ಜಮೀನಿನಲ್ಲಿ ಅಗೆದ ಹೊಂಡದಿಂದ ಬಸಿಗೆಟ್ಟ ಮುದ್ದೇಬಿಹಾಳ ತಾಲೂಕಿನ ಮದರಿ ಗ್ರಾಮ: ಕಳೆದ 8 ದಿನದಿಂದ ಚಿಂತಾ ಜನಕವಾದ ಮದರಿ ಗ್ರಾಸ್ಥರ ಜೀವನ….! ಸಮಸ್ಯೆಗೆ ಸ್ಪಂಧಿಸಿ ಸ್ಥಳಕ್ಕೆ ಬೇಟಿ ನೀಡಿದ ತಹಸೀಲ್ದಾರ ಮಳಗಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು



ಮುದ್ದೇಬಿಹಾಳ ಸೆ.29:

ಕಳೆದ ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆಯಿಂದ ಮುದ್ದೇಬಿಹಾಳ ತಾಲೂಕಿನ ಮದರಿ ಗ್ರಾಮದ ವ್ಯಾಪ್ತಿಯಲ್ಲಿ ಜಮೀನಿನ ಮಾಲಿಕರೊಬ್ಬರು ತಮ್ಮ ಹೊಲದಲ್ಲಿ ತೋಡಿದ ಹೊಂಡ ಸಂಪೂರ್ಣ ಭರ್ತಿಯಾಗಿದ್ದು ಪಕ್ಕದಲ್ಲಿಯೇ ಇರುವ ಮನೆಗಳು ಸಂಪೂರ್ಣವಾಗಿ ಬಸಿ ಹಿಡಿದಿವೆ. ಇದರಿಂದ ಕಂಗಾಲಾಗಿರುವ ಗ್ರಾಮಸ್ಥರು ತಮ್ಮ ದಿನನಿತ್ಯದ ಜೀವನವನ್ನು ಆತಂಕದಲ್ಲಿಯೇ ಕಳೆಯುವಂತಾಗಿದೆ.



ಮುದ್ದೇಬಿಹಾಳ ತಾಲೂಕಿನಲ್ಲಿ ಕಳೆದ ನಾಲ್ಕು ದಿನದಿಂದ ಮಳೆ ಸುರಿಯುತ್ತಿದೆ.ಇದರಿಂದ ಗ್ರಾಮದ ಮನೆಗಳು ಮಳೆ ನೀರಿನಿಂದಲೇ ಬಸಿ ಹಿಡಿಯುತ್ತಿವೆ ಎಂದು ಗ್ರಾಮಸ್ಥರು ತಿಳಿದುಕೊಂಡಿದ್ದರು. ಆದರೆ ಸೋಮವಾರದಿಂದ ಮಳೆ ಪ್ರಮಾಣ ಕಡಿಮೆಯಾದರೂ ಮನೆಯ ಗೋಡೆಗಳು ಬಸಿ ಹಿಡಿಯುವುದು ಬಿಡದ ಕಾರಣ ಇದರ ಮೂಲವನ್ನು ಹುಡುಕಿ ಹೊರಟ ಗ್ರಾಮಸ್ಥರಿಗೆ ಸಮಸ್ಯೆಯ ಮೂಲ ಸ್ವರೂಪ ಕಂಡು ಬಂದಿದೆ.



ನಾಶವಾದ ಮೇವಿನ ಬಣವೆ:
ದನ ಕರುಗಳಿಗಾಗಿ ಸಂಗ್ರಹಿಸಿಟ್ಟಿದ್ದ ರೈತರು ಬಣಿವೆಗೂ ನುಗ್ಗಿರುವ ಹೊಂಡದ ಬಸಿ ನೀರು ಮೇವು ಸಂಪೂರ್ಣ ನಾಶವಾಗುವಂತೆ ಮಾಡಿದೆ. ಇದರಿಂದ ದನ ಕರುಗಳಿಗೆ ಏನು ಹಾಕಬೇಕು? ಬೆಸಿಗೆಯಲ್ಲಿ ಉಪಯುಕ್ತವಾಗುತ್ತವೆ ಎಂಬ ಉದ್ದೇಶದಿಂದ ಬಣಿವೆಗಳನ್ನು ಮಾಡಲಾಗಿತ್ತು. ಆದರೆ ಹೊಂಡದ ನೀರಿನಿಂದ ಸಂಪೂರ್ಣ ನಾಶವಾಗಿವೆ ಎಂದು ಗ್ರಾಮದ ಜನರು ಆರೋಪಿಸಿದ್ದಾರೆ.



ಹಲವಾರು ಮನೆಗಳಿಗೆ ಹಾನಿ:
ಹೊಂಡ ತೆಗೆದಿರುವ ಜಮೀನು ಗ್ರಾಮದ ಮನೆಗಳ ಪಕ್ಕದಲ್ಲಿಯೇ ಇದ್ದ ಕಾರಣ ಅಂದಾಜು 40 ಫೋಟು ತೆಗೆದಿರುವ ಹೊಂಡವು ಸಂಪೂರ್ಣವಾಗಿ ಭರ್ತಿಗೊಂಡಿದೆ. ಹೊಂದಡ ಪ್ರಮಾಣ ಮೇಲ್ದರ್ಜೆಯಲ್ಲಿದ್ದು ಮನೆಗಳ ತಲಪಾಯ ಕೆಳಗಡೆಯಾಗಿದೆ. ಇದರಿಂದ ಅಂದಾಜು 50 ಮನೆಗಳ ಗೋಡೆಗಳು ಬಸಿ ಬಿಟ್ಟಿವೆ. ಕೂಡಲೇ ಇದರ ಬಗ್ಗೆ ತಾಲೂಕಾ ದಂಡಾಧಿಕಾರಿಗಳು ಸಮಗ್ರ ವರದಿ ಪಡೆದುಕೊಂಡು ಹಾನಿಗೊಳಗಾದ ಮನೆಗಳಿಗೆ ಸೂಕ್ತ ಪರಿಹಾರ ಒದಗಿಸುವ ಕಾರ್ಯ ಮಾಡಬೇಕು ಎಂದು ಗ್ರಾಮದ ಜನರಾದ ರೇವಣಪ್ಪ ಮೇಟಿ, ಪರಸಪ್ಪ ಕುರಿ, ಸಂಗಪ್ಪ ರೂಢಗಿ, ಶರಣಪ್ಪ ವಡ್ಡರ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.


ಸಂಕ್ರಾಂಮಿಕ ರೋಗಕ್ಕೆ ಆಹ್ವಾನ ನೀಡುತತಿರುವ ಗಲೀಜು ನೀರು:
ಹೊಂಡದಿಂದ ಬಸಿ ಬಿಡುತ್ತಿರುವ ನೀರು ಗ್ರಾಮವನ್ನು ಸಂಪೂರ್ಣವಾಗಿ ಆವರಿಸಿದ ಪರಿಣಾಮ ಪ್ರತಿಯೊಂದು ಮನೆಯ ಮುಂದೆ ಗಲೀಜು ನೀರು ನಿಂತಿದೆ. ಇದರಿಂದ ಗ್ರಾಮದಲ್ಲಿ ಸಂಕ್ರಾಮಿಕ ರೋಗಗಳ ಬೀತಿ ಆವರಿಸಿದೆ.



ಅಂಬಿಗಾ ನ್ಯೂಸ್ ಗೆ ಸ್ಪಂದಿಸಿದ ತಹಸೀಲ್ದಾರ ಸ್ಥಳಕ್ಕೆ ಬೇಟಿ: 

ಮದರಿ ಗ್ರಾಮದಲ್ಲಿ ಹೊಂಡಯೊಂದರಿಂದ ಗ್ರಾಮದ ಮನೆಗಳು ಬಸಿ ಬಿಡುತ್ತಿರುವ ಮಾಹಿತಿ ಪಡೆದುಕೊಂಡ ತಹಸೀಲ್ದಾರ ಜಿ.ಎಸ್.ಮಳಗಿ ಅವರು ಮದರಿ ಗ್ರಾಮಕ್ಕೆ ಬೇಟಿ ನೀಡಿ ಹಾನಿಯಾದ ಬಗ್ಗೆ ವಿಕ್ಷಣೆ ಮಾಡಿದರು. ನಂತರ ಮಾತನಾಡಿದ ಅವರು, ಕೂಡಲೇ ಜಮೀನಿನಲ್ಲಿ ಹೊಂಡ ತೆಗೆದಿರುವ ಮಾಲಿಕರೊಂದಿಗೆ ಮಾತನಾಡಿ ನೀರನ್ನು ತೆಗೆಸುವ ವ್ಯವಸ್ಥೆ ಮಾಡುತ್ತೇನೆ. ಅಲ್ಲದೇ ಇದೇ ಹೊಂಡಕ್ಕೆ ಕೆಬಿಜೆಎನ್ಎಲ್  ಕಾಲುವೆಯಿಂದ ನೀರು ತುಂಬಲಾಗುತ್ತಿದೆ. ಇದು ಕಾನೂನು ಭಾಹೀರವಾಗಿದೆ. ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ಕಳುಹಿಸುವೆ ಎಂದು ದೂರವಾಣಿ ಮೂಲಕ ಅಂಬಿಗ್ ನ್ಯೂಸ್ ಗೆ ಮಾತನಾಡಿದರು.


ಮುದ್ದೇಬಿಹಾಳ ತಹಸೀಲ್ದಾರ ಜಿ.ಎಸ್.ಮಳಗಿ ಮಂಗಳವಾರ ಸಂಜೆ ಮದರಿ ಗ್ರಾಮಕ್ಕೆ ಬೇಟಿ ನೀಡಿ ಸಮಸ್ಯೆ ಆಳಿಸುತ್ತಿರುವುದು.

ಅಭಿನಂದಿಸಿದ ಗ್ರಾಮಸ್ಥರು:

ಮದರಿ ಗ್ರಾಮದಲ್ಲಿ ಹಲವು ದಿನಗಳಿಂದ ಸಮಸ್ಯೆ ಎದುರಾಗಿತ್ತು. ಆದರೆ ಸ್ಥಳೀಯ ಗ್ರಾಪಂ ಅಥವಾ ಗ್ರಾಮ ಲೆಕ್ಕಾಧಿಕಾರಿಗಳು ಬೇಟಿ ನೀಡಿರಲಿಲ್ಲಾ. ಆದರೆ ಸಂಜೆಯಾಗಿದ್ದರೂ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ತಹಸೀಲ್ದಾರ ಜಿ.ಎಸ್.ಮಳಗಿ ಅವರಿಗೆ ಗ್ರಾಮಸ್ಥರಿಂದ ಅಭಿನಂದನೆ ಸುರಿಮಳೆ ಬಂದಿದೆ.



 

Be the first to comment

Leave a Reply

Your email address will not be published.


*