ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಪ್ರಧಾನಿ ಮೋದಿಯವರು ರಾಷ್ಟ್ರದ ಯುವಕರಿಗೆ ಉದ್ಯೋಗ ಸೃಷ್ಠಿಸುವುದಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಿದ್ದಾರೆ. ರೈತರು ಜಮೀನಿನಲ್ಲಿ ಬೆಳೆದ ಬೆಳೆಗಳ ತ್ಯಾಜ್ಯದಿಂದ ಎಥೆನಾಲ್ ಸೃಷ್ಠಿಸುವ ವಿನೂತನ ತಂತ್ರಜ್ಞಾನವನ್ನು ರೂಪಿಸಿದ್ದು ಇದರಿಂದ ರಾಜ್ಯ ಸೇರಿದಂತೆ ಪ್ರತಿಯೊಂದು ಗ್ರಾಮೀಣ ಪ್ರದೇಶದ ಯುವಕರಿಗೆ ಉದ್ಯೋಗ ಸೃಷ್ಠಿಗೆ ಬಹಳಷ್ಟು ಸಹಕಾರಿಯಾಗುತ್ತದೆ ಎಂದು ಶಾಸಕ, ಕರ್ನಾಕಟ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಮುದ್ದೇಬಿಹಾಳ ತಾಲೂಕಿನ ಸಲಮಿ ತಾಂಡಾದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ತಾಂಡಾದ ರಮಣಾದೇವಿ ದೇವಸ್ಥಾನದಲ್ಲಿ ತಾಂಡಾ ನಿವಾಸಿಗರಿಂದ ಏರ್ಪಡಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನನಗೆ ರಾಜಕೀಯ ರಂಗದಲ್ಲಿ ಕಳೆದ 15 ವರ್ಷಗಳಿಂದ ತಾಂಡಾ ನಿವಾಸಿಗರಿಂದ ಸಾಕಷ್ಟು ಬೆಂಬಲ ದೊರಕುತ್ತಾ ಬಂದಿದೆ. ಹಿಂದಿನ 10 ವರ್ಷದ ದೇ.ಹಿಪ್ಪರಗಿ ಕ್ಷೇತ್ರದಲ್ಲೂ ನನಗೆ ತಾಂಡಾ ನಿವಾಸಿಗರಿಂದಲೇ ಹೆಚ್ಚಿನ ಬೆಂಬಲ ದೊರಕಿದೆ. ಮುದ್ದೇಬಿಹಾಳ ಮತಕ್ಷೇದಲ್ಲೂ ರಾಜಕೀಯ ರಂಗದಲ್ಲಿ ಇತಿಹಾಸ ಸೃಷ್ಠಿಸುವ ಗೆಲವು ಸಾಧಿಸುವಲ್ಲಿ ಶೇ.98ರಷ್ಟು ಮತಗಳನ್ನು ನೀಡಿದ ಚಲಮಿ ತಾಂಡಾವೂ ಒಂದಾಗಿದೆ ಎಂದು ಅವರು ಹೇಳಿದರು.
ಸಮಾಜ ಸೇವಕ ಶಾಂತಗೌಡ ನಡಹಳ್ಳಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿಯೇ ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಅನುಧಾನ ತಂದವರಲ್ಲಿ ಶಾಸಕ ನಡಹಳ್ಳಿ ಅವರು ಪ್ರಥಮ ಸ್ಥಾನದಲ್ಲಿದ್ದಾರೆ. ಕ್ಷೇತ್ರ ಜನತೆಗೆ ನೀಡಿದ ಭರವಸೆಯಂತೆ ಪ್ರತಿಯೊಂದು ಗ್ರಾಮಕ್ಕೂ ಅಭಿವೃದ್ಧಿ ಅನುಧಾನವನ್ನು ಹಂಚಿಕೆ ಮಾಡಿದ್ದು ಇದರ ಸದುಪಯೋಗವನ್ನು ಗ್ರಾಮೀಣ ಜನರು ಯಾವುದೇ ಪಕ್ಷಭೇದ ಮಾಡದೇ ಕಾಮಗಾರಿಗೆ ಅಡ್ಡಿಮಾಡದೇ ಪಡೆದುಕೊಂಡರೆ ಶಾಸಕರ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಂತಾಗುತ್ತದೆ ಎಂದು ಅವರು ಹೇಳಿದರು.
ಭೂ ಕಾಯ್ದೆ ತಿದ್ದುಪಡೆಯಿಂದ ಸಾಕಷ್ಟು ಲಾಭ:
ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜ್ಯದ ಯುವ ಜನತೆಯನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಮಾಡಿರುವ ಭೂ ಕಾಯ್ದೆ ತಿದ್ದುಪಡೆಯಿಂದ ಉದ್ಯೋಗ ಆಧರಿಸಿ ಹೊರ ರಾಜ್ಯ ಮತ್ತು ದೇಶಗಳಿಗೆ ಹೋದ ಯುವ ಜನರು ಮರಳಿ ತಮ್ಮ ಸ್ವಗ್ರಾಮಕ್ಕೆ ಮರಳಿ ಉದ್ಯೋಗ ಮಾಡುವಂತಾಗಿದೆ. ಇದು ಕೇವಲ ಯುವಕರಿಗೆ ಯದ್ಯೋಗಕ್ಕಾಗಿ ಮಾತ್ರವಲ್ಲದೇ ಕುಟುಂಬದ ಹಿರಿಯರ ಯೋಗಕ್ಷೇಮಕ್ಕೂ ಅನುಕೂಲವಾಗಿದೆ ಎಂದು ಶಾಸಕ ನಡಹಳ್ಳಿ ಅವರು ರಾಜ್ಯ ಸರಕಾರದ ಯೋಜನೆಯ ಬಗ್ಗೆ ಗ್ರಾಮೀಣ ಜನರಿಗೆ ತಿಳಿಹೇಳಿದರು.
ಮುದ್ದೇಬಿಹಾಳ ಮತಕ್ಷೇತ್ರದ ಕೆ.ಬಿ.ಜೆ.ಎನ್. ಅಚ್ಚುಕಟ್ಟು ಪ್ರದೇಶಗಳಾದ ಯಲ್ಲಮ್ಮನ ಬೂದಿಹಾಳ, ಕಾಶಿನಕುಂಟಿ ಸೇರಿದಂತೆ ತಾಲೂಕಿನ ಚಲಮಿ ಹಾಗೂ ಚಲಮಿ ತಾಂಡಾದಲ್ಲಿ ಸಿಸಿ ರಸ್ತೆ, ಚರಂಡಿಯ ಒಟ್ಟು ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಇದೇ ವೇಳೆ ಎರಡೂ ಗ್ರಾಮಗಳಲ್ಲಿ ಗ್ರಾಮಸ್ಥರ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿದರು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಸಿಪಿಐ ಆನಂದ ವಾಗಮೋಡೆ, ಬಿಜೆಪಿ ಧುರೀಣರಾದ ಮಲಕೇಂದ್ರಗೌಡ ಪಾಟೀಲ, ಚಿದಾನಂದಗೌಡ ಬಿರಾದಾರ (ಹೊಸಮನಿ), ರಾಮಣ್ಣ ಡೋಣೂರ, ಸಿದ್ದನಗೌಡ ಪಾಟೀಲ, ಮುತ್ತು ಗುಬಚಿ, ಶಂಕರಗೌಡ ಬಿರಾದಾರ, ಹಣಮಗೌಡ ಭೂತಲ್, ಶಿವನಗೌಡ ಹುಬ್ಬಳ್ಳಿ, ಬಸವರಾಜ ಚಿಂತಾಮಣಿ, ಆಯಾ ಗ್ರಾಮಗಳ ಪ್ರಮುಖರು, ಕೆಬಿಜೆಎನ್ನೆಲ್ ಅಧಿಕಾರಿಗಳು ಇದ್ದರು.
Be the first to comment