ಹುಣಸಗಿ
ಬಂಧಿತ ಕಳ್ಳನಿಂದ 25 ಮೋಟಾರ್ ಬೈಕುಗಳು ವಶಕ್ಕೆ
ಬಹಳ ದಿನಗಳಿಂದ ಪೋಲಿಸರಿಗೆ ತಲೆನೋವಾಗಿದ್ದ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದ ಹುಣಸಗಿ ಪೋಲಿಸ್
ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ವಿವಿಧೆಡೆ ಬೈಕ್ಗಳನ್ನು ಎಗರಿಸಿಕೊಂಡು ಹೋಗುತ್ತಿದ್ದ ಕುಖ್ಯಾತ ಬೈಕ್ ಕಳ್ಳನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು 9,480,000 ಮೌಲ್ಯದ 25 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟಣದಲ್ಲಿ ಮನೆಗಳ ಮುಂದೆ ಹಾಗೂ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ ಚಾಲಾಕಿ ಕಳ್ಳರನ್ನು ಬಂಧಿಸಿ 25 ಬೈಕ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಹುಣಸಗಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೌನೇಶ ತಂದೆ ಜಗನ್ನಾಥ (27)ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
ಪೊಲೀಸರು ಬಂಧಿತರಿಂದ ಸುಮಾರು 9,48,000 ಮೌಲ್ಯದ 25 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಸುರಪುರ ಉಪವಿಭಾಗದ ಡಿವೈಎಸ್ಪಿ ವೆಂಕಟೇಶ ಹೊಗಿಬಂಡಿ ಮಾರ್ಗದರ್ಶನದ ಮೇರೆಗೆ ಹುಣಸಗಿ ಠಾಣೆಯ ಸಿಪಿಐ ದೌಲತ ಎನ್ .ಕೆ ನೇತೃತ್ವದಲ್ಲಿ ಅಪರಾಧಿಯನ್ನು ಬಂಧಿಸಿದ್ದಾರೆ.
Be the first to comment