ಧರೆಗೆ ಉರುಳಿದ ಬೃಹತ್ ಮರ…!!! ತಪ್ಪಿದ ಭಾರಿ ಅನಾಹುತ…!

ವರದಿ: ಕಾಶಿನಾಥ ಬಿರಾದಾರ

ಜಿಲ್ಲಾ ಸುದ್ದಿಗಳು

ನಾಲತವಾಡ:

ವಿಜಯಪುರ ಜಿಲ್ಲಾದ್ಯಾಂತ ಸುರಿಯುತ್ತಿರುವ ಭಾರೀ ಮಳೆಗೆ ಬೃಹತ್ ಬೇವಿನ ಮರಯೊಂದು ಧರೆಗೆ ಉರುಳುವ ಸಂದರ್ಭದಲ್ಲಿ ಪ್ರಯಾಣಿಕರು ಹಾಗೂ ಸವಾರರು ಜಸ್ಟ್ ಮಿಸ್ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ನಾಲತವಾಡ ಪಟ್ಟಣದಿಂದ ಮುದ್ದೇಬಿಹಾಳ ಹೋಗುವ ಮುಖ್ಯ ರಸ್ತೆಯಲ್ಲಿ ನಡೆದಿದೆ.



ಜಿಲ್ಲೆಯಲ್ಲಿ ಸತತವಾಗಿ ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಧರಗೆ ಮರ ಉರುಳಿದೆ. ಇದೇ ಸಂದರ್ಭದಲ್ಲಿ ಮರ ಪಕ್ಕದಲ್ಲಿದ ಕೆಇಬಿ ತಂತಿ ಮೇಲೆ ಬಿದ್ದಿದೆ. ಇನ್ನು ಕೆಇಬಿ ಸಿಬ್ಬಂದಿಯ ಸಮಯಪ್ರಜ್ಞೆ ಹಿನ್ನೆಲೆ ಕೆಇಬಿ ಕರೆಂಟ್ ಆಫ್ ಮಾಡಿದ್ದಾರೆ. ಇದರಿಂದ ಭಾರಿ ಅನಾಹುತ ತಪ್ಪಿದೆ.‌ ಅಲ್ಲದೇ,ಸ್ಥಳಕ್ಕೆ ಆಗಮಿಸಿದ ಕೆಇಬಿ ಶಾಖಾ ಅಧಿಕಾರಿ M.S.ತೇಗ್ಗಿನಮಠ ಹಾಗೂ ಸಿಬ್ಬಂದಿ ಇದ್ದರು. ಮುದ್ದೇಬಿಹಾಳದಿಂದ ರಾಯಚೂರು, ಯಾದಗಿರಿ ಹೋಗುವ ಮಾರ್ಗ ಸ್ಥಗಿತಗೊಂಡಿದಕ್ಕೆ ಸಾಲುಗಟ್ಟಿ ನಿಂತಿರುವ ಬಸ್, ವಾಹನಗಳು ನಿಂತಿವೆ. ಅದಕ್ಕಾಗಿ ರಸ್ತೆ ಮಧ್ಯೆ ಬಿದ್ದಿರುವ ಮರ ತೆಗೆಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.



ಕೂಡಲೇ ಸ್ಥಳಕ್ಕೆ ಪಟ್ಟಣ ಪಂಚಾಯತ ಸಿಬ್ಬಂದಿಗಳು ಆಗಮಸಿ ಬ್ರಹತ ಮರವನ್ನು JCB.ಮೂಲಕ ತೆರುವುಗೂಳಿಸಿ ಬಸ್ಸ್ ಹಾಗೂ ವಾಹನ ಸವಾರರಿಗೆ ಸಂಚರಿಸಲು ಅನುವು ಮಾಡಿಕೊಟ್ಟರು. 

 

 

Be the first to comment

Leave a Reply

Your email address will not be published.


*