ಸಾಮಾಜಿಕ ಅಂತರ ಹಾಗೂ ಸುರಕ್ಷೆಯಿಂದ ದಸರಾ ಆಚರಿಸಿ:ಕೆ.ಎಫ್.ಸಿ.ಎಸ್.ಸಿ. ಅಧ್ಯಕ್ಷ ನಡಹಳ್ಳಿ ಮನವಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

 

ಮುದ್ದೇಬಿಹಾಳ:

ಮೈಸೂರಿನಲ್ಲಿ ಹಾಗೂ ಶ್ರೀರಂಗ ಪಟ್ಟಣದಲ್ಲಿ ಆಳ್ವಿಕೆ ಮಾಡಿದ ರಾಜ ಮನೆತನ ಒಡೆಯರ್ ಮನೆತನ. ಮೂಲತಃ ಯದು ರಾಯ ಹಾಗೂ ಕೃಷ್ಣರಾಯರಿಂದ ಆರಂಭವಾದ ಆಳ್ವಿಕೆ, ಮುಂದೆ ಮೈಸೂರಿನ ರಾಜ ಮನೆತನವಾಗಿ ಬೆಳೆಯಿತು‌. ಈ ರಾಜ‌ ಮನೆತನದಲ್ಲಿ ಬಂದ ಅರಸರು ಮೈಸೂರು ರಾಜ್ಯಕ್ಕೆ ಕೊಟ್ಟ ಕೊಡುಗೆಗಳು ಅಪಾರ. ನಾಡಿನ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡಿದ ಒಡೆಯರ್ಗಳ ಆಡಳಿತ ಕಾಲದಲ್ಲಿ, ಮೈಸೂರು ಭಾರತದಲ್ಲಿ ಒಂದು ಮಾದರಿ ಹಾಗೂ ಪ್ರಗತಿ ಪರ ಸಂಸ್ಥಾನವಾಗಿತ್ತೆಂದು ಇತಿಹಾಸ ಹೇಳುತ್ತದೆ. ಇಂತಹ ಮಹೋನ್ನತ ಚರಿತ್ರೆಯನ್ನು ತಮ್ಮದಾಗಿಸಿಕೊಂಡ ಒಡೆಯರ ಮನೆತನದವರಿಂದಲೇ ಮೈಸೂರಿನಲ್ಲಿ ಸಡಗರದ , ಸಂಭ್ರಮದ ಹಾಗೂ ವಿಜೃಂಭಣೆಯ ದಸರ ಉತ್ಸವ ಆರಂಭವಾಯಿತು ಎನ್ನುವುದು ಕೂಡಾ ಸತ್ಯ.

 ಕ್ರಿ.ಶ.1610 ರಲ್ಲಿ ದಸರ ಉತ್ಸವಕ್ಕೆ ಚಾಲನೆ ನೀಡಿದರು. ಅಂದು ರಾಜ ಒಡೆಯರು ಶ್ರೀ ರಂಗ ಪಟ್ಟಣದಲ್ಲಿ ಆರಂಭಿಸಿದ ದಸರಾ ಉತ್ಸವವು ಕಾಲಾಂತರದಲ್ಲಿ ಮೈಸೂರಿಗೆ ಬಂದು , ಈಗ ಅದೇ ಸಂಪ್ರದಾಯ ಮುಂದುವರೆದಿದೆ. 



ದಸರೆಯು ಕೇವಲ ಸಡಗರ ಹಾಗೂ ಸಂಭ್ರಮದ ಪ್ರತೀಕ ಮಾತ್ರವಾಗಿರಲಿಲ್ಲ. ಬದಲಿಗೆ ಅದು ಆಡಳಿತದ ಒಂದು ಭಾಗವಾಗಿ, ಜನಪರವಾದ ಒಂದು ಆಯೋಜನೆಯಂತಿತ್ತು. ಇಂತಹ ದಸರಾ ಹಬ್ಬವನ್ನು ಇಂದಿನ ಕೊರೋನಾ ಪರಿಸ್ಥಿಯಲ್ಲಿ ಸಾಮಾಜಿಕ ಅಂತರ ಹಾಗೂ ಸುರಕ್ಷಿತ ರೂಪದಲ್ಲಿ ನಾವೆಲ್ಲರೂ ಆಚರಣೆಯನ್ನು ಮಾಡಬೇಕಾಗಿದೆ. ಚಾಮುಂಡೇಶ್ವರಿ ತಾಯಿ ಇಂದಿನ ದುಸ್ಥಿತಿಯನ್ನು ಆದಷ್ಟು ಬೇಗಾ ತೊಲಗಿಸಿ ರಾಜ್ಯದ ಜನತೆಗೆ ಎಂದಿನಂತೆ ಸಾಮಾನ್ಯ ಹಾಗೂ ಸುಖಕರ ಜೀವನ ನೀಡಲಿ ಎಂದು ದೇವಿಯಲ್ಲಿ ಕೇಳಿಕೊಳ್ಳುತ್ತೇನೆ ಎಂದು ಮುದ್ದೇಬಿಹಾಳ ಕ್ಷೆತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದ್ದಾರೆ. 

Be the first to comment

Leave a Reply

Your email address will not be published.


*