ಬಾಗಲಕೋಟೆ: ಜಿಲ್ಲೆಯಲ್ಲಿ ಮತ್ತೆ 4 ಜನರಿಗೆ ಕೋವಿಡ್ ಸೋಂಕು ಇರುವುದು ರವಿವಾರ ದೃಡಪಟ್ಟಿದ್ದು, ಸೋಂಕಿತರ ಸಂಖ್ಯೆ 230ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.ಸೋಂಕಿತ ವ್ಯಕ್ತಿ ಪಿ-18261 ಪ್ರಾಥಮಿಕ ಸಂಪರ್ಕ ಹೊಂದಿದ ಕಲಾದಗಿಯ 10 ವರ್ಷದ ಬಾಲಕಿ ಪಿ-23139 (ಬಿಜಿಕೆ-227), ಸೋಂಕಿತ ಪಿ-10642 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಬಾಗಲಕೋಟೆ ತಾಲೂಕಿನ ಮುಡಪಲಜೀವಿ ಗ್ರಾಮದ 38 ವರ್ಷದ ಮಹಿಳೆ ಪಿ-23140 (ಬಿಜಿಕೆ-228), ಇನ್ನು ಬಾದಾಮಿಯ ಮಂಜುನಾಥ ನಗರದ ಸೋಂಕಿತ ಪಿ-9153 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ 10 ವರ್ಷದ ಬಾಲಕ ಪಿ-23141 (ಬಿಜಿಕೆ-229), 3 ವರ್ಷದ ಬಾಲಕನಿಗೆ ಪಿ-23142 (ಬಿಜಿಕೆ-230) ಕೊರೊನಾ ಸೋಂಕು ಇರುವುದು ದೃಡಪಟ್ಟಿದೆ.
ಜಿಲ್ಲೆಯಿಂದ ಜೂನ್ 20 ರಂದು ಕಳುಹಿಸಲಾದ 62 ಸ್ಯಾಂಪಲ್‍ಗಳ ಪೈಕಿ 30, ಜೂನ್ 24 ರಂದು ಕಳುಹಿಸಿದ 152 ಸ್ಯಾಂಪಲ್, ಜೂ.29 ರಂದು ಕಳುಹಿಸಿದ 226 ಹಾಗೂ ಜುಲೈ 1 ರಂದು ಕಳುಹಿಸಿದ ಒಟ್ಟು 320 ಪೈಕಿ 295 ಸ್ಯಾಂಪಲ್‍ಗಳ ವರದಿ ನೆಗಟಿವ್ ಬಂದಿರುತ್ತವೆ.
ಜುಲೈ 4 ರಂದು ಹೊಸದಾಗಿ 357 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ರವಾನಿಸಲಾಗಿದ್ದು, ಇನ್ನು 1414 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.
ಪ್ರತ್ಯೇಕವಾಗಿ 1082 ಜನ ನಿಗಾದಲ್ಲಿದ್ದಾರೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 14491 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 12764 ನೆಗಟಿವ್ ಪ್ರಕರಣ, 230 ಪಾಜಿಟಿವ್ ಪ್ರಕರಣ ಹಾಗೂ 5 ಜನ ಮೃತ ಪ್ರಕರಣ ವರದಿಯಾಗಿರುತ್ತದೆ. ಕೋವಿಡ್-19 ದಿಂದ ಒಟ್ಟು 137 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 88 ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 21 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ ಆಗಿರುತ್ತವೆ. ಕಂಟೈನ್ಮೆಂಟ್ ಝೋನ್ 25 ಇದ್ದು, ಇನ್‍ಸ್ಟಿಟ್ಯೂಶನ್ ಕ್ವಾಂರಂಟೈನ್‍ನಲ್ಲಿದ್ದ 3764 ಜನರನ್ನು ಬಿಡುಗಡೆ ಮಾಡಲಾಗಿದೆ. ಬೇರೆ ಬೇರೆ ರಾಜ್ಯಗಳಿಂದ ಜುಲೈ 4 ರಂದು ಒಟ್ಟು 15 ಜನ ಜಿಲ್ಲೆಗೆ ಆಗಮಿಸಿದ್ದಾರೆ. ಈ ಪೈಕಿ ಮಹಾರಾಷ್ಟ್ರದಿಂದ ಆಗಮಿಸಿದ 3 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಉಳಿದ 12 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹಳೆಯ ಬಾಗಲಕೋಟೆಯ ಶಿರೂರ ಅಗಸಿ ರೋಡ, ತೆಂಗಿನಮಠದ ಹತ್ತಿರ ಇರುವ ನಾಯಕ ಕ್ಲಿನಿಕ್‍ನ ವೈದ್ಯರಿಗೆ ಕೊರೊನಾ ಪಾಜಿಟಿವ್ ದೃಡಪಟ್ಟಿದ್ದು, ಅವರ ಸಂಪರ್ಕಕ್ಕೆ ಬಂದಿರುವವರು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳಲು ಬಾಗಲಕೋಟೆ ಡಿಸಿ ಕ್ಯಾಪ್ಟನ್ ರಾಜೇಂದ್ರ ಸೂಚನೆ ನೀಡಿದ್ದಾರೆ.
Be the first to comment