ದಿನವಿಡಿ ಸುರಿದ ಭಾರಿ ಮಳೆಗೆ ಬತ್ತಿದ ಕೊಳವೆ ಬಾವಿಯಲ್ಲಿ ಉಕ್ಕಿದ ಗಂಗೆ

ವರದಿ : ಆನಂದ ಹೊಸಗೌಡರ್ ಹುಣಸಗಿ

ಯಾದಗಿರಿ : ಮಳೆರಾಯ ಬಿಟ್ಟು ಬಿಡದೆ ಸುರಿಯುತ್ತಿದ್ದು ಎಲ್ಲಿ ನೋಡಿದರು ನೀರು ನೀರು ನೀರು ಎನ್ನುವಂತಾಗಿದೆ.

ಜಿಲ್ಲೆಯ ಹುಣಸಗಿ ತಾಲ್ಲೂಕಿನ ವಜ್ಜಲ್ ಗ್ರಾಮದ ಸರಕಾರಿ ಶಾಲೆಯಲ್ಲಿರು ಕುಡಿಯುವ ನೀರಿನ ಕೊಳವೆ ಬಾವಿಯಿಂದ ನೀರು ತಾನಾಗಿಯೇ ಹೋರ ಬರುತ್ತಿರುವುದನ್ನು ನೋಡಿ ಗ್ರಾಮಸ್ಥರು ಆಶ್ಚರ್ಯಕ ಪಡುತ್ತಿದ್ದಾರೆ.

ಶಾಲೆಯ ಆವರಣದಲ್ಲಿರುವ ಕೊಳವೆ ಬಾವಿಯಲ್ಲಿ ನೀರರಲಿಲ್ಲ ಕೊಳವೆ ಬಾವಿಯ ಕೈ ಪಂಪ್ ಎಷ್ಟು ಹೊಡೆದರು ಒಂದು ಹನಿ ನೀರು ಸಹ ಬರುತ್ತಿರಲಿಲ್ಲ ಆದರೆ ಇಂದು ಮಳೆಯಿಂದಾಗಿ ನೀರು ತಾನಾಗಿಯೇ ಹೊರ ಬರುತ್ತಿವೆ.

ಶಾಲೆಯ ಶಿಕ್ಷಕ ಯಲ್ಲಪ್ಪ ಮಾತನಾಡಿ ಆವರಣದಲ್ಲಿರು ಕೊಳವೆ ಬಾವಿಯ ನೀರು ಬತ್ತಿ ಹೊಗಿದ್ದವು ಮಕ್ಕಳಿಗೆ ಕುಡಿಯಲು ಸಹ ಹನಿ ನೀರು ಬರುತ್ತಿರಲಿಲ್ಲ ಆದರೆ ಮಳೆಯಿಂದಾಗಿ ನೀರು ತಾನಾಗಿಯೇ ಬರುತ್ತಿರುವುದು ಆಶ್ಚರ್ಯವೇ ಸರಿ ಎಂದರು.

ಇನ್ನೂ ಹೊರ ಬರುತ್ತಿರುವ ನೀರನ್ನು ವೀಕ್ಷಿಸಲು ಗ್ರಾಮಸ್ಥರು ಮುಗಿ ಬೀಳುತ್ತಿದ್ದಾರೆ.

Be the first to comment

Leave a Reply

Your email address will not be published.


*