ರಾಜ್ಯ ಸುದ್ದಿಗಳು
ಮುದ್ದೇಬಿಹಾಳ ಜು.04:
ಉತ್ತರ ಕರ್ನಾಟಕದ ಅಭಿವೃದ್ಧಿಯಾಗಬೇಕಾದ ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವುದಕ್ಕೆ. ರಾಜ್ಯ ಸರಕಾರ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎನ್ನುವುದಕ್ಕೆ ಈ ಭಾಗದ ಎರಡು ಉಪ ಮುಖ್ಯಮಂತ್ರಿಗಳ ಸ್ಥಾನ ನೀಡಿರುವುದೇ ಸಾಕ್ಷಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಅವರು ಮುದ್ದೇಬಿಹಾಳ ಪಟ್ಟಣಕ್ಕೆ ಮಂಜೂರಾದ ಎಸ್.ಎಫ್.ಸಿ ಯೋಜನೆಯಡಿಯಲ್ಲಿ ಅಂದಾಜು 20 ಕೋಟಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿ, ಮುದ್ದೇಬಿಹಾಳ ಜನತೆ ಒಂದು ವಾಹನ ಪರವಾಣಿಗೆ ಪಡೆಯಲು ಸುಮಾರು 80 ಕಿ.ಮೀ. ದೂರಕ್ಕೆ ಹೋಗಬೇಕಾಗಿಲ್ಲ. ಅತೀ ಶೀಘ್ರದಲ್ಲಿಯೇ ಇಲ್ಲಿಯೇ ಆರ್.ಟಿ.ಓ. ಕಛೇರಿ ಪ್ರಾರಂಭಗೊಳ್ಳುವುದು. ಅದಕ್ಕೂ ನಾನೇ ಆಗಮಿಸಿ ಚಾಲನೆ ನೀಡುತ್ತೇನೆ ಎಂದು ಅವರು ಭರವಸೆ ನೀಡಿದರು.
ರಾಜಕಾರಣ ಎನ್ನುವುದು ಕೇವಲ ರಾಜಕೀಯ ಮಾಡುವುದಲ್ಲ. ನಮ್ಮ ಮೇಲೆ ವಿಶ್ವಾಸವನ್ನಿಟ್ಟು ನಮಗೆ ಮತಗಳನ್ನು ನೀಡಿ ಚುನಾವಣೆಗಳಲ್ಲಿ ಗೆಲ್ಲಿಸಿದ ಮತದಾರರ ಬೇಡಿಕೆಗಳನ್ನು ಅರಿತು ಅವುಗಳನ್ನು ಈಡೇರಿಸುವುದೇ ರಾಜಕಾರಣ. ಇದರಲ್ಲಿ ಶಾಸಕ ನಡಹಳ್ಳಿ ಅವರು ಪ್ರವೀಣರಾಗಿದ್ದಾರೆ. ಹಿಂದೆ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದ ಅವರು ತಮ್ಮದೇ ಪಕ್ಷದ ಸರಕಾರವಿದ್ದರೂ ನಮ್ಮ ಭಾಗಕ್ಕೆ ಅಭಿವೃದ್ಧಿ ಕಾರ್ಯಗಳನ್ನು ಮಾಡದಿದ್ದರೆ ಮುಂಬರುವ ಚುನಾವಣೆಯಲ್ಲಿ ನಮಗೆ ಸೋಲು ನಿಶ್ಚತವಾಗಿರುತ್ತದೆ. ಆದ್ದರಿಂದ ಕೂಡಲೇ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಅಭಿವೃದ್ಧಿ ಪಡಿಸಿ ಎಂದು ತಮ್ಮ ಪಕ್ಷದ ವಿರುದ್ಧವೇ ಧ್ವನಿ ಎತ್ತಿದ್ದೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಸರಕಾರ ರಚಿಗೊಂಡು ಬಜೇಟ್ ಬರುತ್ತಿದ್ದಂತೆಯೇ ರಾಜ್ಯದಲ್ಲಿ ಕೋರಾನಾ ಹೆಮ್ಮಾರಿ ಆವರಿಸಿಕೊಂಡು ಹಣಕಾಸಿನ ತೊಂದರೆಗೆ ಒಳಪಡಿಸಿತು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ಯಾವುದಕ್ಕೂ ಹೆದರದೇ ಕೋರಾನಾ ಸಂದಿಗ್ಧಿ ಪರಿಸ್ಥಿತ ಜೊತೆಗೆ ರಾಜ್ಯದ ಅದರಲ್ಲೂ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಸಾಷ್ಟು ಯೋಜನೆಗಳನ್ನು ತಂದಿದ್ದಾರೆ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಸಾರಿಗೆ ನೌಕರರಿಗೆ ನೀಡುವ ಸಂಭಲದಲ್ಲಿ ಅರ್ಧ ಕಡಿಮೆ ಮಾಡಿ ಕೊರೊನಾ ಪರಿಸ್ಥಿತಿಯನ್ನು ಎದುರಿಸಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ನೌಕರರ ಸಂಭಳಕ್ಕೆ ಯಾವುದೇ ಕತ್ತರಿ ಹಾಕದೇ ಸುಮಾರು 6 ತಿಂಗಳ ಸಂಭಖವನ್ನು ಮುಂಗಡವಾಗಿ ತೆಗೆದಿಟ್ಟು ನೌಕರರ ಕ್ಷೇಮಾಭಿವೃದ್ಧಿಗೆ ಸಹಕರಿಸಿದೆ ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ವಿಜಯಪುರ ಜಿಲ್ಲೆಗೆ ಅದರಲ್ಲೂ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಕಳೆದ 30 ವರ್ಷಗಳ ಿತಿಹಾಸದಲ್ಲಿಯೇ ಬಾರದ 20 ಕೋಟಿ ಅಭಿವೃದ್ಧಿ ಹಣವನ್ನು ಮಂಜೂರು ಮಾಡಿಸುವಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರದು ಮಹತ್ವದ ಕೆಲಸವಿದೆ. ಅಲ್ಲದೇ ಕ್ಷೇತ್ರಕ್ಕೆ ನೂತನವಾಗಿ ಬೇಡಿಕೆ ಇಟ್ಟ ಕೆಲವೇ ಗಂಟೆಗಳಲ್ಲಿ ಆರ್.ಟಿ.ಓ. ಕಛೇರಿ ಮಂಜೂರಾತಿ ಮಾಡಿದ್ದು ನನಗೆ ಸಂತಸದ ವಿಷಯವಾಗಿದೆ. ನನ್ನ ಗುರಿ ಕೇವಲ ಅಭಿವೃದ್ಧಿ. ಅಭಿವೃದ್ಧಿ ಆಗುವ ವಿಷಯದಲ್ಲಿ ನಾನು ಯಾವುದೇ ತಾರತಮ್ಯ ಮಾಡುವುದಿಲ್ಲ. ಮುಂಬರುವ ದಿನಗಳಲ್ಲಿ ಮುದ್ದೇಬಿಹಾಳ ಕ್ಷೇತ್ರವನ್ನು ಹಿಂದೆಂದೂ ಆಗದ ಅಭೀವೃದ್ಧಿ ಆಗಲಿವೆ ಎಂದು ಹೇಳಿದರು.
ಇದಕ್ಕೂ ಮುನ್ನ ಪಟ್ಟಣದಲ್ಲಿ ಎಸ್.ಎಫ್.ಸಿ. ಯೋಜನೆಯಡಿಯಲ್ಲಿ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ವೇಧಿಕೆಯಲ್ಲಿ ತಾಲೂಕ ಪಂಚಾಯತ ಅಧ್ಯಕ್ಷೆ ಲಕ್ಷ್ಮೀಬಾಯಿ ಹವಾಲ್ದಾರ, ವಿಜಯಪು ರ ಜಿಲ್ಲಾ ಉಪವಿಭಾಗದೀಯ ಅಧಿಕಾರಿ ಸೋಮಲಿಂಗ ಗೆಣ್ಣೂರ, ತಹಸೀಲ್ದಾರ ಜಿ.ಎಸ್.ಮಳಗಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ,= ಇದ್ದರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುದ್ದೇಬಿಹಾಳ ಮಂಡಲ ಅಧ್ಯಕ್ಷ ಪರಶುರಾಮ ಪವಾರ, ಮುಖಂಡರಾದ ಸೋಮನಗೌಡ ಬಿರಾದಾರ, ಮಲಕೇಂದ್ರರಾಯಗೌಡ ಪಾಟೀಲ, ಶಿವಶಂಕರಗೌಡ ಹಿರೇಗೌಡರ ಸೇರಿದಂತೆ ಇತರರಿದ್ದರು.
Be the first to comment