ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ ಸೆ.22:
ಮುದ್ದೇಬಿಹಾಳ ತಾಲೂಕಿನ ಭಾರತೀಯ ಜನತಾ ಪಾರ್ಟಿ ಎಸ್.ಸಿ. ಮೊರ್ಚಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ತಾಲೂಕಾ ಅಧ್ಯಕ್ಷ ಮಂಜುನಾಥ ಚಲವಾದಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಈಗಾಗಲೇ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ಇತಿಹಾಸ ಮೂಡಿಸಿ ಜನರಲ್ಲಿ ಬದಲಾವಣೆ ತಂದಿದೆ. ಕಳೆದ ಹಲವಾರು ವರ್ಷಗಳಿಂದ ಅಭಿವೃದ್ಧಿಯಲ್ಲಿ ಹಿಂದಿದ್ದ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಪ್ರತಿಯೊಂದು ಗ್ರಾಮವೂ ಮೂಲಭೂತ ಸೌಕರ್ಯಗಳಿಂದ ಅಭಿವೃದ್ಧಿ ಹೊಂದುತ್ತಿದೆ. ಇದಕ್ಕಾಗಿ ಪಕ್ಷವನ್ನು ಇನಷ್ಟು ಬಲಪಡಿಸಲು ಪಕ್ಷದ ಹಿರಿಯ ಆದೇಶದಂತೆ ಎಸ್.ಸಿ. ಮೊರ್ಚಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಮುದ್ದೇಬಿಹಾಳ ತಾಲೂಕಾ ಎಸ್.ಸಿ. ಮೊರ್ಚಾ ಉಪಾಧ್ಯಕ್ಷರಾಗಿ ಆಲೂರಿನ ಶೇಖಪ್ಪ ಮಾದರ, ಮುದ್ದೇಬಿಹಾಳ ಪಟ್ಟಣದ ಶಶಿಕುಮಾರ ಹಂಗರಗಿ, ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ ಅರಸನಾಳ, ಕಾರ್ಯದರ್ಶಿಗಳಾಗಿ ಪ್ರವೀಣ ಮಾದರ(ಬಸರಕೋಡ), ವಿಶಾಲ ಲಮಾಣಿ(ನೇಬಗೇರಿ), ಅಯ್ಯಪ್ಪ ಬಂಡಿವಡ್ಡರ(ನಾಲತವಾಡ), ವೀರೇಶ ಬಜಂತ್ರಿ(ಬಿದರಕುಂದಿ), ಖಜಾಂಚಿಯಾಗಿ ಕಾಶಿನಾಥ ಮಮ್ರಕರ್(ತಾಳಿಕೋಟಿ) ಸೇರಿದಂತೆ 11 ಜನ ಕಾರ್ಯಕಾರಣಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.
Be the first to comment