ನಡುಗಡ್ಡೆಯಲ್ಲಿ ಪ್ರವಾಹಕ್ಕೆ ಸಿಲುಕಿರುವ 230 ಕುರಿಗಳು ಮತ್ತು ಕುರಿಗಾಹಿ ರಕ್ಷಣೆಗೆ NDRF ತಂಡ ಸಿದ್ಧತೆ

ವರದಿ:ರಾಘವೇಂದ್ರ ಮಾಸ್ತರ ಯಾದಗಿರಿ

ಜಿಲ್ಲಾ ಸುದ್ದಿಗಳು

ಡ್ರೋನ್ ಕ್ಯಾಮೆರಾ ಸಹಾಯದಿಂದ ಕುರಿಗಾಹಿಯ ಪತ್ತೆ.

230 ಕುರಿಗಳ ಜೊತೆಗೆ ನಡುಗಡ್ಡೆಯಲ್ಲಿ ಸಿಲುಕಿ ಹಾಕಿಕೊಂಡಿರುವ ಕುರಿಗಾಹಿ ತೋಫಣ್ಣ.

ಯಾದಗಿರಿ: ನಾರಾಯಣಪುರ ಹತ್ತಿರದ ಛಾಯಾ ಭಗವತಿ ದೆವಸ್ಥಾನದ ಸಮೀಪದಲ್ಲಿರುವ ನಡುಗಡ್ಡೆ ಹಾಗೂ ಮೇಲಿನಗಡ್ಡಿ ಯಲ್ಲಿ ಕೃಷ್ಣಾ ನದಿ ಪ್ರವಾಹದ ತಪ್ಪಲು ನಡುಗಡ್ಡೆಯಲ್ಲಿ ಐಬಿ ತಾಂಡಾದ ಕುರಿಗಾಹಿ ಸುಮಾರು 230 ಕುರಿಗಳೊಂದಿಗೆ ಸಿಕ್ಕಿ ಹಾಕಿಕೊಂಡಿರುವುದು ಪತ್ತೆಯಾಗಿದೆ.
ಕುರಿಗಾಹಿ ರಕ್ಷಣೆಗೆ ಹೈದರಾಬಾದ್ ನಿಂದ ಆಗಮಿಸಿದ ಕೇಂದ್ರದ ಎನ್ ಡಿಆರ್ ಎಫ್ ನ 16 ಜನರ ತಂಡ ನದಿ ತೀರಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಗೆ ತಯಾರಿ ನಡೆಸಿದ್ದಾರೆ.

ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಯಾವ ಸ್ಥಳದಿಂದ ಕಾರ್ಯಾಚರಣೆ ನಡೆಸಿದರೆ, ಸೂಕ್ತ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ.

ಸದ್ಯಕ್ಕೆ ಜಲಾಶಯದಿಂದ ನದಿಗೆ ಹರಿವು 2.20 ಲಕ್ಷ ಕ್ಯೂಸೆಕ್ ನಿಂದ 1.79 ಲಕ್ಷ ಕ್ಯೂಸೆಕ್ ಗೆ ಇಳಿಕೆಯಾಗಿದೆ.

ಕುರಿಗಾಹಿ ಟೋಪಣ್ಣ ಎಂಬವರು 4 ದಿನಗಳ ಹಿಂದೆ ಕುರಿಮೇಯಿಸಲು ನಡುಗಡ್ಡೆಗೆ ತೆರಳಿದ್ದರು ನದಿಗೆ ನೀರು ಹೆಚ್ಚಾಗಿರುವುದರಿಂದ ಆಚೆ ಬರಲಾಗದೆ ಅಲ್ಲಿಯೇ ಸಿಲುಕಿದ್ದಾನೆ . ಮೊದಲು 165 ಕುರಿಗಳಿವೆ ಎಂದು ಅಂದಾಜಿಸಲಾಗಿತ್ತು. ಆದರೆ ಟೋಪಣ್ಣ ಬಳಿ ಸದ್ಯ 230 ಕುರಿಗಳು ನಡುಗಡ್ಡೆಯಲ್ಲಿ ಸಿಲುಕಿದ್ದು 4 ದಿನಗಳಿಂದ ಊಟವಿಲ್ಲದೆ ಕುರಿ ಹಾಲು ಕುಡಿದು ದಾಹ ನೀಗಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಸ್ವತಃ ಸುರಪುರದ ಶಾಸಕ ರಾಜೂಗೌಡರು ತಮ್ಮ ಸುಪುತ್ರ ಮಣಿಕಂಠಗೌಡನ ಜೊತೆಗೆ ತೆರಳಿ ಡ್ರೋನ್ ಕ್ಯಾಮೆರಾ ಸಹಾಯದಿಂದ ಕಾರ್ಯಾಚರಣೆ ನಡೆಸಿ ಕುರಿಗಾಹಿ ತೊಪಣ್ಣನನ್ನು ಪತ್ತೇ ಹೆಚ್ಚಿದ್ದಾರೆ.

ಸ್ಥಳದಲ್ಲಿ ಸುರಪುರ ಶಾಸಕ ರಾಜುಗೌಡ ಹಾಗೂ ತಾಲೂಕಾಡಳಿತ ಅಧಿಕಾರಿಗಳು ಸ್ಥಳದಲ್ಲೇ ಮುಕ್ಕಾಲು ಹೂಡಿದ್ದಾರೆ.

ಹೈದರಬಾದ ಎನ್ ಡಿ ಆರ್ ಎಫ್ ನ 16 ಜನರ ತಂಡ ಎರಡು ಏರ್ ಬೋಟುಗಳನ್ನು ಸಿದ್ದಪಡಿಸಿದ್ದು, ಅಗ್ನಿ ಶಾಮಕದಳದ ಒಂದು ಬೋಟ್ ನದಿ ದಡದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.


 

 

Be the first to comment

Leave a Reply

Your email address will not be published.


*