ಡೆಕೋರೆಟಿವ್ ಲೈಟ್ಸ ಉದ್ಯಮ ಆರಂಭಿಸಿದ ಶಿವಣ್ಣ ನವರ ಬಾಳಿಲ್ಲಿ ಬೆಳಕು

ದಿನಾಂಕ 06-07-2019,
ವರದಿ- ಸೂರ್ಯಪ್ರಕಾಶ ಕೋಲಿ

ಬೆಂಗಳೂರು-ಡೆಕೋರೆಟಿವ್ ಲೈಟ್ಸ್ ವ್ಯಾಪಾರದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧಿಸಿರುವ ಬೆಂಗಳೂರಿನ ಉದ್ಯಮಿ SRS ಲೈಟ್ಸ್ ಮಾಲಿಕರಾದ ಕೋಲಿ ಸಮಾಜದ ಶಿವಣ್ಣನವರು.

ಬೆಂಗಳೂರಿನ ಅತ್ಯಂತ ಶ್ರೀಮಂತ, ಪ್ರತಿಷ್ಠಿತ ವ್ಯಾಪಾರಿ
ವಾಣಿಜ್ಯ ಕೇಂದ್ರವಾದ BVK ಐಯ್ಯಂಗಾರ್ ರಸ್ತೆಯಲ್ಲಿ ಕೋಲಿ ಗಂಗಾಮತ ಸಮಾಜದ ಬಂಧುಗಳಾದ
ಶಿವಣ್ಣನವರು SRS ಲೈಟ್ಸ್ ಹೆಸರಿನ ಎರಡು ದೊಡ್ಡ ಅಂಗಡಿಗಳಲ್ಲಿ ಡೆಕೋರೆಟಿವ್ ಲೈಟ್ಸ್ ನಾ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದಾರೆ,


ಮೂಲತ ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕು,
ಹೆರಂದಪ್ಪನಹಳ್ಳಿಯಾವರಾದ ಇವರು ಸುಮಾರು
35 ವರ್ಷಗಳ ಹಿಂದೆ ಡೆಕೋರೆಟಿವ್ ಲೈಟ್ಸ್ ಅಂಗಡಿಯಲ್ಲಿ ಕೆಲಸಗಾರರಾಗಿ ಸೇರಿಕೊಂಡು
ವ್ಯಾಪಕವಾದ ಅನುಭವ, ವ್ಯಾಪಾರದ ರೀತಿ ನೀತಿಗಳಲ್ಲಿ ಪಳಗಿ, ಅಧ್ಯಯನ ಮಾಡಿ 2009 ರಲ್ಲಿ
SRS ಲೈಟ್ಸ್ ಹೆಸರಿನಲ್ಲಿ ತಮ್ಮದೇ ಸ್ವಂತ ವ್ಯಾಪಾರ ಶುರು ಮಾಡುತ್ತಾರೆ,


ಕೇವಲ 5 ನೇ ತರಗತಿಯವರೆಗೆ ಶಿಕ್ಷಣ ಪಡೆದಿರುವ ಇವರು ತಮ್ಮ ಅನುಭವ, ಜಾಣ್ಮೆ, ಛಲದ ಕಾರಣ SRS ಲೈಟ್ಸ್ ಅಂಗಡಿಯ ವ್ಯವಹಾರವನ್ನು ಯಶಸ್ವಿಯಾಗಿ ಮುನ್ನೆಡೆಸಿದ್ದಾರೆ,
ಮೊದಲ ಅಂಗಡಿಯು 300 ಚದರ ಆಡಿಯಾಗಿದ್ದು
ಎರಡನೇ ಹಾಗೂ ನೂತನ ಅಂಗಡಿಯು 1250 ಚದರ ಆಡಿ ಆಳತೆಯ ಬೃಹತ್ ಅಂಗಡಿಯಾಗಿದೆ,
ಇವರ ಅಂಗಡಿಗೆ ನೇರವಾಗಿ ಚೀನಾ ದೇಶದಿಂದ ಡೆಕೋರೆಟಿವ್ ಲೈಟ್ಸ್ ಗಳನ್ನು ಹೋಲ್ ಸೇಲ್ ದರದಲ್ಲಿ ಖರೀದಿಸಿ ತರುತ್ತಾರೆ.

ಉತೃಷ್ಟ, ಉನ್ನತ ಅತ್ಯುತ್ತಮ ಗುಣಮಟ್ಟದ ಡೆಕೋರೆಟಿವ್ ಲೈಟ್ಸ್ ಗಳನ್ನು ಆತ್ಯಂತ ಕಡಿಮ ಹಾಗೂ
ಆಕರ್ಷಕ ಬೆಲೆಗೆ ಮಾರಾಟ ಮಾಡುತ್ತಾರೆ
ಅದರಿಂದ ಇವರಿಗೆ ಹೆಚ್ಚಿನ ಗ್ರಾಹಕರ ಬಳಗವಿದೆ,
ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡಿರುವುದು
ಇವರ ವ್ಯಪಾರದ ಹೆಗ್ಗಳಿಕೆ ಅದರಿಂದ ಇಂದು ಶಿವಣ್ಣನವರು ಮಾರ್ಕೆಟ್ ಕಿಂಗ್ ಎಂದೇ ಪ್ರಖ್ಯಾತಿ ಪಡೆದಿದ್ದಾರೆ.

 

ಇವರ ವ್ಯಾಪಾರ ಸಂಸ್ಥೆಗಳಲ್ಲಿ 10 ಜನರಿಗೆ ಉದ್ಯೋಗ ನೀಡಿದ್ದು , ವಾರ್ಷಿಕವಾಗಿ ಲಕ್ಷಾಂತರ ರೂಪಾಯಿಗಳ ಸಂಬಳ ನೀಡುವ ಅನ್ನದಾತರಾಗಿದ್ದಾರೆ.
3 ಕೋಟಿ ರೂಪಾಯಿಗಳಿಗು ಅಧಿಕ ಬಂಡವಾಳ ಹೂಡಿಕೆ ಮಾಡಿ, ಯಶಸ್ವಿ ಉದ್ಯಮ ನೆಡೆಸುತ್ತಿರುವ
ಶಿವಣ್ಣನವರು ಕೋಲಿ ಗಂಗಾಮತಸ್ಥರು ಕೂಡ
ವ್ಯಾಪಾರ, ಉದ್ಯಮಗಳಲ್ಲಿ ತೊಡಗಿಸಿ ಕೊಳ್ಳಲು
ಕರೆ ನೀಡಿದ್ದಾರೆ.
ಡೆಕೋರೆಟಿವ್ ಲೈಟ್ಸ್ ಉದ್ಯಮದಲ್ಲಿ ಆಸಕ್ತಿ ಇರುವ ಸಮಾಜ ಬಂದವರಿಗೆ ಸಲಹೆ, ಸೂಚನೆ, ಮಾರ್ಗದರ್ಶನ ನೀಡುವುದಾಗಿ ತಿಳಿಸಿದ್ದಾರೆ,


  • ಆಸಕ್ತಿ ಇರುವರು ಅವರನ್ನು ಸಂಪರ್ಕಿಸಲು ವಿನಂತಿ,
    ಅವರ ಪೋನ್ ನಂಬರ್ 9964389258.
    ಮುಂದಿನ ದಿನಗಳಲ್ಲಿ ವ್ಯಾಪಾರ ಉದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುವ ಉದ್ದೇಶವಿದ್ದು,
    ಡೆಕೋರೆಟಿವ್ ಲೈಟ್ಸ್ ನಾ ತಯಾರಿಸುವ ಫ್ಯಾಕ್ಟರಿ
    ಸ್ಥಾಪಿಸಿ ಚೀನಾ ದೇಶದ ಉದ್ಯಮಗಳಿಗೆ ಸ್ಪರ್ಧೆ
    ನೀಡಿ ದೇಶದ ಖ್ಯಾತು ಎತ್ತಿ ಹಿಡಿಯುವ ಗುರಿ ಹೊಂದಿರುವುದಾಗಿ ಶಿವಣ್ಣನವರು ತಿಳಿಸಿದರು.
    ಶಿವಣ್ಣನವರು ತಮ್ಮ ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸಲಿ, ತಮ್ಮ ಅಭೂತಪೂರ್ವ ಗುರಿ ಸಾಧಿಸಲಿ
    ಎಂದು ಸಮಸ್ತ ಕೋಲಿ ಸಮಾಜದ ಹಾರೈಕೆ ಆಗಿದ್ದು ಸಮಾಜಕ್ಕೆ ಪ್ರೇರಣೆ, ಮಾದರಿಯಾಗಿರುವ ಶಿವಣ್ಣನವರಿಗೆ ಸಮಾಜದವತಿಯಿಂದ ಅನಂತ ಅನಂದ ಧನ್ಯವಾದಗಳು, ಅಭಿನಂದನೆಗಳು.

 

Be the first to comment

Leave a Reply

Your email address will not be published.


*