ಕಲಬುರಗಿ: ಸಂತೋಷ ಕಾಲೋನಿಯಲ್ಲಿರುವ ಕೆ.ಎಚ್.ಬಿ ಗ್ರೀನ್ ಪಾರ್ಕ ಬಡಾವಣೆಯ ಮೂಲಭೂತ ಸೌಕರ್ಯಗಳಾದ ಕಸ ವಿಲೇವಾರಿ, ಬೀದಿ ದೀಪ ಅಳವಡಿಸುವುದು, ಬಿದ್ದು ಹೋದ ಕಾಂಪೌಂಡ್ ಗೋಡೆ ನಿರ್ಮಿಸುವುದು ಹಾಗೂ ಅಚ್ಚುಕಟ್ಟಾಗಿ ಬಡಾವಣೆಯ ನಿರ್ವಹಣೆ ಮಾಡಲು ಸೋಮವಾರ ದಿನಾಂಕ 14.09.2020 ರಂದು ಮಹಾನಗರ ಪಾಲಿಕೆ ಆಯುಕ್ತರಾದ ಲೋಖಂಡೆ ಸ್ನೇಹಲ ಸುಧಾಕರ ಅವರಿಗೆ ಬಡಾವಣೆಯ ಮುಖಂಡರಾದ ಸಂಜೀವಕುಮಾರ ಶೆಟ್ಟಿ, ಸಂಗಮೇಶ ಸರಡಗಿ, ನಾಗೇಂದ್ರಪ್ಪ ದಂಡೋತಿಕರ, ಡಿ.ವಿ ಕುಲಕರ್ಣಿ, ರೇವಣಸಿದ್ದಪ್ಪ ರುದ್ರವಾಡಿ, ಹಣಮಂತ್ರಾಯ ಅಟ್ಟುರ, ಚಂದ್ರಕಾಂತ ತಳವಾರ, ರಾಜಶೇಖರ ಜಕ್ಕಾ, ಕೆ.ವಿ ಕುಲಕರ್ಣಿ, ಶ್ರೀನಿವಾಸ ಬುಜ್ಜಿ, ಬಾಲಕೃಷ್ಣ ಕುಲಕರ್ಣಿ, ಸಿದ್ದಾರೂಡ ಅಷ್ಟಗಾ, ವಿರೇಶ ಬೋಳಶೆಟ್ಟಿ, ಲೋಕಯ್ಯ ಸ್ವಾಮಿ, ಶಂಬುಲಿಂಗ ವಾಡಿ ಹಾಗೂ ಇನ್ನಿತರ ಮುಖಂಡರು ಮನವಿ ಸಲ್ಲಿಸಿದರು.
ಮಹಾನಗರ ಪಾಲಿಕೆಯ ಆಯುಕ್ತರು ಕೆ.ಎಚ್.ಬಿ ಗ್ರೀನ್ ಪಾರ್ಕ ಬಡಾವಣೆಯ ನಿವಾಸಿಗಳ ಮನವಿಗೆ ಸ್ಪಂದಿಸಿ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ದಿನ ನಿತ್ಯ ಕಸ ವಿಲೇವಾರಿ ಮಾಡಲು ಆದೇಶಿಸಿದರು.
ಕತ್ತಲಲ್ಲಿರುವ ಕೆ.ಎಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಬೀದಿ ದೀಪಗಳನ್ನು ಮೂರು ದಿನಗಳಲ್ಲಿ ಅಳವಡಿಸಲಾಗುವುದು ಎಂದು ಕರ್ನಾಟಕ ಗೃಹ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬರವಸೆ ನೀಡಿದರು.
ಇತ್ತಿಚೆಗೆ ಬಾರಿ ಮಳೆಯಿಂದ ಕುಸಿದು ಬಿದ್ದ ಬಡಾವಣೆಯ ಕಾಂಪೌಂಡ್ ಗೋಡೆಯನ್ನು ಮುಖ್ಯ ಕಛೇರಿಯ ಅನುಮೋದನೆ ಸಿಕ್ಕ ಬಳಿಕ ಗೋಡೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
Be the first to comment