ಏಕಾಏಕಿ ಗ್ರಾಮಲೆಕ್ಕಗಿರ ಸಾಜಾ ಬದಲಾಯಿಸಿದ ತಹಸೀಲ್ದಾರ..! ಬದಲಾವಣೆಯನ್ನು ರದ್ದುಗೊಳಿಸುವಂತೆ ಗ್ರಾಮಸ್ಥರ ಆಗ್ರಹ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

ಮುದ್ದೇಬಿಹಾಳ ತಾಲೂಕಿನ ಯರಝರಿ ಸಾಜಾಕ್ಕೆ ಗ್ರಾಮ ಲೆಕ್ಕಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ರಫೀಕ್ ಮುಲ್ಲಾ ಅವರನ್ನು ಏಕಾಏಕಿ ಅವರ ಸಾಜಾವನ್ನು ಬದಲಾವಣೆ ಮಾಡಿದ್ದು ಬಹುತೇಕ ಗ್ರಾಮಸ್ಥರಿಗೆ ಅನಾನುಕೂವಾಗಿದ್ದು ಕೂಡಲೇ ಸಾಜಾ ಬದಲಾವಣೆ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಗುರುವಾರ ಯರಝರಿ ಗ್ರಾಮಸ್ಥರು ತಹಸೀಲ್ದಾರ ಜಿ.ಎಸ್.ಮಳಗಿ ಅವರಿಗೆ ಮನವಿ ಸಲ್ಲಿಸಿದ್ದಾರೆ.



ಗ್ರಾಮಲೆಕ್ಕಾಧಿಕಾರಿ ರಫೀಕ್ ಮುಲ್ಲಾ ಅವರು ಈಗಾಗಲೇ ಗ್ರಾಮಲೆಕ್ಕಾಧಿಕಾರಿಗಳಾಗಿ ಕೆಲವೇ ತಿಂಗಳಲ್ಲಿಯೇ ಗ್ರಾಮಸ್ಥರೊಂದಿಗೆ ಉತ್ತಮ ಭಾಂದವ್ಯವನ್ನು ಮಾಡಿಕೊಂಡು ಎಲ್ಲ ಜನರಿಗೆ ಸರಕಾರದ ಯೋಜನೆ ಅಥವಾ ನಿಯಮಾವಳಿಗಳ ಪ್ರಕಾರ ಕಾರ್ಯವನ್ನು ನಿರ್ವಹಿಸುತ್ತಾ ಬಂದಿರುತ್ತಾರೆ. ಆದರೆ ತಹಸೀಲ್ದಾರ ಅವರು ಏಕಾಏಕಿ ಅವರ ಸಾಜಾವನ್ನು ಬದಲಾವಣೆ ಮಾಡಿದ್ದು ಗ್ರಾಮಸ್ಥರಿಗೆ ತೊಂದರೆಯಾಗುತ್ತದೆ. ಈಗಾಗಲೇ ಜನರೊಂದಿಗೆ ಉತ್ತಮವಾಗಿ ಸರಕಾರದ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಯಶಸ್ವಿಯಾಗಿರುವ ಮುಲ್ಲಾ ಅವರನ್ನು ಮರಳಿ ಯರಝರಿ ಸಾಜಾಕ್ಕೆ ನಿಯೋಜಿಸಬೇಕು ಎಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.



ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸಂಗಪ್ಪ ಬಾಗೇವಾಡಿ, ಮು್ತಪ್ಪ ಪೂಜಾರಿ, ನಿಂಗಪ್ಪ ಹುಲ್ಲೂರ, ಬಸವರಾಜ ಹಾರವಾಳ, ಪ್ರಭುಗೌಡ ಗುರಡ್ಡಿ, ಮಲ್ಲಿಕಾರ್ಜುನ ಸರಸಣಗಿ, ಲಕ್ಷ್ಮಣ ಡಮನಾಳ, ಹಸನಸಾಬ ಬಾಗಲಕೋಟ, ಯಲ್ಲಪ್ಪ ಚಲವಾದಿ ಮನವಿಗೆ ಸಹಿ ಹಾಕಿದ್ದಾರೆ.

Be the first to comment

Leave a Reply

Your email address will not be published.


*