ರಾಜ್ಯ ಸುದ್ದಿಗಳು
ಬೆಂಗಳೂರು ಅ.2:
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 19 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸೆಗಿ ಯುವತಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ವ್ಯಕ್ತಿಗಳಿಗೆ ನೇರವಾಗಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಯಲಹಂಕ ತಶೀಲ್ದಾರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಎ.ಬಿ.ವಿ.ಪಿ. ಕಾರ್ಯಕರ್ತರು ಮನವಿ ಸಲ್ಲಸಿದರು.
ಒಂದು ಹೆಣ್ಣು ಒಳ್ಳೆಯ ತಾಯಿ, ತಂಗಿ, ಅಕ್ಕ ಹಾಗೂ ಹೆಂಡತಿ ಎಂದು ಹೇಳಿ ಪ್ರೀತಿ ವಾತ್ಸಲ್ಯ ನೀಡುವ ಸಮಾಜದಲ್ಲಿ ಇಂತಹ ಹೆಣ್ಣಿಗೆ ರಕ್ಷಣೆಯ ಜವಾಬ್ದಾರಿಯನ್ನು ಮಾಡಬೇಕು.
ಕೂಡಲೇ ಮನಿಷಾ ಕೊಲೆಯ ಹಿಂದಿರುವ ಪ್ರತಿಯೊಬ್ಬರನ್ನು ಗೆಲ್ಲಿಗೆ ಏರಿಸುವ ಮೂಲಕ ಯುವತಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನಿಷಾಗೆ ಶ್ರದ್ಧಾಂಜಲಿ:
ಶುಕ್ರವಾರ ಸಂಜೆ ಯಲಹಂಕದ ಬ್ಯಾಟನಾರಾಯಣಪುರದಲ್ಲಿ ಎ.ಬಿ.ವಿ.ಪಿ. ಕಾರ್ಯಕರ್ತರು ಮನಿಷಾ ಭಾವಚಿತ್ರ ಎದುರಿಗೆ ಮೇಣದ ಬತ್ತಿಗಳನ್ನು ಹಚ್ಚಿ ಶ್ರಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯಲಹಂಕ ಎ.ಬಿ.ವಿ.ಪಿ. ವಿದ್ಯಾರ್ಥಿನಿಯರ ಪ್ರಮುಖೆ ಚಿತ್ರಶ್ರಿ ಸೇರಿದಂತೆ ಕಾರ್ಯಕರ್ತರು ಇದ್ದರು.
Be the first to comment