ್ಕ್ಯಾನಿಂಗ್ ಮಾಡುವುದರೊಂದಿಗೆ ಕೊರೊನಾ ಹರಡದಂತೆ ಮುನ್ನಚ್ಚರಿಕೆ ವಹಿಸಿ ಧಾನ್ಯ ವಿತರಣೆ ಮಾಡಲಾಯಿತು. ಕೋವಿಡ್ ಕಾರಣದಿಂದ ಶಾಲೆಗೆ ಮಕ್ಕಳು ಹಾಗೂ ಪೋಷಕರನ್ನು ಒಂದೇ ಬಾರಿ ಕರೆಸದಂತೆ ಸೀಮಿತ ಸಂಖ್ಯೆಯಲ್ಲಿ ಕರೆಸಿ ಆಹಾರ ಧಾನ್ಯ ವಿತರಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಎಸ್.ಬಿ.ದಾಸರ, ಶಿಕ್ಷಕರಾದ ಎಸ್.ಬಿ.ಹೆಳವರ, ಎಸ್.ಬಿ.ಯಾವಗಲ್ಲಮಠ, ಎಸ್.ಎಮ್.  ಅಮೀನಗಡ,  ವಾಯ್.ಎಸ್.ವಾಲಿಕಾರ, ಬಿ.ಎಸ್.ಕಮತರ, ಬೋಧಕೇತರ ಸಿಬ್ಬಂದಿಯವರು ಮತ್ತು ಅಡುಗೆ ಸಿಬ್ಬಂದಿಯವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*