-
- ಜಿಲ್ಲಾ ಸುದ್ದಿಗಳು
ಬಾಗಲಕೋಟೆ :ಪ್ರತಿವರ್ಷ ಮಳೆಯಿಲ್ಲದೆ ಕಳೆಗುಂದಿದ್ದ ಎಷ್ಟೋ ಜಲಪಾತಗಳು ಈ ಸಾರಿಯ ವರುಣನ ಕೃಪೆಯಿಂದಾಗಿ ತುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಒಂದಕ್ಕಿಂತ ಒಂದು ಜಲಪಾತಗಳು ನೋಡುಗರ ಕಣ್ಮನ ಸೆಳೆಯುತ್ತವೆ.ಪ್ರಕೃತಿ ಸೌಂದರ್ಯ ಆಸ್ವಾಧಿಸುವ ಸಹೃದಯಿಗಳಿಗೆ ಹಬ್ಬದ ವಾತಾವರಣ ಈಗ ಎಂಬುವುದರಲ್ಲಿ ಸಂದೇಹವಿಲ್ಲ.
ಬಾಗಲಕೋಟ ಜಿಲ್ಲೆಯಲ್ಲಿ ಹಿಂಗಾರು ಮಳೆ ಉತ್ತಮವಾಗಿದ್ದು ಕೆರೆ ಕಟ್ಟೆಗಳು ತುಂಬಿಕೊಂಡಿವೆ ಹಾಗೆ ಜಿಲ್ಲೆಯಾದ್ಯಂತ ಸಣ್ಣ ಪುಟ್ಟ ಜಾಲಪಾತಗಳು ಮೈದುಂಬಿ ಹಾರಿಯುತ್ತಿವೆ. ಗುಡ್ಡುಗಾಡು ಪ್ರದೇಶದಲ್ಲಿ ಹರಿಯುವ ಜಲಪಾತಗಳನ್ನು ಗೆಳೆಯರೊಂದಿಗೆ, ಗೆಳತಿಯರೊಂದಿಗೆ, ಕುಟುಂಬ ಸಮೇತವಾಗಿ ಬಂದು ನೀರಿನಲ್ಲಿ ಆಟವಾಡಿ ಜಲಪಾತಕ್ಕೆ ಮೈಯೊಡ್ಡಿ ಪಕೃತಿ ಸೌಂದರ್ಯ ಅಸ್ವಾಧಿಸುವ ಭರದಲ್ಲಿ ಕುಡಿದು ತಿಂದು ನಿರುಪುಯುಕ್ತ ವಸ್ತುಗಳನ್ನು ಅಲ್ಲೆ ಬಿಸಾಕಿ ಹೋಗುತ್ತಿರುವದು ಬೇಸರದ ಸಂಗತಿ.ಪಕೃತಿ ನಮಗೆ ಎಲ್ಲವನ್ನೂ ನೀಡದೆ ಅದಕ್ಕೆ ಚ್ಯುತಿಬರದ ಹಾಗೆ ನಡೆದುಕೊಳ್ಳುವುದು ನಮ್ಮೆಲ್ಲರ ಹೊಣೆ ಅಲ್ಲವೆ ದಯವಿಟ್ಟು ಜಲಾಪತಗಳಿಗೆ ಭೇಟಿ ನೀಡುವ ಸ್ನೇಹಿತರೇ ಸ್ಚಚ್ಚತೆಯನ್ನು ಕಾಪಡಿಕೊಳ್ಳಿ ಎಂದು ನನ್ನ ಮನವಿ.
ಈಗಾಗಲೇ ಸ್ಥಳೀಯರಿಗೆ ಪರಿಚಿತವಾಗಿರುವ ನಮ್ಮ ಜಿಲ್ಲೆಯ ಪ್ರಕೃತಿ ಸೌಂದರ್ಯದ ರಸದೌತನ ರಾಜ್ಯದ ಪ್ರವಾಗಸಿಗರು ಬಂದು ಆಸ್ವಾಧಿಸಿಲಿ ಜಾಲಪಾತಗಳ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೆನೆ ಸ್ನೇಹಿತರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ವರುಣನ ಆರ್ಭಟ ಜೋರಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿನ ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿವೆ. ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಜಿಲ್ಲೆಯಲ್ಲಿನ ಕೆಲ ಜಲಪಾತಗಳ ಸಮಗ್ರ ಮಾಹಿತಿ ಇಲ್ಲಿದೆ.
ಅಕ್ಕ ತಂಗಿ ಜಲಪಾತ ಬಾದಾಮಿ:
ಐತಿಹಾಸಿಕ ಸ್ಥಳವಾಗಿರುವ ಭೂತನಾಥ ದೇವಾಲಯದ ಹಿಂದೆ ಅಕ್ಕ-ತಂಗಿಯರ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಈ ನೀರು ಅಗಸ್ತ್ಯತೀರ್ಥ ಹೊಂಡಕ್ಕೆ ಸೇರುತ್ತದೆ. ಇದು ಬಾಗಲಕೋಟೆ ಜಿಲ್ಲಾ ಕೇಂದ್ರದಿಂದ 35 ಕಿ.ಮೀ. ದೂರದಲ್ಲಿದೆ.
ಹುಲಿಗೆಮ್ಮನಕೊಳ್ಳ ಕೊಳ್ಳದ ಜಲಪಾತ :
ಬಾದಾಮಿ ತಾಲೂಕಿನ ಬಿ. ಎನ್ ಜಾಲಿಹಾಳ ಗ್ರಾಮದಿಂದ 3 ಕಿ.ಮೀ ದೂರದಲ್ಲಿರುವ ಹುಲಿಗೆಮ್ಮ ಕೊಳ್ಳವು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಚಾಲುಕ್ಯರ ಕಾಲದಲ್ಲಿ ಈ ಪ್ರದೇಶವನ್ನು ಖಜಾನೆಯನ್ನಾಗಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಸುಂದರ ಪ್ರಕೃತಿ ಮಧ್ಯೆಯಿರುವ ಹುಲಿಗೆಮ್ಮ ಕೊಳ್ಳದಲ್ಲಿ ಸಾಧು-ಸಂತರು ತಪಸ್ಸು ಮಾಡುತ್ತಿದ್ದರು. ಚಾಲುಕ್ಯ ರಾಜರು ಕೂಡ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಈ ಜಲಪಾತ ಬಾಗಲಕೋಟೆ ಜಿಲ್ಲಾ ಕೇಂದ್ರದಿಂದ 45 ಕಿ.ಮೀ ದೂರದಲ್ಲಿದೆ.
ಗುಳೇದಗುಡ್ಡದ ಸಮೀಪ ಇರುವ ಕೋಟೆಕಲ್ ದಿಡಗಿನ ಜಲಪಾತ :
ಗುಳೇದಗುಡ್ಡ ಪಟ್ಟಣದ ಬೆಟ್ಟದ ಮೇಲಿರುವ ಈ ದಿಡಗಿನ ಜಲಪಾತಕ್ಕೆ 5 ಕಿ.ಮೀ ನಡೆದುಕೊಂಡೆ ಹೋಗಬೇಕು. ಸದ್ಯ ಭಾರೀ ಮಳೆಯಾಗುತ್ತಿರುವುದರಿಂದ ಈ ಜಲಪಾತ ಮೈದುಂಬಿ ಹರಿಯುತ್ತಿದೆ. ಸುಮಾರು 35 ಅಡಿ ಎತ್ತರದಿಂದ ನೀರು ಬೀಳುವ ಮೂಲಕ ಈ ಭಾಗದಲ್ಲಿ ಸುಂದರ ಜಲಪಾತ ಸೃಷ್ಟಿಯಾಗುತ್ತದೆ. ಬೆಟ್ಟ ಗುಡ್ಡಗಳ ಹಸಿರು ಸಿರಿಯ ಮಧ್ಯೆ ಹಾಲಿನ ನೊರೆಯಂತೆ ಹರಿಯುವ ಜಲಪಾತ ನೋಡುವುದೇ ಮನಮೋಹಕ. ಇದು ಜಿಲ್ಲಾ ಕೇಂದ್ರದಿಂದ 22 ಕಿ.ಮೀ ದೂರದಲ್ಲಿದೆ.
ಅವ್ವಕ್ಕನ ಕೊಳ್ಳ
ಗುಳೆದಗುಡ್ಡದಿಂದ ೬ ಕೀ.ಮಿ ಅಂತರದಲ್ಲಿ ಇರುವ ಹುಲ್ಲಿಕೇರಿ ಎಸ್. ಪಿ ಗ್ರಾಮದಿಂದ ಒಂದು ಕಿ.ಮಿ ಅಂತರದಲ್ಲಿಇರುವ ಅವ್ವಕ್ಕನಕೊಳ್ಳದ ಜಲಪಾತ ಮೈದುಂಬಿ ಹರಿಯುತ್ತಿದೆ. ಹಿಂಗಾರು ಮಳೆಯ ಮೊದಲಾರ್ಧದಲ್ಲಿ ಉತ್ತಮ ಮಳೆ ಬಿದ್ದಕಾರಣ ಪ್ರಕೃತಿ ಸೌಂದರ್ಯ ಇಮ್ಮಡಿಗೊಂಡಿದೆ. ಸಾಕಷ್ಟು ಪ್ರಮಾಣದ ನೀರು ಹರಿದು ಬಂದು ಖಾನಪೂರದ ಹತ್ತಿರ ಇರುವ ಈರಣ್ಣ ಕೆರೆ ಗಂಜಿಗೇರಿ ಕೆರೆ, ಖಾನಪೂರ ಕೆರೆ ಸೇರುತ್ತದೆ.
ಬಹಳಷ್ಟು ಜನರಿಗೆ ಈ ಜಲಾಪತದ ಮಾಹಿತಿ ಇಲ್ಲದೇ ಇರುವ ಕಾರಣಕ್ಕೆ ಜಲಪಾತದ ಜನ ಸಂದಣಿ ಅಷ್ಟಾಗಿ ಇರುವದಿಲ್ಲ. ಪ್ರಕೃತಿ ಸೌಂದರ್ಯ ಸವಿಯುವ ಸಹೃದಯಿಗಳ ಕುಟುಂಬ ಸಮೇತ ಹೋಗಿ ಜಲಪಾತದ ಜೊತೆಗೆ ಸಂಜೆಯ ಸೂರ್ಯಾಸ್ತದ ಸೌಂದಯರ್ಯದ ಸವಿಯನ್ನು ಸವಿಯಬಹುದು.
ಹಾಲಹಂಡೆ:
ಗುಳೆದಗುಡ್ಡ ತಾಲ್ಲೂಕಿನ ಹಾನಾಪೂರ ಎಸ್.ಪಿ ಗ್ರಾಮದಿಂದ ಪೂರ್ವಕ್ಕೆ ೧.೫ ಕೀ.ಮಿ ಅಂತರದಲ್ಲಿ ಇರುವ “ಹಾಲಹಂಡೆ” ನೋಡುಗರ ಮನ ಸೆಳೆಯುತ್ತದೆ. ಬಹಳಷ್ಟು ಜನರಿಗೆ ಈ ಹಾಲಹಂಡೆ ಜಲಪಾತದ ಪರಿಚಯವಿಲ್ಲ. ಗುಡ್ಡದ ಮೇಲಿಂದ ಸುಮಾರು ೩೦ ಅಡಿ ಎತ್ತರದಿಂದ ಹಾಲಿನ ನೊರೆಯಾಕಾರದಲ್ಲಿ ಬೀಲಿವು ನೀರು ಕೆಳಭಾಗದದಲ್ಲಿ ಹಂಡೆ ಆಕಾರದ ಕಂದಕ ನೈಸರ್ಗಿಕವಾಗಿ ಸೃಷ್ಟಿಯಾಗಿರುವುದರಿಂದ ಹಾಲಹಂಡೆಯ ಜಾಲಪಾತ ಎಂದು ಪ್ರಸಿದ್ದಿ ಪಡಿದೆದೆ. ಪ್ರಕೃತಿ ಸಹೃದಯಿಗಳು ಆಕರ್ಷಿಸುವ ಜಲಾಪಾತಗಳಲೊಂದಾಗಿದೆ. ಹಾನಪೂರ ಎಸ್ ಪಿ ಗ್ರಾಮದಿಂದ ಮುಂದೆ ಸಾಗಿದಾರೆ ಸರಸ್ವತಿ ನಗರ ಸಮೀಪ ರಸ್ತೆಯ ಬದಿಗೊಂದು ಕಿರು ಜಲಾಪತವಿದೆ.
ಶಿರೂರು ಪಡಿ ಜಲಧಾರೆಗಳು:ಬಾಗಲಕೋಟ ತಾಲ್ಲೂಕಿನ ಶಿರೂರು ಶಿದ್ದಲಿಂಗೇಶ್ವರ ದೇವಾಲಯದ ಹಿಂಭಾಗದ ಗುಡ್ಡದಲ್ಲಿ ಸಣ್ಣ ಸಣ್ಣ ಕಂದಕಗಳಲ್ಲಿ ಜಲಧಾರೆಗಳು ನೋಡುಗರ ಮನಸೆಳೆಯುತ್ತವೆ
ಸಿದ್ದನಕೊಳ್ಳ ಜಲಪಾತ :
ಇಲಕಲ್ಲ ತಾಲೂಕಿನಲ್ಲಿರುವ ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರ ಸಿದ್ದನಕೊಳ್ಳ ಜಲಪಾತ ಐತಿಹಾಸಿಕ ಕೇಂದ್ರ ಐಹೊಳೆಯಿಂದ ಕೇವಲ 10 ಕಿ.ಮೀ ದೂರದಲ್ಲಿದೆ. ಸಿದ್ದಪ್ಪಜ್ಜ ಮಠವಿರುವ ಹಿನ್ನೆಲೆ ಇದನ್ನು ಸಿದ್ದನಕೊಳ್ಳ ಎಂದು ಕರೆಯಲಾಗುತ್ತಿತ್ತು. ಇದು ಪವಾಡ ಪುರುಷರ ಪ್ರಸಿದ್ಧ ತಾಣ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಅನೇಕ ಸ್ಮಾರಕಗಳು ಇಲ್ಲಿ ಕಾಣಸಿಗುತ್ತವೆ. ಇತ್ತೀಚಿಗೆ ಡಾ.ಶಿವಕುಮಾರ್ ಸ್ವಾಮೀಜಿಗಳ ನೇತೃತ್ವದಲ್ಲಿ 24 ಗಂಟೆಗಳ ಕಾಲ ದಾಸೋಹ ನಡೆಯುತ್ತಿದ್ದು, ಕಲಾವಿದರ ನೆಚ್ಚಿನ ತಾಣವಾಗಿದೆ.
ದಮ್ಮೂರು ದಿಡಗು:
ಇಲಕಲ್ಲ ತಾಲೂಕಿನ ದಮ್ಮೂರ ಗ್ರಾಮದ ಬೆಟ್ಟದ ತುದಿಯಲ್ಲಿರುವ ದಮ್ಮೂರ ದಿಡಗ ಜಲಪಾತ ನಯನ ಮನೋಹರ. ಬೆಟ್ಟದ ತುದಿಯಿಂದ ಜಲಪಾತ ಹರಿಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತದೆ. ಮಳೆಗಾಲ ಸಂದರ್ಭದಲ್ಲಿ ಈ ಜಲಪಾತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇದು ಬಾಗಲಕೋಟೆ ಜಿಲ್ಲಾ ಕೇಂದ್ರದಿಂದ 60 ಕಿ.ಮೀ ದೂರದಲ್ಲಿದೆ. ಅಮೀನಗಡದಿಂದ ಗುಡೂರ ಗ್ರಾಮದ ಮಾರ್ಗವಾಗಿ ಇಲ್ಲಿಗೆ ಹೋಗಬಹುದು.
ರಂಗ ಸಮುದ್ರ ಡ್ಯಾಂ:
ಬಾದಾಮಿ ತಾಲೂಕಿನ ಭೀಮನಗಡ ಗ್ರಾಮದ ಬಳಿಯಿರುವ ರಂಗ ಸಮುದ್ರ ಡ್ಯಾಂ ಬೃಹತ್ ಕೆರೆಯಲ್ಲಿ ನಿರ್ಮಾಣ ಮಾಡಲಾಗಿದೆ. ಸುಮಾರು ಐದು ದಶಕಗಳ ಹಿಂದೆ ಈ ಭಾಗದ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಒದಗಿಸುವ ಉದ್ದೇಶದಿಂದ ರಂಗಸಮುದ್ರ ಡ್ಯಾಂ ನಿರ್ಮಾಣ ಮಾಡಲಾಗಿದೆ. ಪ್ರತಿವರ್ಷ ಮಳೆಯಿಲ್ಲದೆ ಕಳೆಗುಂದಿದ್ದ ಈ ಡ್ಯಾಂ ಈ ಬಾರಿ ತುಂಬಿ ಹರಿಯುತ್ತಿದೆ. ಇದು ಜಿಲ್ಲಾ ಕೇಂದ್ರದಿಂದ 65 ಕಿ.ಮೀ ದೂರದಲ್ಲಿದ್ದು, ಪಟ್ಟದಕಲ್ಲು ಮಾರ್ಗವಾಗಿ ಗುಡೂರಿಗೆ ಹೋಗುವ ರಸ್ತೆಯಲ್ಲಿ ಈ ಡ್ಯಾಂ ಕಾಣಸಿಗುತ್ತದೆ.
ದಕ್ಷಿಣದ ಕರ್ನಾಟಕ ಭಾಗದ ಪ್ರಕೃತಿ ಸೌಂದರ್ಯದ ರಸದೌತನ ಅನುಭವಿಸಲು ಹೊಗುವ ಪ್ರವಾಸಿಗರೇ ಉತ್ತರ ಕರ್ನಾಟಕದ ಅದರಲ್ಲೂ ಬಾಗಲಕೋಟ ಜಿಲ್ಲೆಯ ನೈಸರ್ಗಿಕ ಜಲಪಾತಗಳು ಮೈ ದುಂಬಿ ಹರಿಯುತ್ತಿವೆ.ಈ ಜಾಲಪಾತಗಳಿಗೊಮ್ಮೊ ಭೇಟಿ ನೀಡಿ ಪ್ರಕೃತಿಯ ರಸಾನುಭವವನ್ನು ಅನಭವಿಸಿ ಆನಂದಿಸಬಹುದು.ನೋಡ ಬನ್ನಿ ನಮ್ಮೂರ ಬಾಗಲಕೋಟೆ ಜಿಲ್ಲೆಯ ಪ್ರಕೃತಿಯ ಸಿರಿ ಸೊಬಗು.
Be the first to comment