ಪ್ರತಿ ತಾಲೂಕಿಗೆ ಪ್ಲೈಯಿಂಗ್ ಸ್ಕ್ವಾಡ್‍ಗಳ ನೇಮಕ: ಜಿಲ್ಲೆಯಾದ್ಯಂತ ಸಂಜೆ 6 ರಿಂದ ಬೆಳಿಗ್ಗೆ 6 ವರೆಗೆ ಕಪ್ರ್ಯೂ

ಬಾಗಲಕೋಟೆ: ಜಿಲ್ಲೆಯಾದ್ಯಂತ ರಿಂದ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಕಪ್ರ್ಯೂ ಜಾರಿಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ಗರದ ನೂತನ ಪ್ರವಾಸಿ ಮಂದರದಲ್ಲಿ ಕರೆಯಲಾಗಿದ್ದ ಪತ್ರಿಕಾಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಬಜಿ, ಚೋಡ, ತಂಪು ಪಾನಿಯ ಹಾಗೂ ಹಣ್ಣಿನ ರಸ ಅಂಗಡಿಗಳಿಂದ ಅಪಾಯವಿದ್ದು, ಈ ಹಿನ್ನಲೆಯಲ್ಲಿ ಸಂಜೆ 6 ರಿಂದ ಬೆಳಿಗ್ಗೆ 6 ವರೆಗೆ ಕಪ್ರ್ಯೂ ಜಾರಿ ಮಾಡಲಾಗಿರುವುದಾಗಿ ತಿಳಿಸಿದರು. ಅಲ್ಲದೇ ಜಿಲ್ಲೆಯಲ್ಲಿರುವ 9 ತಾಲೂಕಾ ಕೇಂದ್ರಗಳಿಗೆ ಪ್ಲೈಯಿಂಗ್ ಸ್ಕ್ವಾಡ್‍ಗಳನ್ನು ನೇಮಕಮಾಡಲಾಗಿದ್ದು, ಅವರು ದಿನದಿತ್ಯ ಮಾಕೇಟ್, ಹೋಟಲ್, ಖರೀದಿ ಸ್ಥಳಗಳಲ್ಲಿ ನಿಗಾವಹಿಸಲಿದ್ದ

ಜಿಲ್ಲೆಯಲ್ಲಿ ಈ ವರೆಗೆ 12587 ವ್ಯಕ್ತಿಗಳ ಸ್ಯಾಂಪಲ್ ಪರೀಕ್ಷಿಸಲಾಗಿದ್ದು, ಈ ಪೈಕಿ 11089 ನೆಗಟಿವ್, 184 ಪಾಜಿಟಿವ್ ಪ್ರಕರಣ ವರದಿಯಾಗಿವೆ. ಜಿಲ್ಲೆಯಿಂದ ಕಳುಹಿಸಲಾದ 1245 ಸ್ಯಾಂಪಲ್‍ಗಳ ವರದಿ ಬರಬೇಕಾಗಿದೆ. 117 ಜನ ಕೋವಿಡ್‍ಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. 62 ಮಾತ್ರ ಸಕ್ರಿಯ ಪ್ರಕರಣಗಳು ಇವೆ. 14 ಫೀವರ್ ಕ್ಲಿನಿಕಗಳ ಮೂಲಕ 16,825 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದೆ. 52 ಸಾಂಸ್ಥಿಕ ಕ್ವಾರಂಟೈನ್‍ಗಳಲ್ಲಿ 540 ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸೋಂಕಿತ ವ್ಯಕ್ತಿಗಳು ವಾಸಿಸುವ ಪ್ರದೇಶಗಳನ್ನು ಕಂಟೈನ್‍ಮೆಂಟ್ ಝೋನ್‍ಗಳೆಂದು ಘೋಷಿಸಲಾಗಿದ್ದು, ಸದ್ಯ 18 ಕಂಟೈನ್‍ಮೆಂಟ್ ಝೋನ್‍ಗಳಿವೆ. ನಿಷೇಧಿತ ಪ್ರದೇಶದಲ್ಲಿರುವ ಜನರಿಗೆ ಆಹಾರಧಾನ್ಯ, ತರಕಾರಿ, ಹಣ್ಣು ಹಂಪಲ, ಔಷಧ ಹಾಗೂ ಇನ್ನೀತರ ಮೂಲಭೂತ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ಪೂರೈಸಲಾಗುತ್ತಿದೆ. ಬೇರೆ ರಾಜ್ಯದಿಂದ ಬಸ್‍ಗಳ ಮೂಲಕ 2833, ರೈಲಿನ ಮೂಲಕ 446 ಜನ ಬಂದಿದ್ದು, ಅವರನ್ನು ಸಾಂಸ್ಥಿಕ ಮತ್ತು ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದರು.

ಜಿಲ್ಲೆಯಿಂದ ವಿವಿಧ ರಾಜ್ಯಗಳಿಗೆ 67 ವಾಹನಗಳ ಮೂಲಕ ತೆರಳಲು ಒಟ್ಟು 859 ವಲಸೆ ಕಾರ್ಮಿಕರಿಗೆ ಅನುಮತಿ ನೀಡಲಾಗಿದೆ. ಈ ಪೈಕಿ ಉತ್ತರ ಪ್ರದೇಶದಿಂದ 812, ಜಾರ್ಖಂಡದಿಂದ 204, ಬಿಹಾರ 201, ಮಧ್ಯಪ್ರದೇಶ 5 ಹಾಗೂ ಪಶ್ವಿಮ ಬಂಗಾಳ ರಾಜ್ಯಕ್ಕೆ 17 ಜನರನ್ನು ರೈಲಿನ ಮೂಲಕ ಕಳುಹಿಸಲಾಗಿದೆ. ಬೇರ ರಾಜ್ಯಗಳಿಂದ ಆಗಮಿಸಿದ ವಲಸಿಗರ ಸ್ವೀಕೃತಿ ಕೇಂದ್ರವನ್ನು ನವನಗರದ ಬಸ್ ನಿಲ್ದಾಣದಲ್ಲಿ ಸ್ಥಾಪಿಸಲಾಗಿದ್ದು, ದಿನ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದೆ ಎಂದರು.

ಸರಕಾರ ಕಡ್ಡಾಯಗೊಳಿಸಿದ ಕ್ವಾರಂಟೈನ್ ವಾಚ್ ಆಪ್, ಕಾಂಟ್ಯಾಕ್ಟ ಟ್ರೇಸಿಂಗ್ ಆಪ್, ಹೆಲ್ತ ವಾಚ್ ಮತ್ತು ಕಂಟೈನ್‍ಮೆಂಟ್ ವಾಚ್ ಆಪ್‍ಗಳ ನಿರ್ವಹಣೆಗಾಗಿ ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಿ ಮಾಹಿತಿಯನ್ನು ಇಂದೀಕರಿಸಲು ಸೂಕ್ತ ಕ್ರಮವಹಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ಗ್ರಾಮ ಮಟ್ಟದಲ್ಲಿ ಗಸ್ತು ಜಾಗೃತಿ ತಂಡವನ್ನು ರಚಿಸಿ ಗ್ರಾಮಗಳಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕೋವಿಡ್‍ಗೆ ನೆರವಿಗೆ ಒಟ್ಟು 1.39 ಕೋಟಿ ರೂ.

ಸಾರ್ವಜನಿಕರಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ 92,17,163-00 ರೂ. ಹಾಗೂ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ 47,13,578-00 ರೂ.ಗಳು ಸೇರಿ ಒಟ್ಟು 1,39,30,741 ರೂ.ಗಳು ಜಮೆಯಾಗಿರುತ್ತದೆ.

Be the first to comment

Leave a Reply

Your email address will not be published.


*