ರಾಜ್ಯ ಸುದ್ದಿಗಳು
ಬೆಂಗಳೂರು:
ಕನ್ನಡದ ಝೀ ಟಿವ್ಹಿ ಚಾನೆಲನಲ್ಲಿ ಪ್ರಸಾರವಾಗುವ ಮಹರ್ಷಿವಾಣಿ ಕಾರ್ಯಕ್ರಮದಿಂದ ರಾಜ್ಯದ ಮನೆ ಮಾತಾಗಿರುವ ಡಾ.ಆನಂದ ಗುರೂಜಿ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಕ್ತರಿಗೆ ವಂಚಿಸುವ ಜಾಲ ಪತ್ತೆಯಾಗಿದೆ.
ಹೌದು, ಈ ಕುರಿತು ಡಾ.ಆನಂದ ಗುರೂಜಿ ಅವರೇ ಸ್ಪಷ್ಠನೆ ನೀಡಿದ್ದು ಸಾಮಾಜಿಕ ಜಾಲತಾಣಗಳಾದ ಫೇಸಬುಕ್,ಟ್ವೀಟರ್ ಸೇರಿದಂತೆ ಇನ್ನಿತರ ಜಾಲಗಳಲ್ಲಿ ಕೆಲವರು ಗುರೂಜಿ ಅವರ ಹೆಸರಿನಲ್ಲಿ ಲೂಟಿ ಹೊಡೆಯುವ ಯತ್ನ ನಡೆಸಿದ್ದಾರೆ. ಅಲ್ಲದೇ ಕೆಲವರು ಭಕ್ತರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಕೆಲವರು ಡಾ.ಆನಂದ ಗುರೂಜಿ ಅವರನ್ನು ಬೇಟಿ ಮಾಡಿಸುವುದಾಗಿ ಜನರಿಂದ ಹಣ ಲೂಟಿ ಹೊಡೆದರೆ ಇನ್ನೂ ಕೆಲವರು ಗುರೂಜಿ ಅವರ ಹೆಸರಿನಲ್ಲಿಸುಳ್ಳು ಭವಿಷ್ಯವನ್ನು ಹೇಲುತ್ತಾ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಏನೆ ಆದರೂ ಗುರೂಜಿ ಅವರ ಹೆಸರಿನಲ್ಲಿ ಏನೇ ತೊಂದರೆಯಾದರೂ ಹಾಗೂ ವಂಚನೆಗೊಳಗಾದರೆ ನೇರವಾಗಿ ಪೊಳಿಸರಿಗೆ ದೂರು ನೀಡಬೇಕೆಂದು ಗುರೂಜಿ ಅವರೇ ಭಕ್ತರಿಗೆ ತಿಳಿಸಿದ್ದಾರೆ.
Be the first to comment