ದಿ.ದೇವರಾಜ ಅರಸು ಅವರ ದೂರದೃಷ್ಠಿಯಂತೆ ಕಾರ್ಯನಿರ್ವಹಣೆ : ಕೆ.ಎಫ.ಸಿ.ಎಸ್.ಸಿ. ನೂತನ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ರಾಜ್ಯ ಸುದ್ದಿಗಳು

ಬೆಂಗಳೂರು ಸೆ.7:

ರಾಜ್ಯದ ಬಡವರಿಗೆ ನೆಮ್ಮದಿಯಿಂದ ಊಟ ಮಾಡಬೇಕು ಎಂಬ  ದೂರದೃಷ್ಠಿಯನ್ನು ಇಟ್ಟುಕೊಂಡು ಸೆ.7 1973ರಲ್ಲಿ ಕೇವಲ 2.25 ಲಕ್ಷ ಶೇರ ಬಂಡವಾಳದೊಂದಿಗೆ  ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರು ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಸ್ಥಾಪನೆಗೊಂಡ ನಿಗಮದ ಅಧ್ಯಕ್ಷ ಸ್ಥಾನ ದೊರಕಿದ್ದು ನನ್ನ ಪೂರ್ವಜನ್ಮದ ಮುಣ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ನಿಮಗ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.



ಸೋಮವಾರ ಕೆ.ಎಫ್.ಸಿ.ಎಸ್.ಸಿ ಕಛೇರಿಯಲ್ಲಿ ನಿಗಮದ 47ನೇ ವಾರಷಿಕೋತ್ಸವ ಸಮಾರಭದಲ್ಲಿ ದಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸ್ಥಾಪನೆಗೊಂಡ ಸಮಯದಲ್ಲಿ ವರ್ಷಕ್ಕೆ ಕೇವಲ 8 ಕೋಟಿಯಷ್ಟು ಭಲಸುತ್ತಿತ್ತು. ಆದರೆ ಸದ್ಯಕ್ಕೆ ರಾಜ್ಯದ ಜನತೆಗೆ ನಿಗಮದಿಂದ 3300 ಕೋಟಿಗೂ ಹೆಚ್ಚು ಅನುಧಾನ ವಹಿವಾಟು ಮಾಡುತ್ತಿದೆ. ಇಂದಿನ ದಿನಗಳಲ್ಲಿ ದೇವರಾಜ ಅರಸು ಅವರು ದೂರದೃಷ್ಠಿಗೆ ಪ್ರತಿಫಲ ಸಿಕ್ಕಂತಾಗಿದೆ ಎಂದು ಅವರು ಹೇಳಿದರು.

ನಿಗಮದಲ್ಲಿ ಹೊಸ ವಿಚಾರಗಳು:

ಇಂದಿನ ಆಧುನಿಕ ದಿನಗಳಲ್ಲಿ ನಿಗಮದಲ್ಲಿ ಹೊಸ ಹೊಸ ವಿಚಾರಗಳನ್ನು ಮಾಡಲಾಗುತ್ತಿದೆ. ನಿಮಗದಲ್ಲಿ ನಿರ್ವಹಣೆ ಹಾಗೂ ನಿಮಗದಲ್ಲಿನ ಸೋರಿಕೆ ಹೇಗೆ ತಡೆಗಟ್ಟಬಹುದು ಸೇರಿದಂತೆ ಇನ್ನಿತರ ವಿಚಾರಗಳನ್ನು ಮಾಡಲಾಗುತ್ತಿದ್ದು ಬರುವ 20 ದಿನಗಳಲ್ಲಿ ಪ್ರತಿಯೊಂದು ಆಧುನಿಕ ತಂತ್ರಜ್ಞಾನವನ್ನು ಅಳವಡಿಕೆ ಮಾಡಲಾಗುವುದು ಎಂದು ನಿಗಮ ಅಧ್ಯಕ್ಷ ನಡಹಳ್ಳಿ ಹೇಳಿದರು.



ನಿಗಮದ ಉನ್ನತಿಗಾಗಿ ಸೇವೆಸಲ್ಲಿಸುವೆ: 

ರಾಜ್ಯದ ಬಡ ಜನರ ಹೊಟ್ಟೆತುಂಬಿಸುವ ನಿಗಮದ ಅಧ್ಯಕ್ಷನನ್ನಾಗಿ ನನ್ನನ್ನು ಆಯ್ಕೆ ಮಾಡಿದ ಮುಖ್ಯಮಂತ್ರಿಗಳಿಗೆ ಮೊದಲ ಧನ್ಯವಾದಗಳನ್ನು ಹೇಳಬೇಕು. ದಿ.ದೇವರಾಜ ಅರಸು ಅವರ ದೂರದೃಷ್ಠಿಯಲ್ಲಿಯೇ ನಿಮಗವನ್ನು ಕೊಂದೊಯ್ದುವ ದಾರಿಯಲ್ಲಿ ನಡೆದು ಅಸರು ಅವರ ಕನಸಿಗೆ ಇನ್ನೂ ಹೆಚ್ಚಿನ ಬಣ್ಣ ಹಚ್ಚುವ ಕಾರ್ಯ ಮಾಡುತ್ತೇನೆ ಎಂದು ನೂತನ ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಭರವಸೆ ನೀಡಿದರು.

Be the first to comment

Leave a Reply

Your email address will not be published.


*