ಪಿಯುಸಿ ಫಲಿತಾಂಶದಲ್ಲಿ ಯಲಹಂಕ ಸರಕಾರಿ ಕಾಲೇಜು ವಿದಯಾರ್ಥಿಗಳ ಸಾಧನೆ

ವರದಿ: ಆಕಾಶ ಚಲವಾದಿ, ಬೆಂಗಳೂರು.

ರಾಜ್ಯ ಸುದ್ದಿಗಳು



ಬೆಂಗಳೂರು:

ನಗರದ ಯಲಹಂಕ ಸೀಮೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶೇ.94ರಷ್ಟು ಫಲಿತಾಂಶ ಪಡೆಸಿದ್ದು ಕಾಲೇಜಿನ ಪ್ರಾಚಾರ್ಯರು ಹಾಗೂ ಆಡಳಿತ ಮಂಡಳಿಯವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ನಗ್ಮಾ ವಿದ್ಯಾರ್ಥಿಯು ಒಟ್ಟು 600 ಅಂಕಕ್ಕೆ 568 ಅಂಕಗಳನ್ನು ಪಡೆದು ಕಾಲೇಜಿ ಪ್ರಥಮ ಸ್ಥಾನ ಪಡೆದಿದ್ದು, ಪ್ರೀಯಾ.ಆರ್. 562 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಾಗೂ ಮೀನಾಕ್ಷಿ.ಎಸ್. 561 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನೂ ಸ್ವಪ್ನ.ಕೆ. 560, ಅಕ್ಷತಾ.ಎಸ್. 558, ಕಾವ್ತ.ಎ.553, ಮಧುಮತಿ.ಎಂ.552, ಅಸೈನ್ ಸಾಬ 549 ಸೇರಿಂತೆ ಒಟ್ಟು 26 ವಿದ್ಯಾರ್ಥಿಗಳು ಶೇ.90ರಷ್ಟು ಸಾಧನೆ ಮಾಡಿದ್ದಾರೆ.



ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಅಧ್ಯಕ್ಷರು, ಸದಸ್ಯರು, ಕಾಲೇಜಿನ ಅಭಿವೃದ್ಧಿ ಸಮೀತಿ, ಪ್ರಾಂಶುಪಾಲರು, ಅಧ್ಯಾಪಕ ವೃಂದ, ಬೋಧಕೇತರ ಸಿಬ್ಬಂದಿಯವರು ಅಭಿನಂಧಿಸಿದ್ದಾರೆ.

“ಸರಕಾರಿ ಕಾಲೇಜು ಎಂದರೆ ಜನಸಾಮಾನ್ಯರಲ್ಲಿ ಏನೊ ಒಂದು ಭಯದ ವಾತಾವರಣವಿದೆ. ವಿದ್ಯಾರ್ಥಿಗಳಿಗೆ ಸರಕಾರಿ ಕಾಲೇಜುಗಳನ್ನು ಪೂರ್ಣ ಶಿಕ್ಷಣ ಸಿಗುವುದಿಲ್ಲ ಎಂಬ ನಂಬಿಕೆ ಇದೆ. ಇದನ್ನು ಪ್ರಸ್ತುತ ಸಾಲಿನ ವಿದ್ಯಾರ್ಥಿಗಳು ಶೇಕಡಾವಾರು ಫಲಿತಾಂಶ ಪಡೆಯುವ ಮೂಲಕ ಅಲ್ಲಗೈಸಿದ್ದು ಕಾಲೇಜಿನ ಗೌರವಪೂರ್ವಕವಾಗಿದೆ. ಮುಂಬರುವ ಶೈಕ್ಷಣಿ ವರ್ಷದಲ್ಲೂ ಇಂತಹದೇ ಫಲಿತಾಂಶಕ್ಕೆ ಕಾಲೇಜು ಎದುರುನೋಡುತ್ತಿದ್ದು ಇದರಲ್ಲಿ ಫಲಿತಾಂಶ ಬರುವಲ್ಲಿ ಯಾವುದೇ ಸಂದೇಹವಿಲ್ಲ.”

-ಎಸ್.ಆರ್.ವಿಶ್ವನಾಥ,

ಶಾಕರು ಹಾಗೂ ಅಧ್ಯಕ್ಷರು,

ಕಾಲೇಜಿ ಅಭಿವೃದ್ಧಿಸಮೀತಿ,

ಸರಕಾರಿ ಪ.ಪೂ. ಕಾಲೇಜು, ಯಲಹಂಕ.

“ನಮ್ಮ ಕಾಲೇಜಿನ ವಿದ್ಯಾರ್ಥಿಗಳು 2019-20ನೇ ಸಾಲಿನಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಇದಕ್ಕೆ ಕಾಲೇಜಿನ ಅಧ್ಯಾಕಪಕರು ಹಾಗೂ ಕಾಲೇಜಿಗೆ ವಿವಿಧ ಸೌಕರ್ಯಗಳನ್ನು ನೀಡುವಲ್ಲಿ ಯಶಸ್ವಿಯಾಗಿರುವ ಕಾಲೇಜು ಅಭಿವೃದ್ಧಿ ಸಮೀತಿ ಅಧ್ಯಕ್ಷರು ಮತ್ತು ಸದಸ್ಯರೇ ಕಾರಣ. ಿದರೊಂದಿಗೆ ವಿದ್ಯಾರ್ಥಿಗಳು ಉತ್ತಮಾಗಿ ಬರವಣಿಗೆ ಮೂಲಕ ಕಾಲೇಜಿ ಕೀರ್ತಿ ಹೆಚ್ಚಿಸದ್ದಾರೆ. ಮುಂದಿನ ವರ್ಷದ ಫಲಿತಾಂಶ ಇದಕ್ಕೂ ಹೆಚ್ಚಿಗೆ ಆಗಬೇಕು ಎಂಬ ನೀರಿಕ್ಷೆ ಇದೆ.”

-ಪಾಲಾಕ್ಷ.ಟಿ,

ಕಾರ್ಯದರ್ಶಿಗಳು ಹಾಗೂ ಪ್ರಾಂಶುಪಾಲರು,

ಸರಕಾರಿ ಪ.ಪೂ.ಕಾಲೇಜು,

ಯಲಹಂಕ.

Be the first to comment

Leave a Reply

Your email address will not be published.


*