ರೈತ ವಿರೋಧಿ ಭೂ ಸುಧಾರಣೆ ಕಾಯ್ದೆಗೆ ಧ್ವನಿಯೆತ್ತಲು ರಾಜ್ಯ ಕಾಂಗ್ರೆಸ್ ನಾಯಕರ ಅನುಮತಿಗೆ ಕಾಯುತ್ತಿರುವೆ ಎಂದು ಹಾರಿಕೆ ಉತ್ತರ ನೀಡಿದ ಲಿಂಗಸ್ಗೂರು ಶಾಸಕರು
ರಾಯಚೂರ್ ಜಿಲ್ಲೆಯ ಲಿಂಗಸೂರು ತಾಲೂಕಿನ ಕೃಷ್ಣಾ ಮೇಲ್ದಂಡೆ ಲಿಂಗಸೂರು ಶಾಸಕ ಡಿಎಸ್ ಹುಲಿಗೇರಿ ಬಾಗಿನ ಅರ್ಪಿಸಿದರು
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಲಿಂಗಸೂರು ತಾಲೂಕಿನ ಸಮಸ್ತ ರೈತರಿಗೆ ಬೆಳೆದಂತ ಬೆಳೆಗಳಿಗೆನೀರಿನ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆಂದು ತಿಳಿಸಿದರು
ಕಾಲುವೆ ದುರಸ್ತಿ ಬಗ್ಗೆ ಏನಾದರೂ ತೊಂದರೆ ಇದ್ದರೆ ಕೂಡಲೇ ವಿಷಯವನ್ನು ತಿಳಿಸಿ ಅವರ ಬಿಲ್ ತಡೆದು ಕಾಮಗಾರಿ ಪೂರ್ಣಗೊಳಿಸಲು ತಿಳಿಸುತ್ತೇನೆ ಎಂದರು
ಲಿಂಗಸೂರು ತಾಲೂಕು ಸಂಬಂಧಪಟ್ಟಂತ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಈಗಾಗಲೇ ಹಾಕಿಕೊಂಡಿದ್ದು ಮುಂದಿನ ದಿನಗಳಲ್ಲಿ ಕೆರೆಗಳನ್ನು ತುಂಬಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು
ಭಗವಂತನ ಕೃಪೆಯಿಂದ ನಮ್ಮ ಭಾಗದ ರೈತರಿಗೆ ಸಕಾಲಕ್ಕೆ ಮಳೆಯಾಗಿ ರೈತರಿಗೆ ಹೊಟ್ಟೆ ತುಂಬಿ ಸುವಂತಾಗಿದೆ ಆದಕಾರಣ ಯಾವುದೇ ರೈತರು ತೀರ್ಮಾನಕ್ಕೆ ಬಲಿಯಾಗಬಾರದು ಎಂದು ತಿಳಿಸಿದರು
ಭೂ ಸುಧಾರಣೆ ಕಾಯ್ದೆ ಬಗ್ಗೆ ಕೇಳಿದಾಗ ಸಿ ಎಲ್ ಪಿ ನಾಯಕರ ಜೊತೆ ಚರ್ಚೆ ಮಾಡಿ ವಿಧಾನಸೌಧದಲ್ಲಿ ಧ್ವನಿಯನ್ನು ಎತ್ತುತ್ತೇನೆ ಎಂದರು
ಕಾಲುವೆ ದುರಸ್ತಿ ಬಗ್ಗೆ ಕೇಳಿದಾಗ ಕೋವಿಡ್ 19 ಇರುವುದರಿಂದ ತುಂಬಾ ತೊಂದರೆಯಾಗಿದೆ ಸಂಪೂರ್ಣ ಕಾಮಗಾರಿ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದರು
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ಅಧ್ಯಕ್ಷರು ಭೂಪನಗೌಡ ಕರಡಕಲ್. ಶರಣಪ್ಪ ಮೇಟಿ ಬಸವರಾಜ್ ಗಣೇಕಲ್ ಹೊನ್ನಪ್ಪ ಮೇಟಿ ಅದೇಶ್ ನಾಯಕ್ ಸಿದ್ದನಗೌಡ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು
Be the first to comment