ಸ್ಥಳೀಯ ಸಂಸ್ಥೆಗಳ ಅಧಿಕಾರವಧಿ ಆಡಳಿತ ಮಂಡಳಿ ರಚನೆಗೆ ಆಗ್ರಹ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

ಕಳೆದ 2 ವರ್ಷಗಳ ಹಿಂದೆ ಸ್ಥಳೀಯ ಸಂಸ್ಥಯ ಚುನಾಯಿತ ಸದಸ್ಯರಾಗಿ ಆಯ್ಕೆಯಾಗಿದ್ದರೂ ಇಲ್ಲಿಯವರೆಗೂ ಅಧಿಕಾರವಧಿಯ ಆಡಳಿತ ಮಂಡಳಿಯ ರಚನೆಯಾಗದಿರುವುದು ಮುದ್ದೇಬಿಹಾಳ ಸಾರ್ವಜನಿಕರಿಗೆ ಕೊರತೆಯಾಗಿದ್ದು ಕೂಡಲೇ ಅಧಿಕಾರವಧಿಯ ಆಡಳಿತ ಮಂಡಳಿ ರಚನೆ ಮಾಡಬೇಕು ಎಂದು ಆಗ್ರಹಿಸಿ ಪುರಸಭೆ ಚುನಾಯಿತ ಸದಸ್ಯರು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಮನವಿ ಸಲ್ಲಿಸಿದರು.



ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾಯಿತಿ ಪಟ್ಟಿ ಮಾಡುವಲ್ಲಿ ಕೆಲ ರಾಜ್ಯಮಟ್ಟದ ಅಧಿಕಾರಿಗಳ ಲೋಪದಿಂದ ಚುನಾಯಿತ ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಆಡಳಿತ ಮಂಡಳಿ ರಚಿಗೆ ತಡವಾಗಿದೆ. ಇದರಿಂದ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಾಗಿದೆ. ಆದ್ದರಿಂದ ಕೂಡಲೇ ಅಧಿಕಾರ ವರ್ಗದವರೊಂದಿಗೆ ಚರ್ಚಿಸಿ ಮುಂದೆ ಯಾವುದೇ ಲೋಪದೋಷಗಳು ಆಗದಂತೆ ಎಚ್ಚರಿಸಿ ಮೀಸಲಾಯಿತಿ ಬಿಡುಗಡೆ ಮಾಡಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ವಿರೇಶ ಹಡಲಗೇರಿ, ಮೆಹಬೂಬ ಗೊಳಸಂಗಿ, ಶರೀಫಾ ಮೂಲಿಮನಿ, ಶಾಜಾದಬಿ ಹುಣಚಗಿ, ಯಲ್ಲಪ್ಪ ನಾಯಕಮಕ್ಕಳ, ರಿಯಾಜಅಹ್ಮದ ಢವಳಗಿ, ಮಹ್ಮದರಫೀಕ ದ್ರಾಕ್ಷಿ, ಶಿವಪ್ಪ ಹರಿಜನ, ಚಾಂದಬಿ ಮಕಾಂದಾರ, ಬಸವರಾಜ ಮುರಾಳ, ಅಶೋಕ ವನಹಳ್ಳಿ, ಬಸವರಾಜ ತಟ್ಟಿ, ಸಹನಾ ಬಡಿಗೇರ, ಪ್ರೀತಿ ದೇಗಿನಾಳ, ಭಾರತಿ ಪಾಟೀಲ, ಪ್ರತಿಭಾ ಅಂಗಡಗೇರಿ, ಚನ್ನಪ್ಪ ಕಂಠಿ, ಸಂಗಮ್ಮ ದೇವರಳ್ಳಿ ಇದ್ದರು.

Be the first to comment

Leave a Reply

Your email address will not be published.


*