ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಬಿಎಸ್ ಪಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಪರಶುರಾಮ ದೊಡಮನಿ ಒತ್ತಾಯ.ಯಾದಗಿರಿ:ಜಿಲ್ಲೆಯ ನೂತನ ಹುಣಸಗಿ ತಾಲೂಕಿನ ಅಗತೀರ್ಥ ಎಂಬ ಗ್ರಾಮದಲ್ಲಿ ದಿನಾಂಕ 23/05/2019 ರಂದು ರಾತ್ರಿ 8:00 ಗಂಟೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಒಟ್ಟು 14 ಮನೆಗಳು ಸಂಪೂರ್ಣ ಬಿದ್ದು ಅಪಾರ ಪ್ರಮಾಣದ ನಷ್ಟವಾಗಿದ್ದು, ಈ ಸುದ್ದಿ ರಾಜ್ಯಾದ್ಯಂತ ಹೆಸರಾಂತ ಉದಯವಾಣಿ ದಿನ ಪತ್ರಿಕೆಯಲ್ಲಿ ಪ್ರಕಟವಾಗಿರುತ್ತು.
ಈ ಸಂದರ್ಭದಲ್ಲಿ ಹುಣಸಗಿ ತಹಶಿಲ್ದಾರರು ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ವರದಿ ಮಾಡಿ ಪರಿಹಾರ ನೀಡಲು ಎಂದು ಸುರಪುರ ತಹಶಿಲ್ದಾರರಿಗೆ ಕಳಿಸಿಕೊಟ್ಟಿದ್ದರು. ಆದರೆ ಆಗಿನ ತಹಶಿಲ್ದಾರರಾದ ಸುರೇಶ್ ಅಂಕಲಗಿ ಅವರು 3-4 ತಿಂಗಳುಗಳ ಕಾಲ ಹರಣ ಮಾಡಿ ಕುಂಟು ನೇಪ ಹೇಳಿ ನಿರಾಶ್ರಿತರಿಗೆ ನೋವುಂಟು ಮಾಡಿರುತ್ತಾರೆ.
ನಾವು ಕಚ್ಚಾ ಮನೆಗೆ ಅಂದರೆ ಮಣ್ಣಿನ (ಜೆಂತಿ) ಮನೆಗಳಿಗೆ ಪರಿಹಾರ ಕೊಟ್ಟಿದ್ದೇವೆ ಟಿನ್ ಶೆಡ್ ಮನೆಗೆ ಕೊಟ್ಟಿಲ್ಲ ಎಂದು ಹೇಳಿರುತ್ತಾರೆ.
ನಿರಾಶ್ರಿತರು ಪರಿಹಾರ ಸಿಗಬಹುದು ಎಂದೂ ಕಛೇರಿಗಯಿಂದ ಕಛೇರಿಗೆ ಸುಮಾರು ಭಾರಿ ಅಲೆದಾಡಿ ಸಾಕಷ್ಟು ಹಣವನ್ನು ವೆಚ್ಚ ಮಾಡಿಕೊಂಡಿರುತ್ತಾರೆ. ನಿರಾಶ್ರಿತರು ಕಾರ್ಯಾಲಯಕ್ಕೆ ಬಂದಾಗ ಡಿಸಿ ಸಾಹೇಬರಿಗೆ ಕೇಳಿ ಕೊಡ್ತೀನಿ, ಸಾಹೇಬರಿಗೆ ಲೆಟರ್ ಬರೆದಿದ್ದೀನಿ ಕಳಿಸಬೇಕು ಎಂದು ಲೇಟರ್ ತೋರಿಸಿ ತೊರಿಸಿ ಕಳಿಸಿರುತ್ತಾರೆ.
ಆದರೆ ಅನಾವಶ್ಯಕವಾಗಿ ಅಂದಿನ ತಹಶೀಲ್ದಾರ್ ಸರೇಶ ಅಂಕಲಗಿ ಅವರು ಪರಿಹಾರ ಕೊಡದೆ ಬೇರೆಡೆಗೆ ವರ್ಗಾವಣೆಯಾಗಿರುತ್ತಾರೆ.
ಇದೆ ಸಂದರ್ಭದಲ್ಲಿ ಹೊಸದಾಗಿ ಆಗಮಿಸಿದ ತಹಶಿಲ್ದಾರರು ನಿಂಗಣ್ಣ ಬಿರಾದಾರ ಅವರು ಮಾನ್ಯ ಶ್ರೀ ಸುರೇಶ ಅಂಕಲಗಿ ಅವರು ಬರೆದಿಟ್ಟಿರುವ ಲೆಟರ್
ಜಿಲ್ಲಾಧಿಕಾರಿಗಳಿಗೆ ತಹಶಿಲ್ದಾರ ಕಾರ್ಯಾಲಯ ಸುರಪುರದಿಂದ ಮಾಹಿತಿಯನ್ನು
*ಟಿನ್ ಮನೆಗಳಿಗೆ ಪರಿಹಾರ ಕೊಡುಬಹುದೆ..?*
ಎಂಬುವುದರ ಬಗ್ಗೆ ಮಾಹಿತಿ ಕೇಳಿರುತ್ತಾರೆ ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು SDRF ಹಾಗೂ NDRF ಮಾರ್ಗ ಸೂಚಿಗಳ ಅನುಸಾರವಾಗಿ ನಿಮ್ಮ ಹಂತದಲ್ಲಿ ಸೂಕ್ತ ಕ್ರಮ ಕೈಗೊಳ್ಳಿ ಎಂದೂ ತಿಳಿಸಿರುತ್ತಾರೆ.
ಆದರೆ ಮಾನ್ಯ ಜಿಲ್ಲಾ ಅಧಿಕಾರಗಳ ಆದೇಶ 13/02/2020 ರಂದು ತಹಶಿಲ್ದಾರ ಕಾರ್ಯಾಲಯ ಸುರಪುರ ಗೆ ಬಂದು ತಲುಪಿರುತ್ತೆ. ನಿರಾಶ್ರಿತರು ಮತ್ತೆ ಬಂದು ಕೇಳಿದರು ಸಹ ನಾಳೆ ಬನ್ನಿ ನಾಡಿದ್ದು ಬನ್ನಿ ಅಂತ ಇವರು ಸಹ 3 ತಿಂಗಳು ಕುಂಟು ನೇಪ ಹೇಳಿ ಕಳಿರುತ್ತಾರೆ, ಆದರೂ ಬೇಸರ ಪಡದೆ ನಿರಾಶ್ರಿತರು ಮತ್ತೆ ಬಂದು ಕೇಳಿದಾಗ ಕೋನೆಗೆ ನಿಮಗೆ ಪರಿಹಾರದ ಮೊತ್ತ 3200 ರೂ ಮಾತ್ರ ಕೊಡಲಾಗುತ್ತೆ. ನೀವು ಕೇಳಿದ 70000-80000 ಸಾವಿರ ಹೆಚ್ಚಿನ ಪರಿಹಾರ ಕೊಡುವುದಕ್ಕೆ ಆಗಲ್ಲ ಅಂತ ಹೇಳಿರುತ್ತಾರೆ.
ತಹಸಿಲ್ದಾರ ಸಾಹೇಬರಿಗೆ ನಿರಾಶ್ರಿತರು ಎಷ್ಟೇ ಬೇಡಿಕೊಂಡರು ಸಹ ಪರಿಹಾರ ನೀಡಿರುವುದಿಲ್ಲ. ಒಂದು ವರ್ಷ ಕಳೆದರೂ ಮತ್ತೆ ಸ್ಥಳ ಪರಿಶೀಲನೆ ಮಾಡುತ್ತೇನೆ, ಸರಿಯಾಗಿ ಇದ್ದರೆ ಪರಿಹಾರ ಸಿಗಲ್ಲ ಎಂದು ಹೇಳಿ ಕಳಿಸಿರುತ್ತಾರೆ.
ಮನೆಗಳೆಲ್ಲ ಬಿದ್ದು ಒಂದು ವರ್ಷ ಕಳೆದಿರುತ್ತೆ ತಮಗೆ ಕೈಲಾದಷ್ಟು ರೀಪೆರಿ ಮಾಡಿಕೊಂಡು ಜನ ಜೀವನ ನಡೆಸುತ್ತಿದ್ದು ಮತ್ತೆ ಮರು ಪರಿಶೀಲನೆ ಮಾಡುವುದು ಅದೆಷ್ಟು ಸರಿ.. ಹೀಗೆ ಮಾಡುವುದು ಖಂಡನಿಯ. ಬಡ ಕುಟುಂಬಗಳಿಗೆ ಸ್ಪಂದಿಸದ ಇಂತ ಅಧಿಕಾರಿಗಳ ಮೇಲೆ ದಿಟ್ಟ ಕ್ರಮ ಕೈಗೊಳ್ಳಬೇಕು.
➡️ ಪಕ್ಕಾ ಮನೆಯೆಲ್ಲಿ ಆರ್ಸಿಸ್ ಮನೆಗಳು ಬರುತ್ತವೆ.
➡️ ಕಚ್ಚಾ ಮನೆಗಳೆಂದರೆ ಜಂತಿ ನಮೆ, ಗೊಡೆ ಕಟ್ಟಿ ಟಿನ್ ಹಾಕಿರುವ ಮನೆಗಳು, ಮತ್ತು ಶೆಡ್ ಗಳು, ಗುಡಿಸಲುಗಳು ಇವು ಕಚ್ಚಾ ಮನೆಗೆ ಪರಿವರ್ತನೆಯಾಗುತ್ತವೆ.
*SDRF/NDRF ಸೂಚನೆಗಳ ಪ್ರಕಾರ*
*9.* *HOUSING*
➡️ ಪಕ್ಕಾ ಮನೆಗೆ 1,01,900 ರೂಗಳು ಒಂದು ಮನೆಗೆ ಪರಿಹಾರ ನಿಡಲಾಗುತ್ತದೆ.
➡️ ಕಚ್ಚಾ ಮನೆ ಪೂರ್ಣ ಪ್ರಮಾಣದಲ್ಲಿ ನಷ್ಟವಾದರೆ 95,100 ರೂಗಳು ಪರಿಹಾರ ನಿಡಲಾಗುತ್ತೆ.
➡️ ಕಚ್ಚಾ ಮನೆಗಳು ಅಲ್ಪ ಪ್ರಮಾಣದಲ್ಲಿ ನಷ್ಟವಾದರೆ 5,200 ರೂ ಹಾಗೂ 3,200 ರೂಗಳು ನೀಡಲಾಗುತ್ತದೆ.
ಈ ಮಾರ್ಗ ಸೂಚಿ ಪ್ರಕಾರ 14 ಮನೆಗಳು ಪೂರ್ತಿ ಪ್ರಾಮಾಣದಲ್ಲಿ ನಷ್ಟವಾಗಿದ್ದು ಮತ್ತು ಅವು ಎಲ್ಲವೂ ಕಚ್ಚಾ ಮನೆಗಳಾಗಿವೆ.
ಅದಕ್ಕಾಗಿ ನಿರಾಶ್ರಿತರಿಗೆ 95,100 ರೂಗಳವರೆಗೆ ಪರಿಹಾರವನ್ನು ಸ್ವತಃ ತಹಶಿಲ್ದಾರವರೆ ನೀಡುವಂತ ಅಧಿಕಾರವಿರುತ್ತದೆ.
ಈ ನಿರಾಶ್ರಿತರಿಗೆ ತಾಲೂಕು ಅಧಿಕಾರಿಗಳು ಒಂದು ವರ್ಷದವರಿಗೆ ಕಾಯಿಸಿ ಸತಾಯಿಸುತ್ತಿದ್ದಾರೆ ಇದನ್ನು ಬಹುಜನ ಸಮಾಜ ಪಾರ್ಟಿ ಖಂಡಿಸುತ್ತದೆ.
ಮಾನ್ಯ ಜಿಲ್ಲಾಧಿಕಾರಿಗಳು ಇಂತ ಬೆಜವಾಬ್ದಾರಿ ಅಧಿಕಾರಿಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಜರಗಿಸಬೇಕು. ಮತ್ತು 14 ಮನೆಗಳು ಸಂಪೂರ್ಣವಾಗಿ ನಷ್ಟವಾಗಿರುವುದರಿಂದ ಕನಿಷ್ಟ 75,000-80,000 ರೂಗಳವರೆಗೆ ಒಂದು ವಾರದಲ್ಲಿ ಪರಿಹಾರ ನೀಡಬೇಕು ಎಂದು ಬಹುಜನ ಸಮಾಜ ಪಾರ್ಟಿ ಆಗ್ರಹಿಸುತ್ತೆ.
ಒಂದು ವೇಳೆ ಒಂದು ವಾರದಲ್ಲಿ ಪರಿಹಾರ ನೀಡದೇ ಹೋದರೆ ನಿರಾಶ್ರಿತರ ಪರ ನಿಂತು ಉಗ್ರವಾಗಿ ಬಹುಜನ ಸಮಾಜ ಪಾರ್ಟಿ ತಹಶೀಲ್ದಾರ್ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಪರಶುರಾಮ ದೊಡಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
Be the first to comment