ಬಾಗಲಕೋಟೆ: ಎಪ್ರೀಲ್ 2006 ರ ನಂತರ ನೇಮಕವಾದ ಸರಕಾರಿ ನೌಕರರಿಗೆ ಮಾರಕ ವಾಗಿರುವ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ,ಹಳೇ ಪಿಂಚಣಿ ಯೋಜನೆಯನ್ನು ಜಾರಿ ಮಾಡುವಂತೆ ಒತ್ತಾಯಿಸಿ ಇಂದು ಹುನಗುಂದ ವಿಧಾನಸಭಾ ಮತಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ ಇವರಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಇಳಕಲ್ ತಾಲ್ಲೂಕು ಘಟಕ ಹಾಗೂ ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಘ ಹುನಗುಂದ-ಇಳಕಲ್ ಘಟಕಗಳ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಮನವಿಗೆ ಸ್ಪಂದಿಸಿದ ಶಾಸಕರು
ಮನವಿಯನ್ನು ಸ್ವೀಕರಿಸಿದ ತಕ್ಷಣ ಮಾನ್ಯ ಶಾಸಕರು ಮನವಿಗೆ ಸ್ಪಂದಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರವೊಂದನ್ನು ಬರೆಯುವುದರ ಜೊತೆಗೆ ಎಲ್ಲಾ ಸಚಿವರ ಗಮನಕ್ಕೆ ತಂದು ಹಳೇ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಪರಶುರಾಮ ಪಮ್ಮಾರ,NPS ನೌಕರರ ಸಂಘದ ಅಧ್ಯಕ್ಷರಾದ ಸಂಗಮೇಶ ಪಾಟೀಲ, ಈಶ್ವರ ಗಡ್ಡಿ, ಎಂ ಎಚ್ ಗೌಡರ, ಗುಂಡಪ್ಪ ಕುರಿ,ಗೋವಿಂದ ಯಂಗಾಲಿ, ಈರಣ್ಣ ಚಿನಿವಾಲರ,ಶ್ರೀಧರ ವಿಶ್ವಕರ್ಮ, ಶರಣಬಸು ಕೊಣ್ಣೂರ, ಎಸ್ ಬಿ ಮಲಗಿಹಾಳ, ಮಹಾಂತೇಶ ಕಲ್ಮಠ,ರಾಜಶೇಖರ ಎಸ್,ಬಿ ಎಂ ಪಾಟೀಲ,ಗಂಗಾಧರ ಹನಮಸಾಗರ,ಜಿ ಬಿ ಭದ್ರಣ್ಣವರ,ಎಂ ಎಸ್ ಬೀಳಗಿ,ವಿಜಯ ಗುಡಿಹಿಂದಿನ,ಎಸ್ ಬಿ ಶೀಲವಂತರ,ಡಿ ಎಂ ಬಾಗವಾನ,ಕುಬೇರ ಹೊಂಗಲ್, ಜಿ ಟಿ ರಾಠೋಡ, ಭೀಮಣ್ಣ ಹೊಸಮನಿ,ಲಿಂಗರಾಜ ಲೆಕ್ಕದ, ಬಾಗವಾನ, ಸಿ ಬಿ ಕಲಕೇರಿ,ಅಶೋಕ ಕಡಿ, ರವಿ ಕಾಳಗಿ,ಎ ಎಂ ವಸ್ತ್ರದ,ರಮೇಶ ಮಿಣಜಗಿ, ಅಶೋಕ ಬಳ್ಳಾ ಹಾಗೂ ಇನ್ನೂ ಅನೇಕ ಪದಾಧಿಕಾರಿಗಳು ಹಾಗೂ ನೌಕರ ಬಾಂಧವರು ಉಪಸ್ಥಿತರಿದ್ದರು.
Be the first to comment