ಕೆಸರು ಗದ್ದೆಯಂತಾದ ಹುಣಸಗಿ ಸಮೀಪದ ದೇವಪುರ (ಜೆ) ಗ್ರಾಮದ ರಸ್ತೆ ಅಧಿಕಾರಿಗಳು ಹಾಗೂ ಜನಪ್ರತಿನಿದಿನಗಳ ವಿರುದ್ಧ ಗ್ರಾಮಸ್ಥರ ಹಿಡಿ ಶಾಪ

ವರದಿ ರಾಘವೇಂದ್ರ ಮಾಸ್ತರ ಸುರಪುರ

ಹುಣಸಗಿಯಿಂದ 3 ಕಿ ಮೀ ಅಂತರದಲ್ಲಿರುವ ಹುಣಸಗಿಯಿಂದ ದೇವಾಪೂರ.ಜೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆಗೆ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ..

ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಅಧಿಕ ಮಳೆಯಾಗಿರುವ ಕಾರಣ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಹ ಮುಳುಗಡೆಯಾಗಿ ಸಂಪರ್ಕ ಬಂದ್ ಆಗಿದೇ ದಿನನಿತ್ಯ ನೂರಾರು ಕಾರ್ಮಿಕರು ಹುಣಸಗಿ ನಗರಕ್ಕೆ ಕೆಲಸಕ್ಕೆಂದು ಆಗಮಿಸುತ್ತಾರೆ ಆದರೆ ಮಳೆ ಬಂದು ಸಂಪರ್ಕ ಕಟ್ ಆಗಿರುವ ಕಾರಣ ಕಾರ್ಮಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೇ.
ಜನಪ್ರತಿನಿದಿನಗಳು ಕೇವಲ ಚುನಾವಣೆಗಳು ಬಂದಾಗ ಮಾತ್ರ ಗ್ರಾಮಕ್ಕೆ ಆಗಮಿಸಿರುವುದನ್ನು ಬಿಟ್ಟರೆ ಇಲ್ಲಿಯವರೆಗೂ ಯಾವೊಬ್ಬ ಅಧಿಕಾರಿಗಳು ಹಾಗೂ ಮುಖಂಡರುಗಳು ಆಗಮಿಸಿ ಗ್ರಾಮದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಿಲ್ಲ ಎನ್ನುವುದು ದೇವಪುರ (ಜೆ) ಗ್ರಾಮಸ್ಥರ ಅಳಲು.➡️


ಮಳೆ ಬಂದರೆ ಸಾಕು ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಕೆವಲ ಹತ್ತು ನಿಮಿಷದಲ್ಲಿ ಸಂಚರಿಸುವ ದಾರಿಯನ್ನು ಅರ್ಧ ಗಂಟೆ ಸಮಯದಲ್ಲಿ ತಲುಪಬೇಕಾಗಿದೆ .

ರಸ್ತೆ ಕೂಡ ಮಂಜೂರಾಗಿದೆ ಎನ್ನುವ ಮಾತು ಅಲ್ಲಲ್ಲಿ ಸಾಮಾಜಿಕ ವಲಯದಲ್ಲಿ ಹರಿದಾಡುತ್ತಿದೇ ಹೊರತು ಇನ್ನೂ ಪ್ರಾರಂಭವಾಗಿಲ್ಲ, ಆದಷ್ಟು ಬೇಗ ಕಾಮಗಾರಿ ಆರಂಭೀಸಬೆಕು ಇಲ್ಲದಿದ್ದರೆ ಮಳೆಗಾಲ ಮುಗಿಯುವವರೆಗೂ ತಾತ್ಕಾಲಿಕವಾಗಿ ಮಣ್ಣು ಹಾಕಿಸುವ ಮೂಲಕ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು
ಸ್ಥಳೀಯ ಶಾಸಕರಿಗೆ ಹಾಗೂ ಸಂಬಧಪಟ್ಟ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಪತ್ರಿಕಾ ಹೆಳಿಕೆ ನೀಡುವ ಮೂಲಕ ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಸಂಘದ ಹಣಸಗಿ ತಾಲ್ಲೂಕು ಘಟಕದ ಅಧ್ಯಕ್ಷ ಆನಂದ ಹೊಸಗೌಡ್ರ
ಆಗ್ರಹಿಸಿದ್ದಾರೆ.

Be the first to comment

Leave a Reply

Your email address will not be published.


*