ಗೆಳೆಯರ ಬಳಗದಿಂದ ಸ್ಯಾನಿಟೈಸರ್ ಸ್ಟ್ಯಾಂಡ್ ಮತ್ತು ಮಾಸ್ಕ ವಿತರಣೆ.

ವರದಿ: ಶರಣಪ್ಪ ಬಾಗಲಕೋಟೆ

ಬಾಗಲಕೋಟೆ : ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದಲ್ಲಿ ಗೆಳೆಯರ ಬಳಗದ ವತಿಯಿಂದ ಕೊರೊನಾ ವಿರುದ್ಧ ಜಾಗೃತಿ ಮೂಡಿಸಿ ಸ್ಯಾನಿಟೈಸರ್ ಸ್ಟ್ಯಾಂಡ್ ಮತ್ತು ಮಾಸ್ಕ್‌ ಗಳನ್ನು ವಿತರಿಸಲಾಯಿತು.ಮೊದಲ ಹಂತವಾಗಿ 60 ವರ್ಷ ಮೇಲ್ಪಟ್ಟು ವಯಸ್ಸಿನವರಿಗೆ,ಎರಡನೆ ಹಂತವಾಗಿ 50 ವರ್ಷ ಮೇಲ್ಪಟ್ಟವರಿಗೆ,‌ಮೂರನೆ ಹಂತದಲ್ಲಿ ಎಲ್ಲ ವಯಸ್ಸಿನವರಿಗೂ ಸೇರಿ ಒಟ್ಟು 1000 ಮಾಸ್ಕ ವಿತರಣೆ ಮಾಡಲಾಯಿತು.ಗ್ರಾಮ ಪಂಚಾಯತಿ, ಆಸ್ಪತ್ರೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹೀಗೆ ಒಟ್ಟು ಮೂರು ಸ್ಯಾನಿಟೈಸರ್ ಸ್ಟ್ಯಾಂಡಗಳನ್ನು ವಿತರಿಸಲಾಯಿತು.

ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವೈದ್ಯರಾದ ಮಲ್ಲಿಕಾರ್ಜುನ ರವರು ಮಾತನಾಡಿ ಪಾಸಿಟಿವ್‌ ಪ್ರಕರಣಗಳು ಕಂಡುಬಂದಿಲ್ಲ ಎಂಬ ನಿರ್ಲಕ್ಷ್ಯ ಸಲ್ಲದು. ಪ್ರತಿಯೊಬ್ಬರೂ ಹೊರಗಡೆ ಸಂಚರಿಸುವಾಗ ಮಾಸ್ಕನ್ನು ಕಡ್ಡಾಯ ವಾಗಿ ಧರಿಸಿ ಹಾಗು ಸಾನಿಟೈಸರ್ ಬಳಕೆ ಮಾಡಿ ಕೈಗಳನ್ನು ಸ್ವಚ್ಛಗೊಳಿಸಿ ಕೊಂಡರೆ ಸಾಂಕ್ರಾಮಿಕ ರೋಗಗಳಿಂದ ಮುಕ್ತರಾಗಬಹುದು. ಅಲ್ಲದೆ ಮಕ್ಕಳು, ವಯೊವೃದ್ದರು, ಗರ್ಭಿಣಿಯರು ಮನೆಯಲ್ಲಿದ್ದು ಕೊರೊನಾವನ್ನು ನಿಯಂತ್ರಿಸಲು ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಎಸ್.ಎಂ. ಬೆಲ್ಲದ ನಿವೃತ್ತ ಶಿಕ್ಷಕರು, ಅಪ್ಪಸಾಹೇಬ ನಾಡಗೌಡರ, ಶಂಕ್ರಪ್ಪ ಮಾದನಶೆಟ್ಟಿ,ಸಂಗಪ್ಪ ಹೂಗಾರ, ಮೈಲಾರಪ್ಪ ಕೊಪ್ಪದ,ಮಲ್ಲಪ್ಪ ಹೆರೂರ, ನೀಲಪ್ಪ ಪರೂತಿ, ನಿರಂಜನ ಸೊಬರದ, ವಜಿರಪ್ಪ ಪೂಜಾರ,ಮುತ್ತು ನಾಡಗೌಡರ ಇತರೆ ಹಿರಿಯರು ಬಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಎಲ್ಲ ಹಿರಿಯರು ಮಾತನಾಡಿ ಜಾಗೃತಿ ವಹಿಸಿಕೊಳ್ಳಲು ತಿಳಿಸಿದರು. ಬಸಪ್ಪ ಕುಂಚಗನೂರ, ನಬಿಸಾಬ ನದಾಫ, ಗೌಡಪ್ಪ ಕೊಪ್ಪದ ಮುತುವರ್ಜಿ ವಹಿಸಿ ಸಂಘದ ಅಧ್ಯಕ್ಷರಾದ ಡಾ.ಬಿ.ಡಿ.ಜೋಷಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು ಬಾಗವಹಿಸಿದ್ದರು. ಅಧ್ಯಕ್ಷತೆಯನ್ನು ಬಾಳಾಸಾಹೇಬ ನಾಡಗೌಡರ ವಹಿಸಿದ್ದರು, ಎಂ.ಆರ್.ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.

Be the first to comment

Leave a Reply

Your email address will not be published.


*