ಮಳೆಯಿಂದ ಕೊಳೆತ ಹತ್ತಿ: ಆತ್ಮಹತ್ಯಗೆ ಶರಣಾದ ರೈತ

ವರದಿ: ರಾಘವೇಂದ್ರ ಮಾಸ್ತರ

ಜಿಲ್ಲಾ ಸುದ್ದಿಗಳು

ಯಾದಗಿರಿ:

ವಡಗೇರಾ : ಸಾಲ ಬಾಧೆ ತಾಳಲಾರದೆ (ಕ್ರಿಮಿನಾಶಕ ವಿಷ)ಸೇವಿಸಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಅನಕಸೂಗೂರು ಗ್ರಾಮದಲ್ಲಿ ನಡೆದಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಇದೇ ಗ್ರಾಮದ ದೇವಪ್ಪ ದೇವದುರ್ಗ (50) ಎಂಬುವರೇ ಆತ್ಮಹತ್ಯೆ ಮಾಡಿಕೊಂಡಿರುವ ರೈತನಾಗಿದ್ದಾನೆ. ಅನಕಸೂಗೂರು ಗ್ರಾಮದ ಸರ್ವೆ ನಂ 50ರಲ್ಲಿ ನಾಲ್ಕು ಎಕರೆ ಜಮೀನು ಹೊಂದಿದ್ದು ಜಮೀನಿನಲ್ಲಿ ಹತ್ತಿ ಬೆಳೆ ಬೆಳೆಯುವುದಕ್ಕೆ ಬೀಜ, ಗೊಬ್ಬರಕ್ಕೆಂದು ವ್ಯವಸಾಯ ಸಹಕಾರ ಸಂಘ (ಅಂಜುಮನ್) ಬ್ಯಾಂಕ್ ನಲ್ಲಿ 1.50.ಲಕ್ಷ ರೂ. ಸಾಲ ಜೊತೆಗೆ ಊರಲ್ಲಿ ಕೂಡ ಅಲ್ಲಲ್ಲಿ 2.50 ಲಕ್ಷ ರೂ. ಕೈಸಾಲ ಮಾಡಿ ಈ ವಷ೯ ಹತ್ತಿ ಬೆಳದಿದ್ದು ವಿಪರೀತ ಮಳೆಯಾಗಿ ಹೊಲದಲ್ಲಿ ನೀರು ನಿಂತಿದ್ದರಿಂದ ಹತ್ತಿ ಬೆಳೆ ಕೊಳೆಯುವ ಸ್ಥಿತಿಗೆ ತಲುಪಿದ್ದರಿಂದ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.



ಬೀಜ-ಗೊಬ್ಬರ ಸಂಸಾರಕ್ಕೆ ಎಂದು ಮಾಡಿದ ಸಾಲ ಹೇಗೆ ತೀರಿಸುವುದು ಹತ್ತಿ ಬೆಳೆ ಸರಿಯಾಗಿ ಬೆಳೆದರೆ ಮಾಡಿದ ಸಾಲ ತಿರಿಸಬೇಕೆಂದುಕೊಂಡಿದ್ದರು
ಇದರಿಂದ ಸಾಲದ ಬಾಧೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಮನನೊಂದು ದೇವಪ್ಪ ತಂದೆ ರಾಜಪ್ಪ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದರು ಎನ್ನಲಾಗಿದೆ.
ತಕ್ಷಣ ಅವರನ್ನು ಕೂಡಲೇ ಶಹಾಪುರ ತಾಲೂಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ರೈತ ಮೃತಪಟ್ಟಿದ್ದಾರೆ ಎಂದು ಮೃತನ ಹೆಂಡತಿ ನಾಗಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯು.ಡಿ.ಆರ್.ನಂ.10 /2020 ಕಲಂ : 174 ಸಿ.ಆರ್. ಪಿ.ಸಿ. ಪ್ರಕಾರ ವಡಗೇರಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.



 

Be the first to comment

Leave a Reply

Your email address will not be published.


*